ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ಗದ ದರದಲ್ಲಿ ಕೇಬಲ್ ಸೇವೆ ನೀಡಲಿದೆ ಸರ್ಕಾರ

|
Google Oneindia Kannada News

ಬೆಂಗಳೂರು, ಆ.21 : ಕೇಬಲ್ ಬಿಲ್‌ ದುಬಾರಿ ಎಂದು ಗೊಣಗುವ ಜನರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಲು ಹೊರಟಿದೆ. ಮಾಸಿಕ ಕಡಿಮೆ ಶುಲ್ಕ ಪಾವತಿಸಿ ಕೇಬಲ್‌ ಟೀವಿ ವೀಕ್ಷಿಸಲು ಅನುಕೂಲವಾಗುವಂತೆ, ಸರ್ಕಾರಿ ಕೇಬಲ್‌ ಆಪರೇಟಿಂಗ್‌ ಸಂಸ್ಥೆ ಸ್ಥಾಪಿಸಲು ಚಿಂತನೆ ನಡೆಸಿದೆ.

ಬುಧವಾರ ಬೆಂಗಳೂರಿನಲ್ಲಿ ಈ ಕುರಿತು ವಾರ್ತಾ ಸಚಿವ ರೋಷನ್ ಬೇಗ್ ಮಾಹಿತಿ ನೀಡಿದ್ದು, ಸರ್ಕಾರಿ ಕೇಬಲ್‌ ಆಪರೇಟಿಂಗ್‌ ಸಂಸ್ಥೆ ಸ್ಥಾಪಿಸುವ ಕುರಿತು ಚರ್ಚಿಸಲು ಆ. 28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ ಎಂದು ಹೇಳಿದ್ದಾರೆ. [ಹೆಸರುಘಟ್ಟದಲ್ಲಿ ಚಿತ್ರನಗರಿ ನಿರ್ಮಾಣ]

Roshan Baig

ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಸರ್ಕಾರಿ ಕೇಬಲ್‌ ಆಪರೇಟಿಂಗ್‌ ಸಂಸ್ಥೆಯೊಂದನ್ನು ಆರಂಭಿಸುವ ಕುರಿತು ಪ್ರಾಥಮಿಕ ಹಂತದ ಚಿಂತನೆ ಆರಂಭಿಸಲಾಗಿದೆ. ಸಿಎಂ ಬಳಿ ಈ ವಿಷಯದ ಕುರಿತು ಚರ್ಚಿಸಿದ ಬಳಿಕ, ಚಿತ್ರೋದ್ಯಮ, ಟಿವಿ ಚಾನೆಲ್‌ಗ‌ಳ ಪ್ರತಿನಿಧಿಗಳು ಸೇರಿದಂತೆ ಎಲ್ಲರ ಅಭಿಪ್ರಾಯಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಕೇಬಲ್‌ ಆಪರೇಟರ್‌ಗಳು ಜನರಿಂದ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ ಮತ್ತು ಚಾನೆಲ್‌ಗ‌ಳ ಮೇಲೆ ಶೋಷಣೆ ನಡೆಸುತ್ತಿದ್ದಾರೆ ಎಂದು ಹೇಳಿದ ಸಚಿವರು, ಸರ್ಕಾರಿ ಕೇಬಲ್‌ ಆಪರೇಟರ್‌ ಸಂಸ್ಥೆಯನ್ನು ಆರಂಭಿಸಲು ಅನುಸರಿಸಬೇಕಾದ ಮಾನದಂಡಗಳು ಏನಾಗಬೇಕು? ಎಂಬ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಡಿಮೆ ದರದಲ್ಲಿ ಊಟ : ಸರ್ಕಾರಿ ಕಾಲೇಜುಗಳಲ್ಲಿ ಕಡಿಮೆ ದರದಲ್ಲಿ ಊಟ ಒದಗಿಸುವ ಯೋಚನೆ ಇದೆ ಎಂದು ಸಚಿವ ರೋಷನ್ ಬೇಗ್ ಹೇಳಿದರು. ಈ ಯೋಜನೆ ಕುರಿತು ಇಸ್ಕಾನ್‌ ಸಂಸ್ಥೆಯೊಂದಿಗೆ ಪ್ರಾಥಮಿಕ ಹಂತದ ಮಾತುಕತೆ ಪೂರ್ಣಗೊಂಡಿದೆ ಎಂದು ತಿಳಿಸಿದರು. [ಸರ್ಕಾರಿ ಕಾಲೇಜುಗಳಲ್ಲಿ 5ರೂ.ಗೆ ಬಿಸಿಯೂಟ]

ಸರ್ಕಾರಿ ಕಾಲೇಜುಗಳಿಗೆ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಇವರಿಗೆ 5 ರೂ. ದರದಲ್ಲಿ ಊಟ ಒದಗಿಸಬೇಕು ಎಂಬುದು ನಮ್ಮ ಕನಸಾಗಿದೆ. ಇಸ್ಕಾನ್‌ ಸಂಸ್ಥೆಯು 15 ರೂ.ಗೆ ಒಂದು ಪ್ಲೇಟ್‌ ಊಟವನ್ನು ಒದಗಿಸಲು ಸಿದ್ಧವಿದೆ. ಇದರಲ್ಲಿ ವಿದ್ಯಾರ್ಥಿಗಳು ಐದು ರೂ. ನೀಡಿದರೆ ಉಳಿದ 10 ರೂ. ಅನ್ನು ಸರ್ಕಾರ ಸಬ್ಸಿಡಿ ರೂಪದಲ್ಲಿ ನೀಡಲಿ ಚಿಂತನೆ ನಡೆಸಿದೆ ಎಂದರು.

English summary
Karnataka Information and Public Relations Minister Roshan Baig said, state government has initiated steps to launch a State-owned cable television network to free the people from the menace of private cable television network operators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X