ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಂ ರೌಂಡಪ್: ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ

By Mahesh
|
Google Oneindia Kannada News

ಬೆಂಗಳೂರು, ಏ.23: ಶಾಲೆಯೊಂದಕ್ಕೆ ವಿದ್ಯುತ್ ಸಂಪರ್ಕ ಒದಗಿಸಲು 50 ಸಾವಿರ ರೂ.ಲಂಚ ಸ್ವೀಕಾರ ಮಾಡಿದ ಆರೋಪದ ಮೇಲೆ ಬೊಮ್ಮನಹಳ್ಳಿ ಬಿಬಿಎಂಪಿ ಸಹಾಯಕ ಇಂಜಿನಿಯರ್(ಎಇ) ಮಂಗಳವಾರ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದ ಸಹಾಯಕ ಇಂಜಿನಿಯರ್ ವನರಾಜು ಎಂಬುವವರನ್ನು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ. ಶಾಲೆಯೊಂದಕ್ಕೆ ರಸ್ತೆ ಅಗೆದು ವಿದ್ಯುತ್ ಸಂಪರ್ಕ ಕಲ್ಪಿಸಲು ವನರಾಜು 50 ಸಾವಿರ ರೂ.ಲಂಚದ ಬೇಡಿಕೆ ಇಟ್ಟಿದ್ದರು. ಈ ಪ್ರಕರಣ ಸಂಬಂಧ ವಿದ್ಯುತ್ ಗುತ್ತಿಗೆದಾರ ವೇಣು ಗೋಪಾಲ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಮಂಗಳವಾರ ವನರಾಜ್ ಅವರು ಹಣ ಸ್ವೀಕಾರ ಮಾಡುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಹೆಚ್ಚುವರಿ ಡಿಜಿಪಿ ಸತ್ಯನಾರಾಯಣರಾವ್ ತಿಳಿಸಿದ್ದಾರೆ.ಉಡುಪಿ, ಕೋಲಾರ, ಬೆಂಗಳೂರು, ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ಸಂಗ್ರಹ ಮುಂದಿದೆ ಓದಿ..

ಚಿಂತಾಮಣಿ ನಗರದ ಯುವಕನ ಸಾವು

ಚಿಂತಾಮಣಿ ನಗರದ ಯುವಕನ ಸಾವು

ಚಿಂತಾಮಣಿ ನಗರದ ಪದ್ಮಶಾಲಿ ಕಲ್ಯಾಣ ಮಂಟಪಕ್ಕೆ ಮದುವೆಗಾಗಿ ಆಗಮಿಸಿದ್ದ ಯುವಕನೊಬ್ಬ ವಾಯು ವಿಹಾರಕ್ಕೆಂದು ಸ್ನೇಹಿತರೊಂದಿಗೆ ಸಮೀಪದ ಬೆಟ್ಟಕ್ಕೆ ಹೋಗಿದ್ದಾಗ ಹೆಜ್ಜೇನು ದಾಳಿ ನಡೆಸಿದೆ. ಹೆದರಿದ ಯುವಕನೊಬ್ಬ ಬೆಟ್ಟದಿಂದ ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ಇತ್ತೀಚೆಗೆ ನಡೆದಿದೆ.

ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದ ನಿವಾಸಿ ವಿನಾಯಕ ಎಂಬ 18 ವರ್ಷ ವಯಸ್ಸಿನ ಯುವಕ ತನ್ನ ಇಬ್ಬರು ಸ್ನೇಹಿತರೊಡನೆ ಕಾಡು ಮಲ್ಲೇಶ್ವರಸ್ವಾಮಿ ಬೆಟ್ಟಕ್ಕೆ ತೆರಳಿದ್ದಾಗ ಹೆಜ್ಜೇನು ದಾಳಿ ಮಾಡಿದೆ. ಜೇನು ಕಡಿತದಿಂದ ಪಾರಾಗಲು ಯತ್ನಿಸಿ ಬೆಟ್ಟದಿಂದ ಕೆಳಕ್ಕೆ ಓಡಲು ಆರಂಭಿಸಿದ್ದಾರೆ. ಈ ವೇಳೆ ಆಯತಪ್ಪಿ ಬೆಟ್ಟದಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೆಜ್ಜೇನು ದಾಳಿಗೆ ಸಿಲುಕಿ ಗಾಯಗೊಂಡಿರುವ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 ಹಿರಿಯಡ್ಕ : ಜಾತಿ ನಿಂದನೆ ಪ್ರಕರಣ

ಹಿರಿಯಡ್ಕ : ಜಾತಿ ನಿಂದನೆ ಪ್ರಕರಣ

ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ ಹೊಳೆ ಬಾಗಿಲು ಎಂಬಲ್ಲಿ ಹೊಳೆಯ ಗುಂಡಿಯಲ್ಲಿ ಪಿರ್ಯಾದಿ ರವಿ ನಾಯ್ಕ, 24 ವರ್ಷ, ತಂದೆ: ಲಚ್ಚು ನಾಯ್ಜ, ವಾಸ: ಕರ್ಜೆ ಅಂಚೆ, ಹೊಸೂರು ಗ್ರಾಮ, ಉಡುಪಿ ತಾಲೂಕು ಇವರು ಗಣೇಶ, ಸುಧಾಕರ, ಹರೀಶ, ಉಮೇಶ ಹಾಗೂ ದಿನೇಶ ಎಂಬವರೊಂದಿಗೆ ಬಲೆ ಬೀಸಿ ಮೀನು ಹಿಡಿಯುತ್ತಿರುತ್ತಾರೆ.

ಅಲ್ಲಿಗೆ ಬಂದ ಆರೋಪಿಗಳಾದ ಮಹೇಶ ಶೆಟ್ಟಿ ಹಾಗೂ ದಿನೇಶ್ ಶೆಟ್ಟಿ ಎಂಬವರು, ಇಲ್ಲಿ ಮೀನು ಹಿಡಿಯಬೇಡಿ ಎಂದು ಹೇಳಿ ಅವಾಚ್ಯವಾಗಿ ಬೈದು ದೊಣ್ಣೆಯಿಂದ ಹೊಡೆದು, ಕಲ್ಲಿನ ಮೇಲೆ ದೂಡಿ ಹಾಕಿ, ಕಾಲಿನಿಂದ ತುಳಿದಿದ್ದು, ಈ ಸಮಯ ಗಣೇಶ ಕಂಪ ಎಂಬವರಿಗೂ ಕಾಲಿಗೆ ಪೆಟ್ಟಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 49/2014 ಕಲಂ 324, 323, 506, 392 R/w 34 IPC , 3(1), (X) SC/ST Act 1989 ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಕೋಲಾರದಲ್ಲಿ ಯುವಕನ ಕೊಲೆ

ಕೋಲಾರದಲ್ಲಿ ಯುವಕನ ಕೊಲೆ

ಮುಳಬಾಗಿಲು ಟೌನಿನ ನೂಗಲಬಂಡೆ ಬಳಿ ಇರುವ ಮೆಕ್ಕಾ ಮಸೀದಿ ಸಮೀಪ ಕೃತ್ಯ ಸಂಭವಿಸಿರುತ್ತದೆ. ರೆಹಮತ್ ನಗರದ ವಾಸಿಯಾದ ಸೈಯದ್ ಚಾಂದ್ ಪಾಷ ರವರ ಮಗನಾದ ಇಮ್ರಾನ್ ರವರು ಮನೆಯಲ್ಲಿ ಟೀ ಕುಡಿದು ತನ್ನನ್ನು ಯಾರೋ ಕರೆಯುತ್ತಿದ್ದಾರೆ ಎಂತ ಹೇಳಿ ಮನೆಯಿಂದ ಹೊರಗೆ ಹೋದನು.

ನಂತರ ಸಂಜೆ 6-30 ಗಂಟೆಯಲ್ಲಿ ಮಸೀದಿಯ ಜಮಾತ್ ರವರು ಪಿರ್ಯಾದಿಗೆ ನಿನ್ನ ಮಗ ಮಸೀದಿ ಮುಂಭಾಗದ ಛತ್ರದ ಬಳಿ ಇದ್ದಾನೆ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿ ಎಂತ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಅಲ್ಲಿಗೆ ಹೋಗಿ ನೋಡಲಾಗಿ ಅವರ ಮಗನಾದ ಇಮ್ರಾನ್ ಮೃತ ದೇಹವು ಅಲ್ಲಿ ಬಿದ್ದಿದ್ದು, ಪಿರ್ಯಾದಿಯ ಮಗನಾದ ಇಮ್ರಾನ್ ನನ್ನು ಯಾರೋ ಕೊಲೆ ಮಾಡಿ ಮಸೀದಿ ಬಳಿ ಇರುವ ಫೀಲ್ಡ್ ನಲ್ಲಿ ಮೃತದೇಹವನ್ನು ಬಿಸಾಡಿ ಹೋಗಿರುತ್ತಾರೆ.ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.

ಶಿವಮೊಗ್ಗ, ಸಾಗರದ ಅಪರಾಧ ಸುದ್ದಿಗಳು

ಶಿವಮೊಗ್ಗ, ಸಾಗರದ ಅಪರಾಧ ಸುದ್ದಿಗಳು

ದೊಡ್ಡಪೇಟೆ ಠಾಣೆ ಶಿವಮೊಗ್ಗ; ಅಕಸ್ಮಿಕ ಸಾವು

ಶ್ರೀಮತಿ ಎಂ.ಮಂಗಳ ಕೋಂ ಮಂಜುನಾಥ 40 ವರ್ಷ ವಾಸ:ಹೊಸಂಗಡಿ ಇವರ ಪತಿ ಮೃತ ಮಂಜುನಾಥ 50 ವರ್ಷ ಇವರು ಇವರು ಶಿವಮೊಗ್ಗ ನಗರದ ರಾಮಣ್ಣ ಶೃಷ್ಠಿ ಪಾರ್ಕ ಹಿಂಬಾಗದ ಹೊಳೆಯ ಹತ್ತಿರ ಬಹಿರ್ದೇಸೆಗೆ ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತ ಪಟ್ಟಿರುತ್ತಾರೆ.

ಸಾಗರ ಗ್ರಾಮಾಂತರ ಠಾಣೆ : ಅಕಸ್ಮಿಕ ಸಾವು

ಮೃತ: ಗಿಡ್ಡಪ್ಪ ಬಿನ್ ಈಶ್ವರ ಶೆಟ್ಟಿ 60 ವರ್ಷ ವಾಸ ನೇರಲಮನೆ ಈತನು ಜೇಡಿಹಳ್ಳಿ ತಾವರೆ ಕೆರೆಯಲ್ಲಿ ಮೀನಿ ಹಿಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತ ಪಟ್ಟಿರುತ್ತಾನೆ.

ಕಳ್ಳಂಬೆಳ್ಳ ಮಹಿಳೆಗೆ ಮೇಲೆ ಹಲ್ಲೆ

ಕಳ್ಳಂಬೆಳ್ಳ ಮಹಿಳೆಗೆ ಮೇಲೆ ಹಲ್ಲೆ

ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ಸಂ.92/2014 ಕಲಂ 323,324,354,448,504,506 ರೆ/ವಿ 34 ಐ.ಪಿ.ಸಿ.
ಪಿರ್ಯಾದಿ ಸಿದ್ಧಗಂಗಮ್ಮ ಕೋಂ ರಾಮಲಿಂಗಪ್ಪ. ಬೋರಸಂದ್ರ. ಶಿರಾ ತಾಲ್ಲುಕ್ ರವರು ನೀಡಿದ ದೂರು:

ಈಗ್ಗೆ 15 ವರ್ಷಗಳ ಹಿಂದೆ ನನ್ನನ್ನು ಬೋರಸಂದ್ರ ಗ್ರಾಮದ ಮಾಲಿಂಗಪ್ಪ ರವರ ಮಗ ರಾಮಲಿಂಗಪ್ಪ ರವರಿಗೆ ಕೊಟ್ಟು ಮದುವೆ ಮಾಡಿದ್ದು ಮದುವೆ ಕಾಲದಲ್ಲಿ ನನ್ನ ತಂದೆ ನನಗೆ ಓಲೆ ಸರವನ್ನು ಮಾಡಿಸಿಕೊಟ್ಟಿದ್ದು ನನ್ನ ಮಾವ ಮಾಲಿಂಗಪ್ಪ ನನ್ನ ನಾದಿನಿಗೆ ಓಲೆ ಸರವನ್ನು ಕೊಡು ಎಂತ ಕೇಳಿದ್ದರು.

ಆಗ ನಾನು ನನ್ನ ಗಂಡ ಬೇರೆ ಸಂಸಾರ ಮಾಡಿಕೊಂಡಿದ್ದೆವು. ಇದೇ ವಿಚಾರದಲ್ಲಿ ಮಾಲಿಂಗಪ್ಪ. ಹೊನ್ನಮ್ಮ. ರಾಜಣ್ಣ. ಶೋಭಾ ರವರುಗಳು ನನ್ನ ಮನಗೆ ನುಗ್ಗಿ ಜಗಳ ತೆಗೆದು ಕಲ್ಲಿನಿಂದ ನನ್ನ ಮೂಗಿಗೆ ಹೊಡೆದು ರಕ್ತಗಾಯಪಡಿಸಿ ಸೀರೆ ಹಿಡಿದು ಎಳೆದಾಡಿ ಅಪಮಾನಗೊಳಿಸಿ ನನ್ನ ಗಂಡ ರಾಮಲಿಂಗಪ್ಪನಿಗೆ ಎಲ್ಲರೂ ಕೈಯಿಂದ ಹೊಡೆದು ನಿನ್ನನ್ನು ಜೀವಸಹಿತ ಬಿಡುವುದಿಲ್ಲವೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

English summary
Karnataka Crime news Coverage : Lokayukta police arrested BBMP Assistant engineer Vanaraj while he was taking bribe to provide electricity line to a school in Bommanahalli, Bangalore and Many more crime news from across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X