ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಂ ನ್ಯೂಸ್ ಕವರೇಜ್: ಮಂಗಳೂರು, ಶಿವಮೊಗ್ಗ,ಬಳ್ಳಾರಿ

By Mahesh
|
Google Oneindia Kannada News

ಮಂಗಳೂರು, ಏ.2: ಗೂಡ್ಸ್ ಟೆಂಪೊವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಬಸ್ ನಿಲ್ದಾಣದ ಮೇಲೆ ಉರುಳಿ ಬಿದ್ದಿರುವ ಘಟನೆ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಯ ಮುಂಭಾಗದಲ್ಲಿ ಸಂಭವಿಸಿದೆ. ಬಸ್ ನಿಲ್ದಾಣದಲ್ಲಿ ನಿಂತಿದ್ದ ಇಬ್ಬರು ಟೆಂಪೊದಡಿ ಸಿಲುಕಿ ಮೃತಪಟ್ಟಿದ್ದರೆ, ಮತ್ತಿಬ್ಬರು ಗಂಭೀರವಾಗಿ ಗಾಯ ಗೊಂಡಿದ್ದಾರೆ.

ಮೃತರನ್ನು ಗದಗ ಮೂಲದ ನಾಗಪ್ಪ(40) ಹಾಗೂ ಆತನ ಪತ್ನಿ ಕಸ್ತೂರಿ ಬಾಯಿ(36) ಎಂದು ಗುರುತಿಸಲಾಗಿದೆ.ಮನ್ ಸಿಂಗ್ ಹಾಗೂ ಫಕ್ರುದ್ದೀನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಬೆಂಗ್ರೆಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು ಎಂದು ತಿಳಿದುಬಂದಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಪ್ಲೈವುಡ್ ಹೇರಿಕೊಂಡು ಪಣಂಬೂರಿಗೆ ಬರುತ್ತಿದ್ದ ಟೆಂಪೊ ಅತೀ ವೇಗದಲ್ಲಿ ಬಂದಿದ್ದು, ವೇಗದಲ್ಲಿಯೇ ತಿರುವು ಪಡೆಯಲು ಪ್ರಯತ್ನಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣದತ್ತ ಸಾಗಿ ಉರುಳಿ ಬಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದ ನಾಗಪ್ಪಹಾಗೂ ಕಸ್ತೂರಿಬಾಯಿ ಯವರ ಮೇಲೆ ಸರಕು ತುಂಬಿದ ಟೆಂಪೊ ಬಿದ್ದುದರಿಂದ ಅವರಿಬ್ಬರ ದೇಹ ಗುರುತು ಸಿಗದಷ್ಟು ಭೀಕರ ವಾಗಿ ಜಜ್ಜಿ ಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದರು. [ಮಂಗಳೂರಿನ ಚಿತ್ರಗಳು: ಐಸಾಕ್ ರಿಚರ್ಡ್, ಬಳ್ಳಾರಿ ಚಿತ್ರ: ರೋಹಿಣಿ ಜಿ.ಎಂ]

ಭಾರಿ ಮರ ಉರುಳಿ ವಾಹನಗಳು ಜಖಂ

ಭಾರಿ ಮರ ಉರುಳಿ ವಾಹನಗಳು ಜಖಂ

ಮಂಗಳೂರು: ನಿವೃತ್ತ ಸಬ್ ಇನ್ಸ್ ಪೆಕ್ಟರ್ ರೊಬ್ಬರ ಮಗ ಕೀರ್ತೇಶ್ ಹಾಗೂ ಅವರ ತಮ್ಮ ನಿತೇಶ್ ಅವರು ಗೆಳೆಯ ಸತೀಶ್ ಜತೆಯಲ್ಲಿ ಬಂಟ್ಸ್ ಹಾಸ್ಟೆಲ್ ಬಳಿ ಇರುವ ಎಲೆಕ್ಟ್ರಿಕಲ್ ಶೋ ರೂಮ್ ಗೆ ತೆರಳಿದ್ದಾರೆ. ಈ ನಡುವೆ ಅವರು ವಾಹನ ನಿಲುಗಡೆ ಸ್ಥಳದಲ್ಲಿ ಮಾರುತಿ ಜೆನ್ ಕಾರು ನಿಲ್ಲಿಸಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ಇವರ ಕಾರು ಸೇರಿದಂತೆ ಇನ್ನೂ ಕೆಲವು ವಾಹನಗಳನ್ನು ಜಖಂಗೊಳಿಸಿದೆ. ಕದರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ವಾಹನಗಳು ಜಖಂ

ಮಂಗಳೂರು: ವಾಹನಗಳು ಜಖಂ

ಬೃಹತ್ ಗಾತ್ರದ ಮರ ಉರುಳಿ ಬಿದ್ದು ಮಾರುತಿ ಜೆನ್ ಕಾರು ಇನ್ನೂ ಕೆಲವು ವಾಹನಗಳನ್ನು ಜಖಂಗೊಳಿಸಿದೆ. ಕದರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು : ಟೆಂಪೋ ಉರುಳಿ ಇಬ್ಬರ ಸಾವು

ಮಂಗಳೂರು : ಟೆಂಪೋ ಉರುಳಿ ಇಬ್ಬರ ಸಾವು

ಪ್ಲೈವುಡ್ ಹೇರಿಕೊಂಡು ಪಣಂಬೂರಿಗೆ ಬರುತ್ತಿದ್ದ ಟೆಂಪೊ ಅತೀ ವೇಗದಲ್ಲಿ ಬಂದಿದ್ದು, ವೇಗದಲ್ಲಿಯೇ ತಿರುವು ಪಡೆಯಲು ಪ್ರಯತ್ನಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣದತ್ತ ಸಾಗಿ ಉರುಳಿ ಬಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ನಿಂತಿದ್ದ ಇಬ್ಬರು ಸಾವು

ಬಸ್ ನಿಲ್ದಾಣದಲ್ಲಿ ನಿಂತಿದ್ದ ಇಬ್ಬರು ಸಾವು

ಮೃತರನ್ನು ಗದಗ ಮೂಲದ ನಾಗಪ್ಪ(40) ಹಾಗೂ ಆತನ ಪತ್ನಿ ಕಸ್ತೂರಿ ಬಾಯಿ(36) ಎಂದು ಗುರುತಿಸಲಾಗಿದೆ.ಮನ್ ಸಿಂಗ್ ಹಾಗೂ ಫಕ್ರುದ್ದೀನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಳ್ಳಾರಿ ಹೊಸ ದರೋಜಿ ಸಮೀಪ ದುರಂತ

ಬಳ್ಳಾರಿ ಹೊಸ ದರೋಜಿ ಸಮೀಪ ದುರಂತ

ಬಳ್ಳಾರಿ ಜಿಲ್ಲೆಯ ಹೊಸ ದರೋಜಿ ಸಮೀಪ ರೈಲ್ವೆ ಹಳಿ ದಾಟುತ್ತಿದ್ದ ಕುರಿಗಳ ಹಿಂಡಿಗೆ ಹಂಪೆ ಎಕ್ಸ್‍ಪ್ರೆಸ್ ಮಂಗಳವಾರ ಬೆಳಗ್ಗೆ ಢಿಕ್ಕಿ ಹೊಡೆದ ಕಾರಣ 17 ಕುರಿಗಳು ಹಾಗು ಕುರಿಗಾಹಿ ಶಿವಕುಮಾರ್ (23) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ರಸ್ತೆ ಅಪಘಾತ ಸಾವು [ಶಿವಮೊಗ್ಗ ಗ್ರಾಮಾಂತರ]

ರಸ್ತೆ ಅಪಘಾತ ಸಾವು [ಶಿವಮೊಗ್ಗ ಗ್ರಾಮಾಂತರ]

ಮೃತ ಅಣ್ಣಾಮಲೈ ತಂದೆ ಮಣಿ ಇತನು ತನ್ನ ಬೈಕ ಕೆ ಎ 14 ಇಸಿ 8595 ನ್ನು ಅತೀ ವೇಗವಾಗಿ ಚಲಿಸಿಕೊಂಡು ಆಯ ತಪ್ಪಿ ಮರಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಸ್ಥಳದಲ್ಲಿಯೆ ಮೃತಪಟ್ಟಿರುವನು ಈ ಬಗ್ಗೆ ಪಿರ್ಯಾದಿ ವೇಲು ಬಿನ್ ಲೇ.ಕಾಶಿ ವಾಸ ಅಮರಾವತಿ ಕ್ಯಾಂಪ್ ಹಸೂಡಿ ರವರು ಕೇಸು ದಾಖಲಿಸಿರುವರು

English summary
Karnataka Crime news Coverage : Mangalore: Two individuals died and two others were injured in a road mishap that took place on the National highway near Panambur. One of the deceased is a woman and the identities of the victims are yet to be ascertained and Many more crime news from across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X