ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಂ ರೌಂಡಪ್: ಬಸ್ ಡ್ರೈವರ್, ಕಂಡಕ್ಟರ್ ದುರಂತ ಸಾವು

By Mahesh
|
Google Oneindia Kannada News

ಕುಣಿಗಲ್,ಏ.26: ರಾತ್ರಿ ವೇಳೆ ಪಂಕ್ಚರಾದ ಬಸ್ ಟೈರು ಬದಲಾಯಿಸಲು ಹೋಗಿ ಕೆಎಸ್ಸಾರ್ಟಿಸಿ ಬಸ್ ಚಾಲಕ, ನಿರ್ವಾಹಕ ದುರಂತ ಸಾವನ್ನಪ್ಪಿದ್ದ ಘಟನೆ ಕುಣಿಗಲ್ ಸಮೀಪದ ಚೊಟ್ಟಿಹಳ್ಳಿ ಸಮೀಪ ನಿನ್ನೆ ತಡರಾತ್ರಿ ಸಂಭವಿಸಿದೆ.

ಮೃತ ಚಾಲಕ ಯಲಬುರ್ಗ42ರ ಹರೆಯದ ಕಾಕಪ್ಪ ಹಾಗೂ ತುಮಕೂರು ತಾಲೂಕು ಅಮೃತಗಿರಿ ನಿವಾಸಿ 40 ವರ್ಷದ ನಾಗರಾಜ್ ಎಂದು ಗುರ್ತಿಸಲಾಗಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕುಣಿಗಲ್ ಠಾಣೆ ಪೊಲೀಸರು ಪಂಚನಾಮೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಶರೀರಗಳ ಆಸ್ಪತ್ರೆಗೆ ಸಾಗಿಸಿದ್ದಾರೆ.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಸ್ ಹೊರಟ್ಟಿತ್ತು. ಕುಣಿಗಲ್ ನ ಚೊಟ್ಟಹಳ್ಳಿ ಗೇಟ್ ಬಳಿ ಬಂದಾಗ ಮುಂಭಾಗ ಟೈರ್ ಪಂಕ್ಚರ್ ಆಗಿದೆ. ಬಸ್ಸ ನಿಯಂತ್ರಿಸಿದ ಚಾಲಕ ರಸ್ತೆ ಬದಿಯಲ್ಲಿ ನಿಲ್ಲಿಸಿ ಚಾಲಕ ಕಕಪ್ಪ, ನಿರ್ವಾಹಕ ಗರಾಜ್ ಇಬ್ಬರೂ ಸೇರಿ ಬಸ್ ಮುಂಭಾಗದ ಚಕ್ರ ಬದಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಸಂದರ್ಭ ವೇಗವಾಗಿ ಬಂದ ಅಪರಿಚಿತ ವಾಹವೊಂದು ಈ ಇಬ್ಬರ ಮೇಲೆ ಎರಗಿದೆ. ಚಾಲಕ-ನಿರ್ವಾಹಕ ಇಬ್ಬರೂ ಸ್ಥಳದಲ್ಲೇ ಸಾವಪ್ಪಿದ್ದಾರೆ. ಅಪರಿಚಿತ ವಾಹದ ಚಾಲಕ ವಾಹ ಸಮೇತ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸಿಪಿಎಂ ರಾಧಾಕೃಷ್ಣ ಕುಟುಂಬದ ದುರಂತ

ಸಿಪಿಎಂ ರಾಧಾಕೃಷ್ಣ ಕುಟುಂಬದ ದುರಂತ

ಮುಳಬಾಗಿಲು:ಸಿಪಿಎಂ ಕಾರ್ಯದರ್ಶಿ ರಾಧಾಕೃಷ್ಣ ಅವರ ಬರ್ಬರ ಹತ್ಯೆ ನಂತರ ಪತ್ನಿ ಹಾಗೂ ಮಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. 8 ವರ್ಷದ ಮಗಳು ಶ್ರೇಯಾ ಅಲಿಯಾಸ್ ಝಾನ್ಸಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟರೆ, ಪತ್ನಿ ಸುಮಿತ್ರಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ, ಪುತ್ರ ಭಗತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮುಳುಬಾಗಿಲು ಬೈಪಾಸ್ ರಸ್ತೆ ಬಳಿ 38 ವರ್ಷ ವಯಸ್ಸಿನ ಮುಳಬಾಗಿಲು ತಾಲೂಕಿನ ಅತ್ತಿಕುಂಟೆ ಗ್ರಾಮದ ನಿವಾಸಿ ಹೋರಾಟಗಾರ ರಾಧಾಕೃಷ್ಣ ಅವರ ತಲೆ ಮೇಲೆ ಕಲ್ಲು ಹಾಕಿ ಕ್ರೂರವಾಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.

ವಿದ್ಯಾರ್ಥಿ ದೆಸೆಯಿಂದ ಹೋರಾಟಗಾರರಾಗಿದ್ದ ರಾಧಾಕೃಷ್ಣ ಅವರು ಎಸ್ ಎಫ್ ಐ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ನಂತರ ರೈತ ಸಂಘದಲ್ಲಿ ಕಾರ್ಯ ನಿರ್ವಹಿಸಿದ್ದರು. ನಂತರ ಸಿಪಿಐ ಪಕ್ಷ ಸೇರಿ 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

ದಾವಣಗೆರೆ: ಎಸ್ ಐ ಮೇಲೆ ಲೋಕಾಯುಕ್ತ ದಾಳಿ

ದಾವಣಗೆರೆ: ಎಸ್ ಐ ಮೇಲೆ ಲೋಕಾಯುಕ್ತ ದಾಳಿ

ದಾವಣಗೆರೆಯ ಬಸವ ನಗರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಸಬ್ ಇನ್ಸ್ ‌ಪೆಕ್ಟರ್ ಸೋಮ್ಲಾನಾಯ್ಕ ಅವರು ಅಕ್ರಮ ಆಸ್ತಿ ಸಂಪಾದಿಸಿದ ಆರೋಪದ ಹಿನ್ನೆಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

ಸೋಮ್ಲಾನಾಯ್ಕ ಬಳಿಯಿಂದ 61 ಸಾವಿರ ನಗದು, 250 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ವಸ್ತು, ಆಭರಣ, 5 ಬ್ಯಾಂಕ್ ಖಾತೆಗಳು, ಸ್ವಿಪ್ಟ್ ಡಿಸೈರ್ ಕಾರು, ದ್ವಿಚಕ್ರ ವಾಹನ, ಆಂಜನೇಯ ಬಡಾವಣೆ, ಹರಪನಹಳ್ಳಿ ಪಟ್ಟಣ ಸೇರಿದಂತೆ 3 ನಿವೇಶನ, ಜೋಡಿ ಮನೆ, 4 ಎಕರೆ ಜಮೀನು, ಪತ್ನಿ ಹೆಸರಿನ ನಿವೇಶನ ಹೀಗೆ ಸುಮಾರು 63.53 ಲಕ್ಷ ಮೌಲ್ಯದ ಆಸ್ತಿಯನ್ನು ಸೋಮ್ಲಾನಾಯ್ಕ ಗಳಿಸಿದ್ದನ್ನು ಲೋಕಾಯುಕ್ತ ಅಧಿಕಾರಿಗಳ ತಂಡವು ಪತ್ತೆ ಮಾಡಿದೆ.

ಶೃಂಗೇರಿ: ಎಎನ್ ‌ಎಫ್ ಸಿಬ್ಬಂದಿ ಬಂಧನ

ಶೃಂಗೇರಿ: ಎಎನ್ ‌ಎಫ್ ಸಿಬ್ಬಂದಿ ಬಂಧನ

ತನಿಕೋಡು ಬಳಿ ಗುಂಡು ಹಾರಿಸಿ ಓರ್ವರನ್ನು ಹತ್ಯೆ ಮಾಡಿರುವ ಎಎನ್ ‌ಎಫ್ ಸಿಬ್ಬಂದಿಯನ್ನು ಶೃಂಗೇರಿ ಪೊಲೀಸರು ಶುಕ್ರವಾರ ಬಂಧಿಸಿ ಕೊಪ್ಪದಲ್ಲಿರುವ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.. ಉಮ್ಮರ್ ಫಾರೂಕ್ ಎಂಬವರು ನೀಡಿರುವ ದೂರಿನನ್ವಯ ಎಎನ್‌ಎಫ್ ಸಿಬ್ಬಂದಿ ನವೀನ್ ನಾಯಕ್ ಅವರನ್ನು ಬಂಧಿಸಲಾಗಿದೆ. ನವೀನ್ ನಾಯಕ್ ವಿರುದ್ಧ ಶೃಂಗೇರಿ ಪೊಲೀಸರು 302 ಕೇಸನ್ನು ದಾಖಲು ಮಾಡಿಕೊಂಡಿದ್ದರು.

ಗೋವುಗಳನ್ನು ಸಾಗಿಸುತ್ತಿದ್ದ ಕಬೀರ್, ರಫೀಕ್ ಹಾಗೂ ಉಮರ್ ಫಾರುಕ್ ಅವರ ವಿರುದ್ಧ ಕಾರ್ಕಳ, ಪಣಂಬೂರು ಸೇರಿದಂತೆ ವಿವಿಧೆಡೆ ಅಕ್ರಮವಾಗಿ ಗೋ ಸಾಗಾಣಿಕೆ ಮಾಡಿರುವ ಬಗ್ಗೆ ಹಲವು ಪ್ರಕರಣಗಳು ಈ ಹಿಂದೆ ದಾಖಲಾಗಿವೆ ಎಂದು ಎಎನ್ ಎಫ್ ಸಿಬ್ಬಂದಿ ಕೂಡಾ ಆರೋಪಿಸಿದ್ದಾರೆ.

ಬಾಗಲಕೋಟೆ ಅಪಘಾತ ದುರಂತ

ಬಾಗಲಕೋಟೆ ಅಪಘಾತ ದುರಂತ

ಅಥಣಿ: ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟು 30ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.

ಮೃತಪಟ್ಟವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ರಬಕವಿ ನಗರದ ಬಸಪ್ಪ ಸುರೇಶ ನಂದೇಶ್ವರ (7), ಕಲ್ಲವ್ವ ಸದಾಶಿವ ತಳವಾರ (60), ದಾನೇಶ ಮಹಾದೇವ ತಳವಾರ (9), ಪ್ರಿಯಾಂಕಾ ರವಿ ಹಾಲಣ್ಣವರ (3) ಎಂದು ಗುರುತಿಸಲಾಗಿದೆ.

ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ತೀವ್ರ ಗಾಯಗೊಂಡ 10 ಜನರನ್ನು ಮಹಾರಾಷ್ಟ್ರದ ಸಾಂಗ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಚಿಕ್ಕಪುಟ್ಟ ಗಾಯಗೊಂಡವರಿಗೆ ಅಥಣಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.

ಬನ್ನಂಜೆ ರಾಜಾನ ಸಹಚರನ ಬಂಧನ

ಬನ್ನಂಜೆ ರಾಜಾನ ಸಹಚರನ ಬಂಧನ

ರಿಯಲ್ ಎಸ್ಟೇಟ್ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ‌ಗೆ ಬೆದರಿಸಿ ಹಫ್ತಾ ವಸೂಲಿ ಮಾಡಲು ಸಂಚು ರೂಪಿಸಿದ ಆರೋಪದ ಮೇಲೆ ಭೂಗತಪಾತಕಿ ಬನ್ನಂಜೆ ರಾಜನ ಸಹಚರನೊಬ್ಬನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಪಿಸ್ತೂಲ್ ಹಾಗೂ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರಿನ ಕೊಣಾಜೆ ಮೂಲದ ಸುಜಿತ್ ಪೂಜಾರಿ ಅಲಿಯಾಸ್ ರಮೇಶ್ (32) ಬಂಧಿತ ಆರೋಪಿ. ಈತನಿಂದ ಪಿಸ್ತೂಲ್ ಹಾಗೂ ಕೆಲ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದಲ್ಲಿರುವ ಬಿಲ್ಡರ್ಸ್ ‌ಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಯೋಜನೆ ಆತನದಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

English summary
Karnataka Crime news Coverage : An unidentified vehicle hit KSRTC bus driver and conductor who were busy changing the punctured tyres near Kunigal last night. and Many more crime news from across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X