ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಎಸ್ಎಲ್‌ಸಿ ಫಲಿತಾಂಶದ Highlights

|
Google Oneindia Kannada News

ಬೆಂಗಳೂರು, ಮೇ.12 : 2013-14ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಈ ಬಾರಿಯ ಫಲಿತಾಂಶದಲ್ಲಿಯೂ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆ ಶೇ 81.19ರಷ್ಟು ಫಲಿತಾಂಶ ಬಂದಿದ್ದು, ಫಲಿತಾಂಶದ ಪ್ರಮುಖ ಅಂಶಗಳು ಇಲ್ಲಿವೆ.

ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ಮಾರ್ಚ್ 28ರಿಂದ ಏಪ್ರಿಲ್ 4ರ ವರೆಗೆ 3016 ಪರೀಕ್ಷಾ ಕ್ಷೇಂದ್ರಗಳಲ್ಲಿ ನಡೆಸಲಾಗಿತ್ತು. ಒಟ್ಟು 211 ಕೇಂದ್ರಗಳಲ್ಲಿ ಮೌಲ್ಯಮಾಪನವನ್ನು ಮಾಡಲಾಯಿತು. ಒಟ್ಟಾರೆ ಈ ವರ್ಷ ಶೇ 81.19ರಷ್ಟು ಫಲಿತಾಂಶ ಬಂದಿದ್ದು, ಇದರಲ್ಲಿ ಶೇ 85.37ರಷ್ಟು ಫಲಿತಾಂಶ ಹೊಸದಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಂದ ಬಂದಿದೆ. [ಫಲಿತಾಂಶ ಪಡೆಯಲು ಇಲ್ಲಿ ಕ್ಲಿಕ್ ಮಾಡಿ]

SSLC results

ಶೇ 40.85ರಷ್ಟು ಫಲಿತಾಂಶ ಪುನರಾವರ್ತಿತ ಅಭ್ಯರ್ಥಿಗಳಿಂದ ಬಂದಿದ್ದರೆ, ಖಾಸಗಿ ಶಾಲೆಗಳ ಅಭ್ಯರ್ಥಿಗಳ ಫಲಿತಾಂಶ ಶೇ 13.70 ಆಗಿದೆ. ಚಿಕ್ಕೋಡಿ ಜಿಲ್ಲೆ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಬೀದರ್ ಕಡೆಯ ಸ್ಥಾನವನ್ನು ಪಡೆದಿದೆ. ಒಟ್ಟು 17 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು, ಇದರಲ್ಲಿ ಯಾವುದೇ ಸರ್ಕಾರಿ ಶಾಲೆ ಸೇರಿಲ್ಲ. [ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟ]

100 ಅಂಕ ಪಡೆದವರು : ಪ್ರಥಮ ಭಾಷೆಯಲ್ಲಿ 942 ವಿದ್ಯಾರ್ಥಿಗಳು, ದ್ವಿತೀಯ ಭಾಷೆಯಲ್ಲಿ 328 ವಿದ್ಯಾರ್ಥಿಗಳು, ತೃತೀಯ ಭಾಷೆಯಲ್ಲಿ 376 ವಿದ್ಯಾರ್ಥಿಗಳು, ಗಣಿತದಲ್ಲಿ 242 ವಿದ್ಯಾರ್ಥಿಗಳು, ವಿಜ್ಞಾನದಲ್ಲಿ 016 ವಿದ್ಯಾರ್ಥಿಗಳು ಮತ್ತು ಸಮಾಜ ವಿಜ್ಞಾನದಲ್ಲಿ 1058 ವಿದ್ಯಾರ್ಥಿಗಳು 100 ಅಂಕಗಳನ್ನು ಪಡೆದಿದ್ದಾರೆ.

6,60,515 ವಿದ್ಯಾರ್ಥಿಗಳು ಉತ್ತೀರ್ಣ : ಈ ಬಾರಿ ರಾಜ್ಯದಲ್ಲಿ 8, 13, 495 ಮಂದಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 6,60,515 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 3,34,925 ಬಾಲಕರು ಮತ್ತು 3,25,590 ಬಾಲಕೀಯರು ಉತ್ತಿರ್ಣಗೊಂಡಿದ್ದಾರೆ.625ಕ್ಕೆ 622 ಅಂಕಗಳಿಸಿದ ಮೈಸೂರಿನ ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿನಿ ನಿತ್ಯಾಸುರಭಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಚಿಕ್ಕೋಡಿ ಫಸ್ಟ್, ಬೀದರ್ ಲಾಸ್ಟ್ : ಶೇ.91.07 ಫಲಿತಾಂಶ ಪಡೆದ ಚಿಕ್ಕೋಡಿ ಜಿಲ್ಲೆ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ. ಶಿರಸಿ ಎರಡನೇ ಸ್ಥಾನ ಪಡೆದಿದ್ದು, ಬೆಳಗಾವಿ ಮೂರನೇ ಮತ್ತು ಮಂಡ್ಯ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಕೊನೆಯ ಸ್ಥಾನವನ್ನು ಬೀದರ್ ಜಿಲ್ಲೆ ಪಡೆದುಕೊಂಡಿದೆ.

ಶೇ 100ರಷ್ಟು ಫಲಿತಾಂಶ : ಈ ಬಾರಿ 2223 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ ಮತ್ತು 17 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಆದರೆ, ಯಾವುದೇ ಸರ್ಕಾರಿ ಶಾಲೆಗಳಲ್ಲೂ ಶೂನ್ಯ ಫಲಿತಾಂಶ ಬಂದಿಲ್ಲ. 628 ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದ್ದು, 163 ಅನುದಾನಿತ, 1262 ಅನುದಾನರಹಿತ ಶಾಲೆಗಳಲ್ಲಿ 100ರಷ್ಟು ಫಲಿತಾಂಶ ಬಂದಿದೆ.

ಕನ್ನಡ ಮಾಧ್ಯಮದಲ್ಲಿ ಶೇ 80.83ರಷ್ಟು ಫಲಿತಾಂಶ : ಈ ಬಾರಿ ಕನ್ನಡ ಮಾಧ್ಯಮದಲ್ಲಿ ಶೇ 80.83ರಷ್ಟು ಫಲಿತಾಂಶ ಬಂದಿದೆ. ಒಟ್ಟು 518,120 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಇವರಲ್ಲಿ 418,784 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ 216,267 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಅವರಲ್ಲಿ 193,575 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 89.51ರಷ್ಟು ಫಲಿತಾಂಶ ಬಂದಿದೆ.

376 ಅಂಧರು ಪಾಸ್ : ಈ ಬಾರಿ 428 ಅಂಧರು ಪರೀಕ್ಷೆ ಬರೆದಿದ್ದರು ಇವರಲ್ಲಿ 376 ಉತ್ತೀರ್ಣರಾಗಿದ್ದಾರೆ. ಕಿವಿ ಕೇಳದ ಮತ್ತು ಮಾತು ಬಾರದ 600 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಇವರಲ್ಲಿ 354 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳು ಫಸ್ಟ್ :431,525 ಗ್ರಾಮೀಣ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು ಇವರಲ್ಲಿ 368,241 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, 85.33 ರಷ್ಟು ಫಲಿತಾಂಶ ಬಂದಿದೆ. 340,704 ನಗರ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಇವರಲ್ಲಿ 275,419 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು ಶೇ 80.84ರಷ್ಟು ಫಲಿತಾಂಶ ಬಂದಿದೆ.

ಮರು ಎಣಿಕೆ, ಛಾಯಾಪ್ರತಿ : ಎಲ್ಲಾ ವಿಷಯಗಳ ಮರು ಎಣಿಕೆ ಮತ್ತು ಛಾಯಾಪ್ರತಿ ಪಡೆಯಲು ವಿದ್ಯಾರ್ಥಿಗಳು ಮೇ 22ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮರು ಎಣಿಕೆ ಛಾಯಾಪ್ರತಿ ಇವುಗಳಲ್ಲಿ ಯಾವುದಾದದರೂ ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು. ಮರು ಎಣಿಕೆಗೆ ಒಂದು ವಿಷಯಕ್ಕೆ 150 ರೂ., ಛಾಯಾ ಪ್ರತಿ ಒಂದು ವಿಷಯಕ್ಕೆ 300 ರೂ., ಮರು ಮೌಲ್ಯಮಾಪನಕ್ಕೆ ಒಂದು ವಿಷಯಕ್ಕೆ 700ರೂ. ಶುಲ್ಕ ನಿಗದಿಪಡಿಸಲಾಗಿದೆ.

ಪೂರಕ ಪರೀಕ್ಷೆ : ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗಾಗಿ ಜೂನ್ ಪೂರಕ ಪರೀಕ್ಷೆ ನಡೆಯಲಿದೆ. ಮರು ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮೇ 26 ಕೊನೆಉ ದಿನವಾಗಿದೆ. ಒಂದು ವಿಷಯಕ್ಕೆ 200ರೂ., ಎರಡು ವಿಷಯಕ್ಕೆ 250 ರೂ., ಮೂರು ಮತ್ತು ಮೂರಕ್ಕಿಂತ ಮೇಲ್ಟಟ್ಟ ವಿಷಯಗಳಿದ್ದರೆ 315 ರೂ. ಶುಲ್ಕವನ್ನು ವಿದ್ಯಾರ್ಥಿಗಳು ಪೂರಕ ಪರೀಕ್ಷೆಗಾಗಿ ಪಾವತಿ ಮಾಡಬೇಕಾಗಿದೆ.

English summary
Karnataka Secondary education Examination Board (KSEEB) announced SSLC board examination 2014 results on Monday, May 12. Here is the Highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X