ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ನಲ್ಲಿ ಗುಂಪು ಘರ್ಷಣೆ, 6 ಜನರಿಗೆ ಗಾಯ

|
Google Oneindia Kannada News

ಬೀದರ್, ಅ.6 : ನಗರದ ಲೇಬರ್ ಕಾಲೋನಿಯಲ್ಲಿ ಕ್ಷುಲ್ಲಕ ವಿಷಯಕ್ಕೆ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದ್ದು, ಪೊಲೀಸ್ ಸಿಬ್ಬಂದಿ ಸೇರಿದಂತೆ ಆರು ಜನರು ಘಟನೆಯಿಂದಾಗಿ ಗಾಯಗೊಂಡಿದ್ದಾರೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಭಾನುವಾರ ಮಧ್ಯಾಹ್ನ ಲೇಬರ್ ಕಾಲೋನಿಯಲ್ಲಿ ಸಣ್ಣ ವಿಷಯಕ್ಕೆ ಎರಡು ಕೋಮಿನ ಜನರು ನಡುವ ಮಾತಿನ ಚಕಮಕಿ ನಡೆದು, ಕಲ್ಲು ತೂರಾಟ ನಡೆದಿದೆ. ದಶರಥ ಪೆಂಟಯ್ಯ ಎಂಬ ಯುವಕನ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ತಮಟೆ ಬಾರಿಸಲಾಗುತ್ತಿತ್ತು. ಇದೇ ವೇಳೆ ಮೃತನ ಮನೆಯ ಸಮೀಪದ ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆ ನಡೆಯುತ್ತಿತ್ತು, ಮೈಕ್ ಶಬ್ದ ಜೋರಾಗಿತ್ತು. ಮೈಕ್ ಶಬ್ದ ಕಡಿಮೆ ಮಾಡುವಂತೆ ಮಾಡಿದ ಮನವಿಯೇ ಘರ್ಷಣೆಗೆ ಕಾರಣವಾಗಿದೆ.

police

ಮೈಕ್ ಶಬ್ದ ಕಡಿಮೆ ಮಾಡುವಂತೆ ಮಾಡಿದ ಮನವಿಯಿಂದ ಕೋಪಗೊಂಡವರು, ಪ್ರಾರ್ಥನೆ ನಿಲ್ಲಿಸಿ ಕಲ್ಲು ತೂರಾಟ ಆರಂಭಿಸಿದರೆ, ಇನ್ನೊಂದು ಕೋಮಿನವರು ಹೆಣವನ್ನು ರಸ್ತೆಯಲ್ಲಿಯೇ ಬಿಟ್ಟು ಕಲ್ಲು ತೂರಾಟ ನಡೆಸಿದರು. ಘಟನೆಯಿಂದಾಗಿ ಆರು ಜನರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಮಾಹಿತಿ ಪಡೆದ ಬೀದರ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ಆಗ ಅವರ ಮೇಲೆಯೂ ಕಲ್ಲು ತೂರಾಟ ನಡೆಸಿದ್ದರಿಂದ ಲಘು ಲಾಠಿ ಪ್ರಹಾರ ನಡೆಸಿ, ಜನರನ್ನು ಚದುರಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್. ಸುಧೀರಕುಮಾರ ರೆಡ್ಡಿ ಆಗಮಿಸಿ ಪರಿಶೀಲನೆ ನಡೆಸಿದರು.

ಹೆಚ್ಚಿನ ಬಂದೋಬಸ್ತ್ : ಸೋಮವಾರ ಬಕ್ರೀದ್ ಹಬ್ಬವಿರುವ ಹಿನ್ನಲೆಯಲ್ಲಿ ಗಲಭೆ ನಡೆದ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಎಸ್ಪಿ, ಡಿವೈಎಸ್ಪಿ, 4 ಸಿಪಿಐಗಳು, 8 ಜನ ಪಿಎಸ್‌ಐಗಳು ಹಾಗೂ ಸಿಬ್ಬಂದಿ ಸೇರಿದಂತೆ ಒಂದು ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿ ಬೀಡು ಬಿಟ್ಟಿದೆ. ಅಗತ್ಯ ಬಿದ್ದರೆ ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

English summary
Six persons were injured in stone throwing at Labour Colony in Bidar on Sunday evening. Members of two communities came to blows and threw stones at each other. The situation is under control said Superintendent of Police C.H. Sudheer Kumar Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X