ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸನ್ಯಾಸಿ ಮನವಿ ನೋಡಿ ಸಿಎಂ ಸಿದ್ದು ಸುಸ್ತೋ ಸುಸ್ತು

|
Google Oneindia Kannada News

ಬೆಂಗಳೂರು, ಏ. 28 : "ಸಮಾಜ ಸೇವೆ ಮಾಡುತ್ತೀನಿ ನಿಮ್ಮ ಊರು ಸಿದ್ದರಾಮಯ್ಯನ ಹುಂಡಿಯಲ್ಲಿ 10 ಎಕರೆ ಜಮೀನು ನೀಡಿ ಮತ್ತು ಒಂದಷ್ಟು ಆರ್ಥಿಕ ನೆರವು ನೀಡಿ" ಎಂದು ಬಂದಿದ್ದ ಸ್ವಾಮೀಜಿಯೊಬ್ಬರ ಕಥೆ ಕೇಳಿದ ಸಿಎಂ ಸಿದ್ದರಾಮಯ್ಯ ನಿಜಕ್ಕೂ ಸುಸ್ತು ಹೊಡೆದು ಹೋಗಿದ್ದಾರೆ. ಯಾವುದೇ ಭರವಸೆ ನೀಡದೆ ಸ್ವಾಮೀಜಿಯನ್ನು ಸಿಎಂ ವಾಪಸ್ ಕಳುಹಿಸಿದ್ದಾರೆ.

ಲೋಕಸಭೆ ಚುನಾವಣೆ ನಂತರ ಸಿಎಂ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ನಡೆಸಿದ ಜನತಾ ದರ್ಶನ ಕಾರ್ಯಕ್ರಮಕ್ಕೆ ವೇತನಪರ್ತಿ ರಾಮಮೂರ್ತಿಗಳು ಸ್ವಾಮಿಗಳು ಆಗಮಿಸಿದ್ದರು. ಸಮಾಜ ಸೇವೆ ಮಾಡುತ್ತೇನೆ ನಿಮ್ಮ ಹುಟ್ಟೂರಿನಲ್ಲಿನಲ್ಲಿ 10 ಎಕರೆ ಜಮೀನು ನೀಡಿ ಮತ್ತು ಆರ್ಥಿಕ ಸಹಾಯ ಮಾಡಿ ಎಂದು ಸಿದ್ದರಾಮಯ್ಯ ಅವರಿಗೆ ಬೇಡಿಕೆ ಇಟ್ಟರು.

CM Siddaramaiah

ಸ್ವಾಮೀಜಿ ಕಥೆ ಕೇಳಿದ ಸಿಎಂ ಸಿದ್ದರಾಮಯ್ಯ ರಾಮಮೂರ್ತಿ ಸ್ವಾಮೀಜಿಗಳಿಗೆ ಯಾವುದೇ ಭರವಸೆ ನೀಡದೆ ವಾಪಸ್ ಕಳುಹಿಸಿದರು. ಇದರಿಂದ ನೊಂದ ಸ್ವಾಮಿಗಳು ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ, ಸಮಾಜ ಸೇವೆ ಮಾಡಲು ಹೊರಟಿರುವ ತಮಗೆ ಯಾರು ಸಹಕಾರ ನೀಡುತ್ತಿಲ್ಲ ಎಂದು ಆಳಲು ತೋಡಿಕೊಂಡರು. [ಸಿಎಂ ಜನತಾದರ್ಶನದಲ್ಲಿ ಜನವೋ ಜನ]

ಸ್ವಾಮೀಜಿ ಯಾರು : ವೇತನಪರ್ತಿ ರಾಮಮೂರ್ತಿ ಸ್ವಾಮೀಜಿ ಮೂಲತಃ ಆಂಧ್ರಪ್ರದೇಶದವರು. ಸನ್ಯಾಸ ದೀಕ್ಷೆ ಸ್ವೀಕರಿಸಿದ ನಂತರ ಕ್ರಿಶ್ಚಿಯನ್ ಧರ್ಮದತ್ತ ಆಕರ್ಷಿತರಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಅಲ್ಲಿ ಸಮಾಜ ಸೇವೆಗೆ ಅವರಿಗೆ ಸೂಕ್ತ ಬೆಂಬಲ ದೊರಯದ ಕಾರಣ ಪುನಃ ಹಿಂದೂ ಧರ್ಮಕ್ಕೆ ಮರಳಿದರು. [ದೇವಿಶ್ರೀ ಸ್ವಾಮಿಜೀ ರಾಸಲೀಲೆ ಬಹಿರಂಗ]

ಚಿತ್ರದುರ್ಗದಲ್ಲಿ ಬಸವರಾಮಮೂರ್ತಿ ಸ್ವಾಮೀಜಿಯಾಗಿ ಸಮಾಜ ಸೇವೆ ಆರಂಭಿಸಿದರು. ಆದರೆ, ಅಲ್ಲಿಯೂ ಯಾರೂ ಸರಿಯಾಗಿ ಸಹಕಾರ ನೀಡಿದ ಹಿನ್ನಲೆಯಲ್ಲಿ ಇಸ್ಲಾಂಗೆ ಮತಾಂತರಗೊಂಡು, ಬಸವರಾಮಮೂರ್ತಿ ಅಹಮದ್ ಸಿದ್ದಿಕಿ ಬಾಬುಜಿಯಾಗಿ ಸೇವೆ ಆರಂಭಿಸಿದರು. ಅಲ್ಲೂ ಸಹಕಾರ ಸಿಗದ ಕಾರಣ ಪುನಃ ಹಿಂದೂ ಧರ್ಮಕ್ಕೆ ವಾಪಸ್ ಆದರು.

ಹೀಗೆ ಮೂರು ಧರ್ಮಗಳಲ್ಲೂ ಸಮಾಜ ಸೇವೆ ಮಾಡಬೇಕೆಂದಿರುವ ಈ ಸ್ವಾಮೀಜಿ ತಾನು ಕುಷ್ಠ ರೋಗಿಗಳ ಸೇವೆ ಮಾಡಿದ್ದೇನೆ. ದಲಿತರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ತನಗೆ ಸಮಾಜ ಸೇವೆ ಮಾಡುವ ಆಸಕ್ತಿ ಇದೆ. ನೀವು 10 ಎಕರೆ ಭೂಮಿ ಮತ್ತು ಆರ್ಥಿಕ ಸಹಾಯ ಮಾಡಬೇಕೆಂದು ಸಿಎಂಗೆ ಸೋಮವಾರ ಮನವಿ ಸಲ್ಲಿಸಿದರು.

ಈ ಸ್ವಾಮೀಯ ಕಥೆ ಕೇಳಿದ ಸಿಎಂ ಸಿದ್ದರಾಮಯ್ಯ ಯಾವುದೇ ಭರವಸೆ ನೀಡಿದೆ, ಅಲ್ಲಿಂದ ವಾಪಸ್ ಕಳಿಸಿದ್ದಾರೆ. ಇದರಿಂದ ಬೇಸರಗೊಂಡ ಸ್ವಾಮೀಜಿ ಮಾಧ್ಯಮಗಳ ಮುಂದೆ ಬಂದು ತನಗೆ ಸಮಾಜ ಸೇವೆ ಮಾಡಲು ಯಾರು ಅವಕಾಶ ನೀಡುತ್ತಿಲ್ಲ ಎಂದು ಕಣ್ಣೀರು ಹಾಕಿದರು.

English summary
Andhra Pradesh based Vethanaparthy Ramamurthy Swamiji meets CM Siddaramaiah in Janata Darshan at Home office Krishna in Bangalore and demanded for 10 acres of land for his Social service activity. But Siddaramaiah send him back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X