ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಸಂಪುಟ ಸೇರುವವರ ಹೆಸರು ಅಂತಿಮ

|
Google Oneindia Kannada News

ಬೆಂಗಳೂರು, ಆ.30 : ಕಾಂಗ್ರೆಸ್ ವಲಯದಲ್ಲಿನ ಸಚಿವ ಸಂಪುಟ ವಿಸ್ತರಣೆ ಬಿಕ್ಕಟ್ಟು ಬಗೆಹರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸೇರುವ ಮೂವರ ಹೆಸರನ್ನು ಅಂತಿಮಗೊಳಿಸಿದ್ದು, ಸೆ.3ರಂದು ದೆಹಲಿಗೆ ಹೋಗಿ ಬಂದ ಬಳಿಕ ಇದನ್ನು ಪ್ರಕಟಿಸುವ ಸಾಧ್ಯತೆ ಇದೆ.

ಪಕ್ಷದ ಮೂಲಗಳ ಪ್ರಕಾರ ವಿಧಾನಪರಿಷತ್ ಸದಸ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಹೆಚ್.ವೈ.ಮೇಟಿ ಮತ್ತು ಎ.ಬಿ.ಮಾಲಕರೆಡ್ಡಿ ಅವರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ವಿಜಯ್ ಕುಲಕರ್ಣಿ ಮತ್ತು ಅರಕಲಗೋಡು ಮಂಜು ಅವರ ಹೆಸರು ಪರಿಶೀಲನೆಯಲ್ಲಿದೆ ಎಂದು ತಿಳಿದುಬಂದಿದೆ.

Siddaramaiah

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸೆ.3ರಂದು ದೆಹಲಿಗೆ ತೆರಳಲಿದ್ದು, ಅಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚಿಸಿದ ಬಳಿಕ ಹೆಸರುಗಳನ್ನು ಅಂತಿಮವಾಗಿ ಘೋಷಿಸುವ ಸಾಧ್ಯತೆ ಇದೆ. [ಹುಟ್ಟುಹಬ್ಬದಂದು ಮನಬಿಚ್ಚಿ ಮಾತನಾಡಿದ ಪರಮೇಶ್ವರ್]

ಡಿಸಿಎಂ ಹುದ್ದೆ ಇಲ್ಲ : ಮೂಲಗಳ ಪ್ರಕಾರ ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ತುಂಬಲು ಸಿಎಂ ಚಿಂತನೆ ನಡೆಸಿದ್ದಾರೆ. ಆದರೆ, ಉಪ ಮುಖ್ಯಮಂತ್ರಿ ಹುದ್ದೆ ಬದಲು ಪರಮೇಶ್ವರ್ ಅವರಿಗೆ ಪ್ರಮುಖ ಖಾತೆಯೊಂದನ್ನು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. [ಸಿದ್ದರಾಮಯ್ಯ ಸಂಪುಟ ಸೇರಲು ಶಾಸಕರ ಲಾಬಿ]

ಡಿಸಿಎಂ ಹುದ್ದೆ ನೀಡದಿದ್ದರೆ ಸಂಪುಟ ಸೇರುವುದಿಲ್ಲ ಕೆಪಿಸಿಸಿ ಅಧ್ಯಕ್ಷನಾಗಿಯೇ ಮುಂದುವರೆಯುತ್ತೇನೆ ಎಂದು ಪರಮೇಶ್ವರ್ ಹಿಂದೆಯೇ ಹೇಳಿದ್ದರು. ಆದ್ದರಿಂದ ಅವರನ್ನು ಸಮಾಧಾನಪಡಿಸುವ ಹೊಣೆಯನ್ನು ಸಿಎಂ ಹೈಕಮಾಂಡ್ ನಾಯಕರಿಗೆ ವಹಿಸುವ ಸಾಧ್ಯತೆ ಇದೆ. ಪ್ರಮುಖ ಖಾತೆಯೊಂದರ ಜೊತೆಗೆ ತುಮಕೂರು ಜಿಲ್ಲಾ ಉಸ್ತುವಾರಿಯನ್ನು ಪರಮೇಶ್ವರ್ ಅವರಿಗೆ ನೀಡುಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಒಂದು ವೇಳೆ ಪರಮೇಶ್ವರ್ ಸಂಪುಟ ಸೇರಲು ನಿರಾಕರಿಸಿದರೆ, ಧಾರವಾಡ ಗ್ರಾಮಾಂತರ ಶಾಸಕ ವಿನಯ್ ಕುಲಕರ್ಣಿ ಅಥವ ಅಕರಲಗೋಡು ಶಾಸಕ ಎ. ಮಂಜು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ಯಾರು ಸಂಪುಟ ಸೇರಬಹುದು?
* ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
* ಹೆಚ್.ವೈ.ಮೇಟಿ, ಬಾಗಲಕೋಟೆ ಶಾಸಕ
* ಡಾ.ಎ.ಬಿ.ಮಾಲಕರೆಡ್ಡಿ, ಯಾದಗಿರಿ ಶಾಸಕ

English summary
According to reports Karnataka Chief Minister Siddaramaiah finalized the three names for cabinet expansion. KPCC president Dr.G. Parameshwar, Bagalkot MLA Meti Hullappa Yamanappa (H.Y.Meti), Yadgiri MLA A.B. Malak Reddy will join cabinet on September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X