{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/karnataka/shiradi-ghat-road-work-to-begin-soon-hc-mahadevappa-085753.html" }, "headline": "ಅಪಾಯಕಾರಿ ಶಿರಾಡಿ ಘಾಟ್ ರಸ್ತೆಗೆ ಕಾಯಕಲ್ಪ", "url":"http://kannada.oneindia.com/news/karnataka/shiradi-ghat-road-work-to-begin-soon-hc-mahadevappa-085753.html", "image": { "@type": "ImageObject", "url": "http://kannada.oneindia.com/img/1200x60x675/2014/07/01-hcmahadevappa.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/07/01-hcmahadevappa.jpg", "datePublished": "2014-07-01T09:05:35+05:30", "dateModified": "2014-07-01T10:50:46+05:30", "author": { "@type": "Person", "url": "https://kannada.oneindia.com/authors/gururajks.html", "name": "Gururaj" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Karnataka", "description": "The Union government has approved 2 project proposals to build concrete roads on the vexed Shiradi Ghat stretch of National Highway–48 at a cost of Rs 154 crore and the work will commence soon. Karnataka PWD Minister H.C.Mahadevappa informed the Assembly on 30 June 2014.", "keywords": "Assembly Session, Shiradi Ghat, H.C. Mahadevappa, Karnataka, Shiradi Ghat road work to begin soon, ರಸ್ತೆ ಅಭಿವೃದ್ಧಿ, ಎರಡು ತಿಂಗಳು ಶಿರಾಡಿ ಘಾಟ್ ಬಂದ್, ಎಚ್ ಸಿ ಮಹದೇವಪ್ಪ, ಶಿರಾಢಿ ಘಾಟ್, ಕರ್ನಾಟಕ, ರಸ್ತೆ, ವಿಧಾನಸಭೆ ಅಧಿವೇಶನ", "articleBody":"ಬೆಂಗಳೂರು, ಜು.1 : ಶಿರಾಡಿ ಘಾಟ್ ಸಂಚಾರ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡು ಕಷ್ಟ ಅನುಭವಿಸಿದ ಜನರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಸರ್ಕಾರ ಪದೇ-ಪದೇ ಹಾಳಾಗುವ ಶಿರಾಡಿ ಘಾಟ್& zwnj ರಾಷ್ಟ್ರೀಯ ಹೆದ್ದಾರಿಯ ಶಾಶ್ವತ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಿದೆ. ಕಾಮಗಾರಿ ಆರಂಭವಾದ ನಂತರ ಎರಡು ತಿಂಗಳ ಕಾಲ ಘಾಟ್ ನಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗುತ್ತದೆ.ಸೋಮವಾರದ ಕಲಾಪದಲ್ಲಿ ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಪ್ರಶ್ನೆಗೆ ಉತ್ತರ ನೀಡಿದ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು, ಶಿರಾಢಿ ಘಾಟ್ ರಸ್ತೆಯನ್ನು ಗುಂಡಿ ರಹಿತ ರಸ್ತೆಯನ್ನಾಗಿ ನಿರ್ವಹಣೆ ಮಾಡಿದ ನಂತರವೂ ಭಾರಿ ವಾಹನಗಳ ಸಂಚಾರದಿಂದ ಹಾಗೂ ಚಾಲಕರ ಅನಿಯಮಿತ ಚಾಲನೆಯಿಂದಾಗಿ ಪದೇ ಪದೇ ಅಪಘಾತ ಉಂಟಾಗುತ್ತಿರುತ್ತದೆ. ಆದ್ದರಿಂದ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.ಕಾಮಗಾರಿ ಆರಂಭವಾದ ನಂತರ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ. ಈ ಸಂದರ್ಭದಲ್ಲಿ, ಪರ್ಯಾಯ ಮಾರ್ಗ ಅಂತಿಮಗೊಳಿಸುವ ಸಂಬಂಧ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಸೋಮವಾರದ ಕಲಾಪದ ಮುಖ್ಯಾಂಶಗಳುಎರಡು ಕಾಮಗಾರಿ : ಶಿರಾಡಿ ಘಾಟ್ ನಲ್ಲಿ ಎರಡು ಕಾಮಗಾರಿ ಕೈಗೊಳ್ಳಲು ಸರ್ಕಾರ ತಿರ್ಮಾನಿಸಿದೆ ಮೊದಲ ಕಾಮಗಾರಿಯಲ್ಲಿ ಹೆದ್ದಾರಿಯ 237 ರಿಂದ 250.62 ಕಿ.ಮೀ ವರೆಗಿನ ರಸ್ತೆಯನ್ನು ಕಾಂಕ್ರೀಟ್& zwnj ರಸ್ತೆಯಾಗಿ ನಿರ್ಮಾಣ ಮಾಡಲಾಗುತ್ತದೆ. ಈ ಕಾಮಗಾರಿಗಾಗಿ 69.90 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದ್ದು, ಕೇಂದ್ರ ಭೂಸಾರಿಗೆ ಸಚಿವಾಲಯದ ಅನುಮೋದನೆ ಪಡೆಯಲಾಗಿದೆ& nbsp ಎಂದರು.ಈ ಕಾಮಗಾರಿಯನ್ನು ಮಂಗಳೂರಿನ ಮೆ.ಓಷನ್& zwnj ಕನ್& zwnj ಸ್ಟ್ರಕ್ಷನ್ ಇಂಡಿಯಾ ಪ್ರೈ.ಲಿ.ಗೆ ಟೆಂಡರ್& zwnj ಆಧಾರದಲ್ಲಿ ವಹಿಸಲಾಗಿದ್ದು, ಕಾಮಗಾರಿಗೆ ಬೇಕಾದ ಸಾಮಗ್ರಿಗಳ ಸಂಗ್ರಹಣೆ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಚ್.ಸಿ.ಮಹದೇವಪ್ಪ ಸದನಕ್ಕೆ ಮಾಹಿತಿ ನೀಡಿದರು.ಎರಡನೇ ಕಾಮಗಾರಿ : ಹೆದ್ದಾರಿಯ 216 ರಿಂದ 237 ಕಿ.ಮೀರವರೆಗೆ ರಸ್ತೆಯನ್ನು ಬಲಪಡಿಸುವ ಕಾಮಗಾರಿಗೆ ಸೇರಿದಂತೆ ವಿವಿಧ ಕಾಮಗಾರಿ ನಡೆಸಲು ಕೇಂದ್ರ ಭೂಸಾರಿಗೆ ಸಚಿವಾಲಯ ಅನುಮತಿ ನೀಡಿದ್ದು, ಈ ಕಾಮಗಾರಿಗೆ ಟೆಂಡರ್& zwnj ಕರೆಯಲಾಗಿದೆ. ಜುಲೈ 19 ಟೆಂಡರ್& zwnj ಸ್ವೀಕರಿಸಲು ಕೊನೆಯ ದಿನವಾಗಿದ್ದು, ಈ ಎರಡೂ ಕಾಮಗಾರಿಗಳನ್ನು ಟೆಂಡರ್& zwnj ನಲ್ಲಿ ನಿಗದಿಪಡಿಸಿರುವ ಕಾಲಾವಧಿಯೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.ಮಂಗಳೂರು-ಬೆಂಗಳೂರು ರಸ್ತೆ : ರಾಷ್ಟ್ರೀಯ ಹೆದ್ದಾರಿ 48 ಶಿರಾಡಿ ಘಾಟ್ ಮೂಲಕ ಹಾದು ಹೋಗುತ್ತದೆ. ಮಂಗಳೂರು ಮತ್ತು ಬೆಂಗಳೂರು ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಹಾಸನ, ಕುಣಿಗಲ್, ಚನ್ನರಾಯಪಟ್ಟಣ, ಸಕಲೇಶಪುರ ಮುಂತಾದವು ಹೆದ್ದಾರಿ ವ್ಯಾಪ್ತಿಯಲ್ಲಿ ಬರುತ್ತವೆ." }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಾಯಕಾರಿ ಶಿರಾಡಿ ಘಾಟ್ ರಸ್ತೆಗೆ ಕಾಯಕಲ್ಪ

|
Google Oneindia Kannada News

ಬೆಂಗಳೂರು, ಜು.1 : ಶಿರಾಡಿ ಘಾಟ್ ಸಂಚಾರ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡು ಕಷ್ಟ ಅನುಭವಿಸಿದ ಜನರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಸರ್ಕಾರ ಪದೇ-ಪದೇ ಹಾಳಾಗುವ ಶಿರಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯ ಶಾಶ್ವತ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಿದೆ. ಕಾಮಗಾರಿ ಆರಂಭವಾದ ನಂತರ ಎರಡು ತಿಂಗಳ ಕಾಲ ಘಾಟ್ ನಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗುತ್ತದೆ.

ಸೋಮವಾರದ ಕಲಾಪದಲ್ಲಿ ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಪ್ರಶ್ನೆಗೆ ಉತ್ತರ ನೀಡಿದ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು, ಶಿರಾಢಿ ಘಾಟ್ ರಸ್ತೆಯನ್ನು ಗುಂಡಿ ರಹಿತ ರಸ್ತೆಯನ್ನಾಗಿ ನಿರ್ವಹಣೆ ಮಾಡಿದ ನಂತರವೂ ಭಾರಿ ವಾಹನಗಳ ಸಂಚಾರದಿಂದ ಹಾಗೂ ಚಾಲಕರ ಅನಿಯಮಿತ ಚಾಲನೆಯಿಂದಾಗಿ ಪದೇ ಪದೇ ಅಪಘಾತ ಉಂಟಾಗುತ್ತಿರುತ್ತದೆ. ಆದ್ದರಿಂದ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.

H.C.Mahadevappa

ಕಾಮಗಾರಿ ಆರಂಭವಾದ ನಂತರ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ. ಈ ಸಂದರ್ಭದಲ್ಲಿ, ಪರ್ಯಾಯ ಮಾರ್ಗ ಅಂತಿಮಗೊಳಿಸುವ ಸಂಬಂಧ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು. [ಸೋಮವಾರದ ಕಲಾಪದ ಮುಖ್ಯಾಂಶಗಳು]

ಎರಡು ಕಾಮಗಾರಿ : ಶಿರಾಡಿ ಘಾಟ್ ನಲ್ಲಿ ಎರಡು ಕಾಮಗಾರಿ ಕೈಗೊಳ್ಳಲು ಸರ್ಕಾರ ತಿರ್ಮಾನಿಸಿದೆ ಮೊದಲ ಕಾಮಗಾರಿಯಲ್ಲಿ ಹೆದ್ದಾರಿಯ 237 ರಿಂದ 250.62 ಕಿ.ಮೀ ವರೆಗಿನ ರಸ್ತೆಯನ್ನು ಕಾಂಕ್ರೀಟ್‌ ರಸ್ತೆಯಾಗಿ ನಿರ್ಮಾಣ ಮಾಡಲಾಗುತ್ತದೆ. ಈ ಕಾಮಗಾರಿಗಾಗಿ 69.90 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದ್ದು, ಕೇಂದ್ರ ಭೂಸಾರಿಗೆ ಸಚಿವಾಲಯದ ಅನುಮೋದನೆ ಪಡೆಯಲಾಗಿದೆ ಎಂದರು.

ಈ ಕಾಮಗಾರಿಯನ್ನು ಮಂಗಳೂರಿನ ಮೆ.ಓಷನ್‌ ಕನ್‌ಸ್ಟ್ರಕ್ಷನ್ ಇಂಡಿಯಾ ಪ್ರೈ.ಲಿ.ಗೆ ಟೆಂಡರ್‌ ಆಧಾರದಲ್ಲಿ ವಹಿಸಲಾಗಿದ್ದು, ಕಾಮಗಾರಿಗೆ ಬೇಕಾದ ಸಾಮಗ್ರಿಗಳ ಸಂಗ್ರಹಣೆ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಚ್.ಸಿ.ಮಹದೇವಪ್ಪ ಸದನಕ್ಕೆ ಮಾಹಿತಿ ನೀಡಿದರು.

ಎರಡನೇ ಕಾಮಗಾರಿ : ಹೆದ್ದಾರಿಯ 216 ರಿಂದ 237 ಕಿ.ಮೀರವರೆಗೆ ರಸ್ತೆಯನ್ನು ಬಲಪಡಿಸುವ ಕಾಮಗಾರಿಗೆ ಸೇರಿದಂತೆ ವಿವಿಧ ಕಾಮಗಾರಿ ನಡೆಸಲು ಕೇಂದ್ರ ಭೂಸಾರಿಗೆ ಸಚಿವಾಲಯ ಅನುಮತಿ ನೀಡಿದ್ದು, ಈ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. ಜುಲೈ 19 ಟೆಂಡರ್‌ ಸ್ವೀಕರಿಸಲು ಕೊನೆಯ ದಿನವಾಗಿದ್ದು, ಈ ಎರಡೂ ಕಾಮಗಾರಿಗಳನ್ನು ಟೆಂಡರ್‌ನಲ್ಲಿ ನಿಗದಿಪಡಿಸಿರುವ ಕಾಲಾವಧಿಯೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಮಂಗಳೂರು-ಬೆಂಗಳೂರು ರಸ್ತೆ : ರಾಷ್ಟ್ರೀಯ ಹೆದ್ದಾರಿ 48 ಶಿರಾಡಿ ಘಾಟ್ ಮೂಲಕ ಹಾದು ಹೋಗುತ್ತದೆ. ಮಂಗಳೂರು ಮತ್ತು ಬೆಂಗಳೂರು ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಹಾಸನ, ಕುಣಿಗಲ್, ಚನ್ನರಾಯಪಟ್ಟಣ, ಸಕಲೇಶಪುರ ಮುಂತಾದವು ಹೆದ್ದಾರಿ ವ್ಯಾಪ್ತಿಯಲ್ಲಿ ಬರುತ್ತವೆ.

English summary
The Union government has approved 2 project proposals to build concrete roads on the vexed Shiradi Ghat stretch of National Highway–48 at a cost of Rs 154 crore and the work will commence soon. Karnataka PWD Minister H.C.Mahadevappa informed the Assembly on 30 June 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X