ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವಣೂರಿನ ಅಧ್ಯಾಪಕ ನಗರದಲ್ಲಿ ಹಲವಾರು ಅವ್ಯವಸ್ಥೆ

|
Google Oneindia Kannada News

ಹಾವೇರಿ, ಸೆ.5 : ನಗರಕ್ಕೆ ಹೊಂದಿಕೊಂಡಂತೆ ಇರುವ ಬಡಾವಣೆಯಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಂಡು ನೆಮ್ಮದಿಯಿಂದ ಜೀವಿಸುವ ನೂರಾರು ಶಿಕ್ಷಕರ ಕನಸಿಗೆ ಅಡ್ಡಿ ಉಂಟಾಗಿದೆ. ಸರ್ಕಾರಿ ನೌಕರರಾಗಿದ್ದರು ಅವರು ವಾಸಿಸುವ ಬಡಾವಣೆ ಮಾತ್ರ ಕನಿಷ್ಠ ಮೂಲಭೂತ ಸೌಕರ್ಯಗಳಿಂದಲೂ ವಂಚಿತವಾಗಿದೆ. ಇದು ಸವಣೂರಿನ ಅಧ್ಯಾಪಕರ ಬಡಾವಣೆಗೆ ಅವ್ಯವಸ್ಥೆಯ ಕಥೆ.

ಹಾವೇರಿ ಜಿಲ್ಲೆಯ ಸವಣೂರಿನ ಅಧ್ಯಾಪಕರ ಬಡಾವಣೆ ನೂರಾರು ಸಮಸ್ಯೆಗಳ ಆಗರ. ತಮ್ಮದೇ ಆದ ಬಡಾವಣೆಯಲ್ಲಿ ನೆಮ್ಮದಿಯಿಂದ ಜೀವನ ಮಾಡಬಹದು ಎಂದು ನಿವೇಶಗಳನ್ನು ಪಡೆದು ಮನೆಗಳನ್ನು ನಿರ್ಮಿಸಿಕೊಂಡಿದ್ದ ಶಿಕ್ಷಕರು, ಕನಿಷ್ಠ ಮೂಲಭೂತ ಸೌಲಭ್ಯಗಳು ಸಿಗದೆ ಪರದಾಡುವಂತಾಗಿದೆ. ಇದೆ ಬಡಾವಣೆಯಿಂದ ಆಯ್ಕೆಗೊಂಡ ಸದಸ್ಯರು ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯಲ್ಲಿದ್ದರೂ, ಬಡಾವಣೆಯ ಸಮಸ್ಯೆಗೆ ಮಾತ್ರ ಪರಿಹಾರ ಸಿಕ್ಕಿಲ್ಲ. [ನಿವೃತ್ತ ಶಿಕ್ಷಕರ ಸಮಾಜ ಸೇವೆಗೆ ಸಲಾಂ!]

ಅಧ್ಯಾಪಕರ ಬಡಾವಣೆಗೆ ಸಕಲ ಸೌಕರ್ಯ ಒದಗಿಸಿ ಕೊಡುವುದಾಗಿ ಹೇಳಿದ್ದ ಪುರಸಭೆ ಅಧಿಕಾರಿಗಳು ಅದನ್ನು ಮರೆತಿದ್ದಾರೆ. ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರು ಪುರಸಭೆ ಕಚೇರಿಗೆ ಅಗತ್ಯ ಸೌಲಭ್ಯಗಳನ್ನು ನೀಡಿಎಂದು ಮನವಿ ಸಲ್ಲಿಸುತ್ತಾ, ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. [ಮಕ್ಕಳ ಮುಂದೆ ಬಾಲ್ಯದ ರಹಸ್ಯ ಬಿಚ್ಚಿಟ್ಟ ಮೋದಿ]

ಇಡೀ ಬಡಾವಣೆಯಲ್ಲಿ 50 ಮನೆಗಳಿದ್ದು, ಮಳೆಗಾಲದ ಅವಧಿಯಲ್ಲಿ ಕೆಸರಿನಲ್ಲಿ ಓಡಾಡುವುದು ಅನಿವಾರ್ಯವಾಗಿದೆ. ಹುಳ ಹುಪ್ಪಡಿ, ಸೊಳ್ಳೆಗಳ ವಾಸಸ್ಥಳವಾಗಿರುವ ಬಡಾವಣೆಗೆ ಸಾಗುವ ರಸ್ತೆಗಳು ಹಳ್ಳಿಗಳ ರಸ್ತೆಗಳಿಂತ ದುಸ್ಥಿತಿಯಲ್ಲಿವೆ. ಚಿತ್ರಗಳಲ್ಲಿ ನೋಡಿ ಅಧ್ಯಾಪಕರ ಬಡಾವಣೆ ಸ್ಥಿತಿ

50 ಮನೆಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ

50 ಮನೆಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ

ಹಾವೇರಿ ಜಿಲ್ಲೆಯ ಸವಣೂರಿನ ಅಧ್ಯಾಪಕರ ಬಡಾವಣೆಯಲ್ಲಿ ಸುಮಾರು 50 ಮನೆಗಳಿದ್ದು ಬಡಾವಣೆ ಕನಿಷ್ಠ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. 6 ಎಕರೆ 30 ಗುಂಟೆ ಪ್ರದೇಶದಲ್ಲಿ ನಿವೇಶನ ಪಡೆದ ಶಿಕ್ಷಕರು ಇಲ್ಲಿನ ಸ್ಥಿತಿ ನೋಡಿ ಸ್ವಂತ ಮನೆಯನ್ನು ಕಟ್ಟಿಕೊಳ್ಳದೆ ಕಾದು ಕುಳಿತಿದ್ದಾರೆ. ಈ ಬಡಾವಣೆಯಲ್ಲಿರುವ ಎಲ್ಲರೂ ಶಿಕ್ಷಕರು ಆದರೆ, ಅವರಿಗೆ ಕನಿಷ್ಠ ಸೌಲಭ್ಯಗಳು ದೊರಕಿಲ್ಲ.

ಕುಡಿಯುವ ನೀರು ಮಾತ್ರ ಬರುತ್ತದೆ

ಕುಡಿಯುವ ನೀರು ಮಾತ್ರ ಬರುತ್ತದೆ

2003-04 ನೇ ಸಾಲಿನಲ್ಲಿ ಅಧಿಕೃತವಾಗಿ ಅಧ್ಯಾಪಕರ ಬಡಾವಣೆ ನೋಂದಣಿಯಾಗಿದೆ. ಬಡಾವಣೆಗೆ ಕೇವಲ ಕುಡಿಯುವ ನೀರನ್ನು ಮಾತ್ರ ಪೂರೈಸಿರುವ ಪುರಸಭೆ, ತನ್ನ ಉಳಿದ ಸೌಲಭ್ಯಗಳನ್ನು ನೀಡಲು ಮರೆತಿದೆ. ಬಡಾವಣೆಯ ಪ್ರತಿಯೊಂದು ರಸ್ತೆಗಳೂ ಕೆಸರಿನಿಂದ ಕೂಡಿದ್ದು, ಅದನ್ನು ಸ್ಥಳೀಯ ನಿವಾಸಿಗಳೇ ನಿರ್ಮಿಸಿಕೊಂಡಿದ್ದಾರೆ. ಬೀದಿ ದೀಪಗಳನ್ನು ಶಿಕ್ಷಕರು ಸ್ವಂತ ಖರ್ಚಿನಲ್ಲಿ ಅಳವಡಿಸಿಕೊಂಡಿದ್ದಾರೆ.

ಎಲ್ಲಾ ನಿಯಮ ಪಾಲನೆ ಮಾಡಲಾಗಿದೆ

ಎಲ್ಲಾ ನಿಯಮ ಪಾಲನೆ ಮಾಡಲಾಗಿದೆ

ನೂತನ ಬಡಾವಣೆಗಳಿಗೆ ಅನ್ವಯಿಸುವ ಎಲ್ಲಾ ನಿಯಮಾವಳಿಗಳನ್ನು ಪಾಲನೆ ಮಾಡಲಾಗಿದೆ. ಶಿಕ್ಷಕರು ಪುರಸಭೆಗೆ ತೆರಿಗೆ ಹಣ ಪಾವತಿ ಮಾಡುತ್ತಿದ್ದಾರೆ. 3 ಎಕರೆಗೂ ಹೆಚ್ಚಿನ ಸ್ಥಳವನ್ನು ರಸ್ತೆ, ಚರಂಡಿ, ಉದ್ಯಾನವನಕ್ಕಾಗಿ ಪುರಸಭೆಗೆ ಹಸ್ಥಾಂತರಿಸಲಾಗಿದೆ. ಆದರೆ, ಅದನ್ನು ನಿರ್ಮಿಸಲು ಮಾತ್ರ ಅಧಿಕಾರಿಗಳು ಮುಂದಾಗುತ್ತಿಲ್ಲ.

ಪ್ರತಿಭಟನೆಗೆ ಮುಂದಾದ ನಿವಾಸಿಗಳು

ಪ್ರತಿಭಟನೆಗೆ ಮುಂದಾದ ನಿವಾಸಿಗಳು

ಈ ಬಡಾವಣೆಯ ನಿವಾಸಿಗಳು ಪುರಸಭೆಯ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಕ್ಕಾಗಿ ಮನವಿ ಮಾಡಿದರೂ ಅದು ಪ್ರಯೋಜನ ಕಂಡಿಲ್ಲ. ಆದ್ದರಿಂದ, ಅನಿವಾರ್ಯವಾಗಿ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಇದೇ ಬಡಾವಣೆಯಿಂದ ಆಯ್ಕೆಗೊಂಡ ಸದಸ್ಯರೇ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದರೂ ಬಡಾವಣೆಗೆ ಮಾತ್ರ ದುಸ್ಥಿತಿಯಲ್ಲಿದೆ.

ಜನಪ್ರತಿನಿಧಿಗಳ ಮೌನ

ಜನಪ್ರತಿನಿಧಿಗಳ ಮೌನ

ಹಾವೇರಿ ಜಿಲ್ಲೆಯ ಅತಿದೊಡ್ಡ ಕೊಳಚೆ ಪ್ರದೇಶ ಎಂಬ ಹಣೆಪಟ್ಟಿ ಸವಣೂರಿಗೆ ಸದ್ಯದಲ್ಲೇ ಲಭಿಸಲಿದೆ. ಜನಪ್ರತಿನಿಧಿಗಳು ಸಹ ಇಲ್ಲಿನ ಸಮಸ್ಯೆ ಬಗ್ಗೆ ಮೌನ ವಹಿಸಿದ್ದಾರೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿಯಾದರೂ ಶಿಕ್ಷಕರ ಸಮಸ್ಯೆಯನ್ನು ಮಾನವೀಯತೆಯ ನೆಲೆಯಲ್ಲಿ ಪರಿಗಣಿಸಬೇಕು ಎಂಬ ಬೇಡಿಕೆ ನಿವಾಸಿಗಳದ್ದಾಗಿದೆ.

English summary
Teachers Colony in Savanur in Haveri District needs basic facilities. More than 50 teachers families house in colony. Teachers colony have no proper roads, street light and other facilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X