ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಗ್ಗಿ-ಹುಗ್ಗಿ: ಇಂದು ರವೀಂದ್ರ ಕಲಾಕ್ಷೇತ್ರಕ್ಕೆ ಬನ್ನಿ!

By Srinath
|
Google Oneindia Kannada News

ಬೆಂಗಳೂರು, ಜ.15: ಇಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಕ್ರಾಂತಿ ಸುಗ್ಗಿ-ಹುಗ್ಗಿ! ಗ್ರಾಮೀಣ ಕಲಾ ಸೊಗಡನ್ನು ಪ್ರತಿಬಿಂಬಿಸುವ ಮತ್ತು ಗ್ರಾಮೀಣ ಸಂಸ್ಕೃತಿ ಪ್ರೋತ್ಸಾಹಿಸುವ ಸಲುವಾಗಿ ರಾಜ್ಯ ಸರಕಾರವು 'ಸುಗ್ಗಿ-ಹುಗ್ಗಿ' ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.

ಸಂಕ್ರಮಣದ ಅಂಗವಾಗಿ ನಡೆಯಲಿರುವ ಸಂಕ್ರಾಂತಿ ಸುಗ್ಗಿ-ಹುಗ್ಗಿ ಕಾರ್ಯಕ್ರಮಕ್ಕೆ ಜ. 15ರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.

Makar Sankranti- Suggi Huggi at Ravindra Kalakshetra Bangalore Jan 15

ಸುಗ್ಗಿ ಗ್ರಾಮೀಣ ಭಾಗದ ರೈತಾಪಿ ಜನರ ಬಹುಮುಖ್ಯ ಪರ್ವ. ಸುಗ್ಗಿಯ ನಂತರ ಗ್ರಾಮಗಳಲ್ಲಿ ನಡೆಯುವ ಗ್ರಾಮೀಣ ಕಲಾ ಪ್ರಕಾರ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 'ಸಂಕ್ರಾಂತಿ ಸುಗ್ಗಿ-ಹುಗ್ಗಿ' ಎಂಬ ವಿನೂತನ ಕಾರ್ಯಕ್ರಮವನ್ನು ಸರಕಾರವೇ ನಡೆಸಿಕೊಡಲಿದೆ. ಸಂಕ್ರಾಂತಿಯಿಂದ ಯುಗಾದಿವರೆಗೂ ರಾಜ್ಯದ ಮುವತ್ತೂ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜ. 15ರಂದು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇಡೀ ದಿನ ರಾಜ್ಯದ ವಿವಿಧ ಜನಪದ ಕಲಾ ತಂಡಗಳಿಂದ ಪ್ರದರ್ಶನ, ಹಾಡು, ನೃತ್ಯ ಮತ್ತು ವಿವಿಧ ಕಲಾ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಗ್ರಾಮೀಣ ಭಾಗದ ತಿಂಡಿ ತಿನಿಸುಗಳು ಸಂಕ್ರಾಂತಿ ಹಬ್ಬದ ಮೆರುಗನ್ನು ಹೆಚ್ಚಿಸಲಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹೇಳಿದ್ದಾರೆ.

English summary
Makar Sankranti- Harvest festivals of India will be celbrated at Ravindra Kalakshetra Bangalore Jan 15. The Sankranti Suggi-Huggi programme is arrenged by Karnataka Women and Child development ministry. The whole day programme at Kalakshetra today will high light the village culture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X