ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಮತಗಟ್ಟೆಗಳಲ್ಲಿ ಮರುಮತದಾನ?

|
Google Oneindia Kannada News

ಬೆಂಗಳೂರು, ಏ. 18 : ಹದಿನಾರನೇ ಲೋಕಸಭೆಗೆ ಗುರುವಾರ ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ ಒಟ್ಟು ಶೇ 65ರಷ್ಟು ಮತದಾನವಾಗಿರುವ ಬಗ್ಗೆ ಮಾಹಿತಿ ದೊರಕಿದ್ದು, ಶುಕ್ರವಾರ ಅಂತಿಮ ಚಿತ್ರಣ ಲಭ್ಯವಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.

ಗುರುವಾರ ರಾತ್ರಿ 8.30ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ಅನಿಲ್ ಕುಮಾರ್ ಝಾ, ರಾಜ್ಯದ ಮತದಾನದ ಬಗ್ಗೆ ವಿವರ ನೀಡಿದರು. ರಾಜ್ಯದಲ್ಲಿ ಮತದಾನ ಪ್ರಮಾಣ ಸರಾಸರಿ ಶೇ.65ಕ್ಕಿಂತ ಹೆಚ್ಚಾಗಿದೆ. ಸಂಜೆ ಆರುಗಂಟೆಯವರೆಗೂ ಮತದಾನಕ್ಕೆ ಅವಕಾಶವಿದ್ದು, ನಂತರವೂ ಮತಗಟ್ಟೆ ಪ್ರಾಂಗಣದೊಳಗೆ ಸರದಿ ಸಾಲಿನಲ್ಲಿ ನಿಂತವರಿಗೂ ಮತದಾನಕ್ಕೆ ಅವಕಾಶ ನೀಡಿದ್ದರಿಂದ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದರು. [ಎಲ್ಲಿ ಎಷ್ಟು ಮತದಾನ?]

Anil Kumar Jha

ರಾಜ್ಯದಲ್ಲಿ 2009ರ ಲೋಕಸಭೆಯಲ್ಲಿ ಶೇ.58.83 ಸರಾಸರಿ ಮತದಾನವಾಗಿತ್ತು. 2013 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇ.72.25 ರಷ್ಟು ಮತದಾನವಾಗಿತ್ತು. 2014ರ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ.70ರಷ್ಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. [ಬಹಿಷ್ಕಾರದ ಪ್ರಕರಣಗಳು]

ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಶೃಂಗೇರಿ ಹಾಗೂ ಗೋವಿಂದರಾಜನಗರ ಕ್ಷೇತ್ರದ ತಲಾ ಒಂದು ಮತಗಟ್ಟೆಯಲ್ಲಿ ಮರು ಮತದಾನ ನಡೆಸುವ ಸಾಧ್ಯತೆ ಇದೆ ಎಂದು ತಿಳಿಸಿದ ಅವರು, 93 ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಸಮಸ್ಯೆ ಕಾಣಿಸಿದ್ದರಿಂದ ಬದಲಾವಣೆ ಮಾಡಲಾಗಿದೆ ಹಾಗೂ 10 ಕ್ಕೂ ಹೆಚ್ಚು ಕಡೆ ಮತದಾನ ಬಹಿಷ್ಕಾರ ನಡೆದ ವರದಿಯಾಗಿದೆ ಎಂದು ಮಾಹಿತಿ ನೀಡಿದರು. [ಮತದಾನದ ಚಿತ್ರಗಳನ್ನು ನೋಡಿ]

ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಘರ್ಷಣೆ, ಮತಯಂತ್ರದಲ್ಲಿನ ತಾಂತ್ರಿಕ ದೋಷದಿಂದ ಕೆಲಕಾಲ ಮತದಾನ ಸ್ಥಗಿತ ಸೇರಿದಂತೆ ಕೆಲ ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಅನಿಲ್‌ಕುಮಾರ್‌ ಝಾ ಹೇಳಿದರು.

English summary
Elections 2014 : Karnataka witnessed an impressive voter turnout as more than 65 percent. Re polling could be ordered in one booth each in Sringeri and Govindarajnagar due to faulty electronic voting machines (EVMs) said Chief Electoral Officer Anil Kumar Jha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X