ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯ್ದೆ

|
Google Oneindia Kannada News

ಬೆಂಗಳೂರು, ಜು. 19 : ರಾಜ್ಯದಲ್ಲಿನ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತ್ಯಾಚಾರ ಎಸಗುವ ದುಷ್ಕರ್ಮಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಕರ್ನಾಟಕದಲ್ಲಿ ನಡೆದ ಸರಣಿ ಅತ್ಯಾಚಾರ ಪ್ರಕರಣಗಳ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ನಾಗರಿಕರಲ್ಲಿ ಪೊಲೀಸ್ ಇಲಾಖೆ ಕುರಿತು ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಅಪರಾಧಿಗಳ ಚರಿತ್ರೆ ಗಮನಿಸಿ ಗೂಂಡಾ ಕಾಯ್ದೆ ಅಡಿ ಶಿಕ್ಷಿಸಬೇಕು. ಅತ್ಯಾಚಾರ ಪ್ರಕರಣಗಳಲ್ಲಿ ಕರ್ತವ್ಯಲೋಪ ಎಸಗಿ, ಆರೋಪಿಗಳನ್ನು ರಕ್ಷಿಸಲು ಸಹಕಾರ ನೀಡುವ ಅಧಿಕಾರಿಗಳ ವಿರುದ್ಧ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ 166ಎ ಸೆಕ್ಷನ್ ಅಡಿ ಎಫ್‌ಐಆರ್ ದಾಖಲಿಸಿ, ಬಂಧಿಸುವಂತೆ ನಿರ್ದೇಶನ ನೀಡಿದ್ದಾರೆ. [ಸದನದಲ್ಲಿ ಸಿಎಂ 'ನಿದ್ದೆ'ರಾಮಯ್ಯ ಆಗ್ತಾರೆ]

ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಗೃಹ ಸಚಿವ ಕೆ.ಜೆ.ಜಾರ್ಜ್, ನಾಗರಿಕರ ರಕ್ಷಣೆಗೆ ಪೊಲೀಸ್ ಇಲಾಖೆ 24 ಗಂಟೆ ಶ್ರಮಿಸುತ್ತದೆ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯ ವಿವರಗಳು

ಎಸಿಪಿ-ಡಿಸಿಪಿಗಳು ಠಾಣೆಗೆ ಭೇಟಿ ನೀಡಬೇಕು

ಎಸಿಪಿ-ಡಿಸಿಪಿಗಳು ಠಾಣೆಗೆ ಭೇಟಿ ನೀಡಬೇಕು

ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಗೃಹ ಸಚಿವ ಕೆ.ಜೆ.ಜಾರ್ಜ್, ಜನರಲ್ಲಿ ವಿಶ್ವಾಸ ಮೂಡಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಅವುಗಳ ಬಗ್ಗೆ ಮಾಹಿತಿ ನೀಡಿದರು.

* ಮಹಿಳಾ ಮತ್ತು ಮಕ್ಕಳ ಮೇಲಿನ ಅತ್ಯಾಚಾರದ ದೂರುಗಳು ಬಂದ ಕೂಡಲೇ ಎಸಿಪಿ-ಡಿಸಿಪಿಗಳ ಗಮನಕ್ಕೆ ತಂದು ಕೂಡಲೇ ಕ್ರಮ ಜರುಗಿಸಬೇಕು.

* ಎಸಿಪಿ-ಡಿಸಿಪಿಗಳು ನಿಯಮಿತವಾಗಿ ಠಾಣೆಗೆ ಭೇಟಿ ನೀಡಿ ಆಗುಹೋಗುಗಳ ಕುರಿತು ವಿಚಾರಣೆ ನಡೆಸಬೇಕು.

* ಅತ್ಯಾಚಾರ ಪ್ರಕರಣದಲ್ಲಿ ಈಗಿರುವ ನಿಯಮದಡಿ ಗೂಂಡಾಕಾಯಿದೆ ಹಾಕಲು ಅವಕಾಶವಿದ್ದು, ಬಲಿಷ್ಠ ನಿಯಮಾವಳಿ ರೂಪಿಸಲು ಕಾನೂನು ಇಲಾಖೆ ಜತೆ ಚರ್ಚೆ.

166ಎ ಸೆಕ್ಷನ್ ಅಡಿ ಬಂಧನ

166ಎ ಸೆಕ್ಷನ್ ಅಡಿ ಬಂಧನ

* ಅತ್ಯಾಚಾರ ಪ್ರಕರಣದಲ್ಲಿ ಸರಿಯಾಗಿ ದೂರು ದಾಖಲಿಸಿಕೊಳ್ಳದೇ, ಆರೋಪಿಗಳನ್ನು ರಕ್ಷಿಸಲು ಸಹಕಾರ ನೀಡುವ ಅಧಿಕಾರಿಗಳ ವಿರುದ್ಧ
166ಎ ಸೆಕ್ಷನ್ ಅಡಿ ಮೊಕದ್ದಮೆ ದಾಖಲು, ಬಂಧನ.

* ಹೊಯ್ಸಳ-ಚೀತಾಗೆ ಸೈರನ್, ತಿಳಿ ಹಳದಿ ದೀಪ ಅಳವಡಿಸಿ ಕ್ರಿಮಿನಲ್‌ಗಳಲ್ಲಿ ಭಯ ಹುಟ್ಟಿಸಲು ಆದ್ಯತೆ.

* ಬೆಂಗಳೂರು, ಮೈಸೂರಿನ ಎಲ್ಲಾ ಹಾಗೂ ಮಂಗಳೂರಿನ ಆಯ್ದ ಪೊಲೀಸ್ ಠಾಣೆಗಳಲ್ಲಿ ಸಿ.ಸಿ. ಟಿವಿಗಳನ್ನು ಪ್ರಾಯೋಗಿಕ ಅಳವಡಿಕೆ.

* ಮಹಿಳಾ ಸಹಾಯವಾಣಿ 1091ಗೆ ಬರುವ ದೌರ್ಜನ್ಯ ದೂರುಗಳ ನಿಗಾ ಡಿಸಿಪಿ ಕಂಟ್ರೋಲ್ ವ್ಯಾಪ್ತಿಗೆ.

* ಹೊಯ್ಸಳ-ಚೀತಾ ಸಮರ್ಪಕ ಕಾರ್ಯನಿರ್ವಹಣೆ ಉಸ್ತುವಾರಿಗೆ ಪ್ರತ್ಯೇಕ ಡಿಸಿಪಿ ಕಂಟ್ರೋಲ್ ನೇಮಕ.

10 ತ್ವರಿತ ನ್ಯಾಯಾಲಯ ಸ್ಥಾಪನೆ

10 ತ್ವರಿತ ನ್ಯಾಯಾಲಯ ಸ್ಥಾಪನೆ

* ಮಹಿಳಾ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕೆ ಹೊಸದಾಗಿ 10 ತ್ವರಿತ ನ್ಯಾಯಾಲಯ, ವಿಶೇಷ ನ್ಯಾಯಾಧೀಶರ ನೇಮಕಕ್ಕೆ ಹೈಕೋರ್ಟ್‌ಗೆ ಮನವಿ.

* ಬೆಂಗಳೂರಿನ ನೈಟ್‌ಲೈಫ್‌ಗೂ ಅಪರಾಧ ಕೃತ್ಯಗಳಿಗೆ ಸಂಬಂಧ ಇಲ್ಲದೇ ಇರುವುದರಿಂದ ಒಂದು ವರ್ಷ ನೈಟ್‌ಲೈಫ್ ಮುಂದುವರಿಕೆ.

* ಅಪರಾಧ ಕೃತ್ಯಗಳನ್ನು ತಡೆಗೆ ಶಿಫಾರಸಲು ಮಾಡಲು ನಾಲ್ಕೈದು ದಿನಗಳಲ್ಲಿ ತಜ್ಞರ ಸಮಿತಿ ರಚನೆ.

ಅಪರಾಧ ತಡೆಗೆ ತಜ್ಞರ ಸಮಿತಿ

ಅಪರಾಧ ತಡೆಗೆ ತಜ್ಞರ ಸಮಿತಿ

ಅಪರಾಧ ಕೃತ್ಯಗಳನ್ನು ತಡೆಗೆ ಶಿಫಾರಸಲು ಮಾಡಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಈ ಸಮಿತಿಯಲ್ಲಿ ಶಾಸಕರು, ಮೇಲ್ಮನೆ ಸದಸ್ಯರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಕಾನೂನು-ರಾಜಕೀಯ ಹಿನ್ನೆಲೆಯಿರುವ ಸಮರ್ಥರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚನೆಯಾಗಲಿದ್ದು, ಮೂರು ತಿಂಗಳಲ್ಲಿ ವರದಿ ನೀಡುವಂತೆ ಸಮಿತಿಗೆ ಮನವಿ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿಗಳು ಹೇಳಿದ್ದೇನು?

ಮುಖ್ಯಮಂತ್ರಿಗಳು ಹೇಳಿದ್ದೇನು?

ಸರಣಿ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಬಿಜೆಪಿ ಅಧಿಕಾರದ ಅವಧಿಯಲ್ಲಿ ಸಚಿವರೊಬ್ಬರ ವಿರುದ್ಧ ಅತ್ಯಾಚಾರ ಆರೋಪ ಬಂದಾಗ ಆರೆಸ್ಟ್ ಮಾಡಿದ್ದರೆ? ಬ್ಲೂ ಫಿಲಂ ನೋಡಿದ ಸಚಿವರನ್ನು ಬಂಧಿಸಿದ್ದರೆ? ಸಭಾತ್ಯಾಗ ಮಾಡಿದ್ದು ಏಕೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ತನಿಖಾಧಿಕಾರಿ ವಿರುದ್ಧವೇ ಮೊಕದ್ದಮೆ ಹೂಡಿ, ಆರೆಸ್ಟ್ ಮಾಡಿದ್ದೇವೆ". ಎಂದು ತಿಳಿಸಿದ್ದಾರೆ.

English summary
After several cases of rape came to light in Bangalore and other parts of the Karnataka in the past few days, the government on Friday decided to strengthen the Goonda Act and set up 10 more fast-track courts to try sexual assault cases. The decisions were taken during a meeting chaired by CM Siddaramaiah, Home Minister K.J. George and senior police officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X