ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಸಚಿವರು ರಾಜೀನಾಮೆ ನೀಡಿದರೆ ಅತ್ಯಾಚಾರ ನಿಲ್ಲುತ್ತಾ?

|
Google Oneindia Kannada News

ಬೆಂಗಳೂರು, ಜು 22: ಗೃಹ ಸಚಿವರು ರಾಜೀನಾಮೆ ನೀಡಿದರೆ ಅತ್ಯಾಚಾರ ನಿಲ್ಲುತ್ತಾ ಎಂದು ಜೆಡಿಎಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅತ್ಯಾಚಾರ ಪ್ರಕರಣದ ಬಗ್ಗೆ ಸೋಮವಾರ (ಜು 21) ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಯಾರೋ ಪ್ರತಿಭಟನೆ ಮಾಡಿದರು ಎಂದು ಶಾಲೆಯ ಅಧ್ಯಕ್ಷರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ತಪ್ಪು ಎಂದು ಎಚ್ಡಿಕೆ ಅಭಿಪ್ರಾಯ ಪಟ್ಟಿದ್ದಾರೆ. (ಗೃಹ ಸಚಿವರ ರಾಜೀನಾಮೆಗೆ ಸದನದಲ್ಲಿ ಒತ್ತಡ)

ಸತತ ಒಂದು ಗಂಟೆ ಕಾಲ ಸದನದಲ್ಲಿ ಈ ವಿಚಾರದ ಮೇಲೆ ಭಾಷಣ ಮಾಡಿದ ಕುಮಾರಸ್ವಾಮಿ, ಶಾಲೆಯ ಆಡಳಿತ ಮಂಡಳಿಯೇ ಬಾಲಕಿ ಮಾನಸಿಕ ಅಸ್ವಸ್ಥೆ ಎಂದು ಪ್ರಮಾಣಪತ್ರ ನೀಡಿದೆ. ಹಾಗಿದ್ದಾಗ, ಶಾಲೆಯ ಆಡಳಿತ ಮಂಡಳಿ ಮತ್ತು ಶಾಲೆಯ ಅಧ್ಯಕ್ಷರನ್ನು ಆರೋಪಿಯನ್ನಾಗಿ ಮಾಡುವುದು ತಪ್ಪು ಎಂದು ಕುಮಾರಸ್ವಾಮಿ ಶಾಲೆಯ ಆಡಳಿತ ಮಂಡಳಿಯನ್ನು ಸಮರ್ಥಿಸಿಕೊಂಡು ಮಾತನಾಡಿದ್ದಾರೆ.

ನಗರದ ವಿಬ್‌ ಗಯಾರ್‌ ಶಾಲೆಯಲ್ಲಿ ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿ ಬುದ್ಧಿಮಾಂದ್ಯಳಲ್ಲ. ಆಕೆ ಬುದ್ಧಿವಂತೆ ಹುಡುಗಿ, ಈ ಘಟನೆಯಲ್ಲಿ ಶಾಲೆಯಿಂದಲೇ ತಪ್ಪಾಗಿದೆ. ಆಡಳಿತ ಮಂಡಳಿ ಘಟನೆಯನ್ನು ತಡೆಯಬಹುದಿತ್ತು. ಬಂಧಿತನಾಗಿರುವ ದೈಹಿಕ ಶಿಕ್ಷಕನನ್ನು ನೇಮಕ ಮಾಡಿಕೊಳ್ಳುವ ಮೊದಲು ಆತನ ಹಿನ್ನೆಲೆ ತಿಳಿದುಕೊಳ್ಳಬೇಕಿತ್ತು ಎಂದು ಗೃಹ ಸಚಿವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಕುಮಾರಸ್ವಾಮಿ ಸದನದಲ್ಲಿ ಮಾತನಾಡುತ್ತಿದ್ದರು.

ಸಿದ್ದು ಸರಕಾರವನ್ನು ಸಮರ್ಥಿಸಿ, ಪೊಲೀಸ್ ಇಲಾಖೆಯನ್ನು ಜಾಡಿಸಿದ ಕುಮಾರಸ್ವಾಮಿ, ಮುಂದೆ ಓದಿ..

ಸಚಿವರ ರಾಜೀನಾಮೆ ಅನಗತ್ಯ

ಸಚಿವರ ರಾಜೀನಾಮೆ ಅನಗತ್ಯ

ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಕ್ಕಾಗಿ ಗೃಹ ಸಚಿವರ ರಾಜೀನಾಮೆ ಕೇಳುವುದು ಹಾಸ್ಯಾಸ್ಪದ. ಗೃಹ ಸಚಿವರು ರಾಜೀನಾಮೆ ನೀಡಿದರೆ ರಾಜ್ಯದಲ್ಲಿ ಅತ್ಯಾಚಾರ ನಡೆಯುವುದೇ ಇಲ್ಲವೆಂದಾದರೆ ನಾನೂ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೆ - ಕುಮಾರಸ್ವಾಮಿ

ಬಾಲಕಿ ಜೊತೆ ಟೀಚರ್ ಒಬ್ಬರಿದ್ದರು

ಬಾಲಕಿ ಜೊತೆ ಟೀಚರ್ ಒಬ್ಬರಿದ್ದರು

ಬಾಲಕಿ ಜೊತೆ ಟೀಚರ್ ಒಬ್ಬರಿದ್ದರು. ಆಕೆ ಈಗ ಎಲ್ಲಿದ್ದಾಳೆ ಎಂದು ಪೊಲೀಸ್ ಇಲಾಖೆ ಪತ್ತೆ ಹಚ್ಚುವ ಕೆಲಸವನ್ನು ಮಾಡಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಡ್ರಿಂಕ್ ಎಂಡ್ ಡ್ರೈವ್ ಹಿಡೀತಾರೆ

ಡ್ರಿಂಕ್ ಎಂಡ್ ಡ್ರೈವ್ ಹಿಡೀತಾರೆ

ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ ಎಂದರೆ ರಾತ್ರಿ ಹೊತ್ತು ಡ್ರಿಂಕ್ ಎಂಡ್ ಡ್ರೈವ್ ಕೇಸು ಹಿಡಿಯೋಕೆ ಹೋಗ್ತಾರೆ. ಸಾಲುಗಟ್ಟಿ ಈ ಕೆಲಸಕ್ಕೆ ಪೊಲೀಸರು ನಿಂತಿರುತ್ತಾರೆ. ಅದು ಬಿಟ್ಟು ಪೊಲೀಸರು ಬೇರೇನೂ ಮಾಡಲ್ಲ. ಬೆಂಗಳೂರಿನಲ್ಲಿರುವ ಪೊಲೀಸರು ರಿಯಲ್ ಎಸ್ಟೇಟ್ ಏಜೆಂಟರು - ಕುಮಾರಸ್ವಾಮಿ.

ತಪ್ಪು ಒಬ್ಬ ಪೊಲೀಸ್ ಇನ್ಸ್ ಪೆಕ್ಟರ್ ರದ್ದಲ್ಲ

ತಪ್ಪು ಒಬ್ಬ ಪೊಲೀಸ್ ಇನ್ಸ್ ಪೆಕ್ಟರ್ ರದ್ದಲ್ಲ

ಚಲಿಸುವ ಕಾರಿನಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಈ ಘಟನೆಯಲ್ಲಿ ಪುಲಿಕೇಶಿ ನಗರದ ಪೊಲೀಸ್ ಇನ್ಸ್ ಪೆಕ್ಟರ್ ರಫೀಕ್ ಅವರ ತಲೆದಂಡ ಮಾಡಲಾಯಿತು. ತಪ್ಪು ಅವರೊಬ್ಬರದ್ದೇ ಅಲ್ಲ. ಇಡೀ ನಮ್ಮ ವ್ಯವಸ್ಥೆಯದ್ದು ಎಂದಿದ್ದಾರೆ.

ರಾಜಕೀಯ ಸನ್ಯಾಸದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ

ರಾಜಕೀಯ ಸನ್ಯಾಸದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ

ನನ್ನ ಸರಕಾರದ ಅವಧಿಯಲ್ಲಿ ಸಮಾಜಘಾತುಕ ಶಕ್ತಿಗಳನ್ನು ರಕ್ಷಿಸುವ ಕೆಲಸ ಮಾಡಿಲ್ಲ. ನಾನು ರಕ್ಷಣೆ ಮಾಡಿದ್ದೇನೆಂದು ಸಾಬೀತು ಮಾಡಿದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವೆ.

English summary
Rape incidents increasing in state, JDS Leader and former Chief Minister H D Kumaraswamy statement in Assembly on June 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X