ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್ : ಡಿವಿಎಸ್ ರಿಂದ ಏನು ನಿರೀಕ್ಷೆಯಿದೆ?

By Mahesh
|
Google Oneindia Kannada News

ಬೆಂಗಳೂರು, ಜು.7: ಕರ್ನಾಟಕ ಮೂಲದ ರೈಲ್ವೆ ಸಚಿವ ಡಿ.ವಿ ಸದಾನಂದ ಗೌಡ ಅವರು ಮಂಗಳವಾರ ಚೊಚ್ಚಲ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಇದೇ ವರ್ಷ ಮಂಡನೆಯಾದ ಮಧ್ಯಂತರ ಬಜೆಟ್ ನಲ್ಲಿ ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಹೆಚ್ಚಿನ ಪಾಲು ಸಿಗುವಂತೆ ನೋಡಿಕೊಂಡಿದ್ದರು. ಈಗ ಸದಾನಂದ ಗೌಡ ಅವರ ಮೇಲೆ ನಿರೀಕ್ಷೆಗಳ ಮೂಟೆ ಭಾರ ಹೊರೆಸಲಾಗಿದೆ.

ಯುಪಿಎ ಬಜೆಟ್ ಗಳಿಂದ 10-12 ಹೊಸ ರೈಲು, ಎಕ್ಸ್ ಪ್ರೆಸ್ ರೈಲು, ಹೊಸ ಮಾರ್ಗಗಳ ಜತೆಗೆ ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ, ಬೆಂಗಳೂರಿನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಬಿಟ್ಟರೆ ಹೆಚ್ಚಿನ ಪ್ರಯೋಜನವಾಗಲಿಲ್ಲ. [ಸುಳ್ಯಕ್ಕೆ ಶುಭಸುದ್ದಿ ಇದೆಯಂತೆ]

ಗುಲ್ಬರ್ಗಾ, ಮಂಗಳೂರಿಗೆ ಪ್ರತ್ಯೇಕ ರೈಲು ವಿಭಾಗ, ಪ್ರಮುಖ ನಗರಗಳ ನಡುವೆ ಜೋಡಿ ಮಾರ್ಗ, ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬೆಂಗಳೂರು- ಹಾಸನ, ಬೀದರ್-ಗುಲ್ಬರ್ಗಾ, ಮುನಿರಾಬಾದ್-ಮೆಹಬೂಬ್ ನಗರ ರೈಲು ಸಂಪರ್ಕ ಜತೆಗೆ ಇಂಟರ್ ಸಿಟಿ ರೈಲುಗಳ ಹೆಚ್ಚಳದ ಬೇಡಿಕೆ ಈಡೇರಿಕೆಯಾಗುವುದೇ ಕಾದು ನೋಡಬೇಕಿದೆ. [ಕೇಂದ್ರ ಬಜೆಟ್ ನಿರೀಕ್ಷೆಗಳೇನು?]

ರಾಜ್ಯಕ್ಕೆ ಸಿಕ್ಕ ರೈಲುಗಳೆಲ್ಲ ಪರರಾಜ್ಯದವರಿಗೆ ಅನುಕೂಲಕರವಾಗಿದೆ ರಾಜ್ಯದ ಆಂತರಿಕ ಸಂಚಾರ ಸಂಪರ್ಕ ಕೊರತೆಯಿಂದಾಗಿ ರಾಜ್ಯದ ಅಭಿವೃದ್ಧಿಗೆ ಹಾಲಿ ರೈಲು ಮಾರ್ಗಗಳು ಕಂಟಕ ಎಂದರೆ ತಪ್ಪಾಗಲಾರದು.[ರೈಲ್ವೇ ಖಾತೆಯನ್ನು ನಿಭಾಯಿಸಿದ ಕನ್ನಡಿಗರು]

ಬಸ್ ಸಂಚಾರವಿಲ್ಲದ ಊರಾಗಿದ್ದ ದೇವರಗುಂಡ ಎಂಬ ಕುಗ್ರಾಮದಿಂದ ರೈಲ್ವೆ ಸಚಿವರಾಗಿ ಬಜೆಟ್ ಮಂಡನೆಗೆ ಸಿದ್ದರಾಗಿರುವ ಸದಾನಂದ ಗೌಡ ಅವರು ರಾಜ್ಯದಲ್ಲಿ ರೈಲಿನ ಚುಕು ಬುಕು ಶಬ್ದ ಕೇಳದ 81ಕ್ಕೂ ಅಧಿಕ ತಾಲೂಕುಗಳಿಗೆ ಏನಾದರೂ ವರ ನೀಡುತ್ತಾರಾ ಕಾದುನೋಡಬೇಕಿದೆ.ಈ ಬಾರಿಯ ಬೇಡಿಕೆಗಳನ್ನು ವಲಯವಾರು ರೀತಿಯಲ್ಲಿ ಮುಂದೆ ನೋಡಿ...

ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನು

ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನು

* ಬಾಗಲಕೋಟೆ-ಕುಡಚಿಗೆ ಹೊಸ ಮಾರ್ಗದ ನಿರೀಕ್ಷೆಯಿದೆ.
* ಬಳ್ಳಾರಿ-ಹೊಸಪೇಟೆ ಇಂದ ಬೆಂಗಳೂರು ಇಂಟರ್ ಸಿಟಿ ರೈಲು ಓಡಾಡಿದ್ರೆ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.
* ಗುಂತಕಲ್, ಬಿಜಾಪುರ-ಬಳ್ಳಾರಿ ಇಂಟರ್ ಸಿಟಿ ರೈಲು ಹಾಗೂ ಬೀದರ್ ಗುಲ್ಬರ್ಗಾ ನಡುವೆ ರೈಲು ಮಾರ್ಗ ಬೇಕಿದೆ.
* ರಾಯಚೂರಿನಲ್ಲಿ ರೈಲು ವಿಭಾಗದ ಕಚೇರಿ ಸ್ಥಾಪನೆಯಾಗಲಿ ಅನ್ನೋ ಬೇಡಿಕೆ ಉತ್ತರ ಕರ್ನಾಟಕ ಭಾಗದ ಜನರಲ್ಲಿದೆ. ಸದ್ಯಕ್ಕೆ ಬೇಡಿಕೆ ಈಡೇರುವುದು ಕಷ್ಟ.
* ಹುಬ್ಬಳ್ಳಿಯಿಂದ ಕೊಂಕಣಕ್ಕೆ ರೈಲು ಸಂಪರ್ಕ ಅಂಕೋಲಾ ಮಾರ್ಗಕ್ಕೆ ಪರಿಸರ ಇಲಾಖೆ ಅಡ್ಡಿ.
ಬೆಳಗಾವಿ ವಿಭಾಗದ ಸಾರ್ವಜನಿಕರ ಬೇಡಿಕೆಗಳ ವಿವರ ಇಲ್ಲಿ ಓದಿ

ಹಳೇ ಮೈಸೂರು ಪ್ರಾಂತ್ಯದ ಬೇಡಿಕೆಗಳೇನು?

ಹಳೇ ಮೈಸೂರು ಪ್ರಾಂತ್ಯದ ಬೇಡಿಕೆಗಳೇನು?

* ಮೈಸೂರು-ದೆಹಲಿ ಸ್ವರ್ಣ ಜಯಂತಿ ಏಕ್ಸ್ ‍ಪ್ರೆಸ್ (ವಾರಕೊಮ್ಮೆ ಇರುವ ರೈಲು ವಾರಕ್ಕೆ 2 ಬಾರಿ ಬರಲಿ ಅನ್ನೋದು ಜನರ ಬೇಡಿಕೆ.
* ಬೆಂಗಳೂರು-ಮುಂಬೈ ಉದ್ಯಾನ್ ಏಕ್ಸ್‍ಪ್ರೆಸ್ ಮೈಸೂರಿಗೆ ವಿಸ್ತರಣೆಯಾಗಲಿ
* ಮೈಸೂರಿನಿಂದ ವಾರಣಾಸಿಗೆ ಹೊಸ ರೈಲು ಓಡಾಡಬೇಕಿದೆ.
* ಹಾಸನ-ಬೆಂಗಳೂರು ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣವಾಗಲಿ
* ಚನ್ನಪಟ್ಟಣ ರೇಲ್ವೆ ಗೇಟ್ ‍ಗೆ ಓವರ್ ‍ಬ್ರಿಡ್ ಆಗಬೇಕಿದೆ.
* ಚಿಕ್ಕಬಳ್ಳಾಪುರದಿಂದ ಪುಟ್ಟಪರ್ತಿ, ಗೌರಿಬಿದನೂರಿಗೆ ನೂತನ ಮಾರ್ಗ ಸುಧಾರಣೆ ಅಗತ್ಯ.
* ಬೆಂಗಳೂರು-ಮಾರಿಕುಪ್ಪಂಗೆ ಹೆಚ್ಚುವರಿ ರೈಲು
* ಬಂಗಾರಪೇಟೆ-ಬೆಂಗಳೂರಿಗೆ ಹೆಚ್ಚುವರಿ ರೈಲು ಓಡಾಡಬೇಕು ಅನ್ನೋದು ಹಲವು ವರ್ಷಗಳ ಬೇಡಿಕೆ.
* ಬೆಂಗಳೂರು ಮೈಸೂರು ನಡುವೆ ಜೋಡಿ ಮಾರ್ಗ, ಹೆಚ್ಚು ಎಲೆಕ್ಟ್ರಿಕ್ ಟ್ರೈನ್, ಹೈಸ್ಪೀಡ್ ರೈಲು ನಿರೀಕ್ಷೆ
* ಬೆಂಗಳೂರಿಗೆ ಸಬ್ ಅರ್ಬನ್ ರೈಲು ಸಮೀಕ್ಷೆ, ಮೆಟ್ರೋ ಕಾಮಗಾರಿ ತ್ವರಿತಗೊಳ್ಳಲು ಹೆಚ್ಚಿನ ಅನುದಾನ ನಿರೀಕ್ಷೆ

ಮಲೆನಾಡು ಭಾಗದ ನಿರೀಕ್ಷೆಗಳೇನು..?

ಮಲೆನಾಡು ಭಾಗದ ನಿರೀಕ್ಷೆಗಳೇನು..?

* ಶಿವಮೊಗ್ಗ-ಹೊನ್ನಾವರ ಮಾರ್ಗ
* ಶಿವಮೊಗ್ಗ-ಹರಿಹರ ಮಾರ್ಗ ಕಾಮಗಾರಿ ತ್ವರಿತಗೊಳಿಸುವುದು
* ಶಿವಮೊಗ್ಗ-ಬೆಂಗಳೂರಿಗೆ ಹೆಚ್ಚುವರಿ ಇಂಟರ್ ಸಿಟಿ ಹಾಗೂ ಎಕ್ಸ್ ಪ್ರೆಸ್ ರೈಲು
* ಶಿವಮೊಗ್ಗ-ಅರಸೀಕೆರೆ ಮಾರ್ಗ ಡಬ್ಲಿಂಗ್
* ಶಿವಮೊಗ್ಗ ಕಡೂರು ಚಿಕ್ಕಮಗಳೂರು ರೈಲು ಹಾಸನದವರೆಗೂ ವಿಸ್ತರಣೆ
* ಚಿಕ್ಕಮಗಳೂರು ಜಿಲ್ಲೆ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರೈಲು ಮಾರ್ಗಗಳ ಸಮೀಕ್ಷೆ
* ಸಕಲೇಶಪುರದಿಂದ ಮಂಗಳೂರು ಮಾರ್ಗಕ್ಕೆ ಹೆಚ್ಚಿನ ರೈಲು

ಮಧ್ಯ ಕರ್ನಾಟಕ ಭಾಗದ ನಿರೀಕ್ಷೆಗಳೇನು..?

ಮಧ್ಯ ಕರ್ನಾಟಕ ಭಾಗದ ನಿರೀಕ್ಷೆಗಳೇನು..?

* ಹೈದರಾಬಾದ್- ಚಿತ್ರದುರ್ಗ- ಮೈಸೂರು ರೈಲು
* ಯಶವಂತಪುರ- ಜೋಧಪುರ ರೈಲು ಮಾರ್ಗವನ್ನು ಖಾಯಂಗೊಳಿಸ್ಬೇಕು
* ಚಿತ್ರದುರ್ಗ ರೈಲು ನಿಲ್ದಾಣವನ್ನು 'ಡಿ' ದರ್ಜೆಯಿಂದ 'ಬಿ' ದರ್ಜೆಗೆ ಏರಿಸಬೇಕು
* ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ಎಲ್ಲ ರೈಲುಗಳನ್ನು ಧಾರವಾಡದಿಂದ ಬಿಡಬೇಕು
* ಹಾವೇರಿ-ಗದಗ ನೂತನ ಮಾರ್ಗ ಸಮೀಕ್ಷೆ ತ್ವರಿತಗೊಳಿಸುವಿಕೆ.

ಸಾರ್ವಜನಿಕರಿಂದ ಬಂದಿರುವ ಬೇಡಿಕೆಗಳು

ಸಾರ್ವಜನಿಕರಿಂದ ಬಂದಿರುವ ಬೇಡಿಕೆಗಳು

* ಅಹಮದಾಬಾದ್- ಮಂಗಳೂರು ಸೆಂಟ್ರಲ್ (ರಜೆ ಸಮಯದ ರೈಲು ನಿರಂತರಗೊಳಿಸಲು ಮನವಿ)
* ವಾಸ್ಕೋ-ಮಂಗಳೂರು ಸೆಂಟ್ರಲ್ ಇಂಟರ್ ಸಿಟಿ
* ಹುಬ್ಬಳ್ಳಿ- ಮಂಗಳೂರು ಸೆಂಟ್ರಲ್ (ವಯಾ ಹಾಸನ-ಅರಸೀಕೆರೆ) ರಾತ್ರಿ ಎಕ್ಸ್ ಪ್ರೆಸ್
* ಭಟ್ಕಳ-ಮಂಗಳೂರು ಸೆಂಟ್ರಲ್ ಡಿಎಂಯು
* ವಾಸ್ಕೋ-ಮಂಗಳೂರು- ತಿರುಪತಿ
* ನವದೆಹಲಿ- ಸುಬ್ರಮಣ್ಯ ರಸ್ತೆ (ವಯಾ MAO-MAJN)
* 16515/16 ಕಾರವಾರ- ಯಶವಂತಪುರ ಎಕ್ಸ್ ಪ್ರೆಸ್ ಪ್ರತಿದಿನ ಸಂಚಾರಕ್ಕೆ ಮನವಿ (ಸದ್ಯಕ್ಕೆ ವಾರಕ್ಕೆ ಮೂರಾವರ್ತಿ ಇದೆ)
* ಮಂಗಳೂರು- ಹೌರಾ ವಿವೇಕ್ ಎಕ್ಸ್ ಪ್ರೆಸ್ ಎರಡು ವಾರಕ್ಕೊಮ್ಮೆ ಸಂಚಾರಕ್ಕೆ ಮನವಿ
* ಮಂಗಳೂರು- ಜಮ್ಮು ಥಾವಿ ನವ್ ಯುಗ್ ಎಕ್ಸ್ ಪ್ರೆಸ್ ಎರಡು ವಾರಕ್ಕೊಮ್ಮೆ ಸಂಚಾರಕ್ಕೆ ಮನವಿ

 ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಗೆ ಮನವಿ

ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಗೆ ಮನವಿ

* ಕಾರೈಕಲ್-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಯಾ TPJ
* ಕೊಯಮತ್ತೂರು-ಹುಬ್ಬಳ್ಳಿ ಎಕ್ಸ್ ಪ್ರೆಸ್ ಪ್ರತಿದಿನ ವಯಾ ಯಶವಂತಪುರ
* ಮಂಗಳೂರು- ಹೌರಾ ವಯಾ ಮಡಗಾಂವ್- ಹುಬ್ಬಳ್ಳಿ
* ಕೊಯಮತ್ತೂರು-ಹುಬ್ಬಳ್ಳಿ ಎಕ್ಸ್ ಪ್ರೆಸ್ ಪ್ರತಿದಿನ ವಯಾ ಯಶವಂತಪುರ
* ಡೀಸೆಲ್ ಲೋಕೋಮೋಟಿವ್ ಘಟಕ, ಮಂಗಳೂರು
* ನೀಲಂಬುರ್-ನಂಜನಗೂಡು ರೈಲ್ವೆ ಯೋಜನೆಗೆ ಚಾಲನೆ
* ಕೊಯಮತ್ತೂರು-ಬೆಂಗಳೂರು-ಮೈಸೂರು( ಇಂಟರ್ ಸಿಟಿ ವಯಾ ತಿರುಪುರ್, ಈರೋಡ್)

English summary
Railway Minister DV Sadananda Gowda set to present the Railway Budget 2014-15 on Jul.8,2014. what will be the Karnataka share in the budget? What are the expectations from his maiden Budget? here are the details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X