ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ ಕಲಾಪವನ್ನು ಸರ್ಕಾರಿ ಚಾನೆಲ್‌ನಲ್ಲಿ ನೋಡಿ

|
Google Oneindia Kannada News

ಬೆಂಗಳೂರು, ಆ.27 : ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪ ನಡೆಯುವಾಗ ಖಾಸಗಿ ಚಾನೆಲ್‌ಗಳನ್ನು ವಿಧಾನಸೌಧದಿಂದ ದೂರವಿಡಲು ಸರ್ಕಾರ ಚಿಂತನೆ ನಡೆಸಿದೆ. ಲೋಕಸಭೆ, ರಾಜ್ಯಸಭೆ ಚಾನೆಲ್‌ಗಳ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಸರ್ಕಾರಿ ವಾಹಿನಿ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಇದು ಅನುಷ್ಠಾನವಾದಲ್ಲಿ ಖಾಸಗಿ ಚಾನೆಲ್‌ಗಳ ಕ್ಯಾಮೆರಾಗಳನ್ನು ವಿಧಾನಮಂಡಲದೊಳಗೆ ನಿಷೇಧಿಸಲಾಗುತ್ತದೆ.

ಮಂಗಳವಾರ ಖಾಸಗಿ ಕೇಬಲ್ ನೆಟ್‌ವರ್ಕ್ ಮಾಲೀಕರ ಜತೆ ವಿಕಾಸಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ವಾರ್ತಾ ಸಚಿವ ಆರ್. ರೋಷನ್‌ ಬೇಗ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಲೋಕಸಭೆ, ರಾಜ್ಯಸಭೆ ಚಾನೆಲ್ ಮಾದರಿಯಲ್ಲಿ ಸರ್ಕಾರದಿಂದ ಚಾನೆಲ್ ಆರಂಭಿಸುವ ಚಿಂತನೆ ಇದೆ ಎಂದು ಹೇಳಿದ್ದಾರೆ.

Roshan Baig

ವಿಧಾನಸಭೆ ಹಾಗೂ ವಿಧಾನಪರಿಷತ್ ಕಲಾಪದ ನೇರ ಪ್ರಸಾರವನ್ನು ಸರ್ಕಾರಿ ಚಾನೆಲ್‌ ಮಾಡಲಿದೆ. ಸರ್ಕಾರದಿಂದಲೇ ಪ್ರತ್ಯೇಕ ಚಾನೆಲ್ ಸ್ಥಾಪನೆಯಾದರೆ ಎರಡೂ ಸದನದೊಳಗೆ ಖಾಸಗಿ ಟಿವಿ ಚಾನೆಲ್‌ಗಳ ವಿಡಿಯೊ ಕ್ಯಾಮೆರಾ ನಿಷೇಧಿಸಲಾಗುವುದು. ಮುದ್ರಣ ಮಾಧ್ಯಮದ ವರದಿಗಾರರಿಗೆ ನಿಷೇಧ ಅನ್ವಯಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. [ಸರ್ಕಾರಿ ಕೇಬಲ್ ಬಗ್ಗೆ ಎರಡು ತಿಂಗಳಲ್ಲಿ ನಿರ್ಧಾರ]

ಸರ್ಕಾರದಿಂದಲೇ ಪ್ರತ್ಯೇಕ ಚಾನೆಲ್ ಆರಂಭಿಸುವ ಕುರಿತು ಸ್ಪೀಕರ್ ಕಾಗೋಡು ತಿಮ್ಮಪ್ಪ, ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರ ಜತೆ ಒಂದೆರಡು ದಿನಗಳಲ್ಲಿ ಸಮಾಲೋಚನೆ ನಡೆಸಲಾಗುವುದು ಎಂದು ರೋಷನ್ ಬೇಗ್ ಹೇಳಿದ್ದಾರೆ.

ಹಿಂದೆಯೂ ಪ್ರಸ್ತಾವನೆ ಇತ್ತು : ವಿಧಾನಮಂಡಲ ಅಧಿವೇಶನ ನಡೆಯುವಾಗ ಖಾಸಗಿ ಚಾನೆಲ್‌ಗಳ ಕ್ಯಾಮರಾಗಳನ್ನು ನಿಷೇಧಿಸಬೇಕು ಎಂಬ ಪ್ರಸ್ತಾಪ ಹಿಂದೆಯೂ ಇತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲಾಪ ನಡೆಯುವಾಗ ಸಚಿವರು ನೀಲಿಚಿತ್ರ ವೀಕ್ಷಿಸುತ್ತಿರುವುದು ಚಾನೆಲ್‌ಗಳ ಮೂಲಕ ಬಹಿರಂಗವಾಗಿತ್ತು. [ಅಸೆಂಬ್ಲಿಯಲ್ಲಿ ಬ್ಲೂ ಫಿಲಂ ನೋಡಿದವರ ಹೆಸರು ಲೀಕ್]

ಆಗ ವಿಧಾನಸಭೆ ಸ್ಪೀಕರ್ ಆಗಿದ್ದ ಕೆ.ಜಿ. ಬೋಪಯ್ಯ ಅವರು ಲೋಕಸಭೆ ಚಾನೆಲ್ ಮಾದರಿಯಲ್ಲಿ ಸರ್ಕಾರಿ ವಾಹಿನಿ ಆರಂಭಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಸಮಗ್ರ ಯೋಜನಾ ವರದಿ, ಅನುದಾನ, ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವ ಪ್ರಕ್ರಿಯೆಯೂ ನಡೆದಿತ್ತು. ಆದರೆ ಅದು ಜಾರಿಗೆ ಬಂದಿರಲಿಲ್ಲ.

English summary
Karnataka Information Minister Roshan Baig said, private television cameras will henceforth be banned inside the Legislative Assembly and the Legislative Council, when the Houses are in session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X