ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಕರ್ನಾಟಕ ಭೇಟಿಯ ಕಾರ್ಯಕ್ರಮಗಳು

|
Google Oneindia Kannada News

ಬೆಂಗಳೂರು, ಸೆ. 23 : ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ನಾಯಕರು, ಕಾರ್ಯಕರ್ತರು ಸಜ್ಜಾಗಿದ್ದಾರೆ. ಮಂಗಳವಾರ ಸಂಜೆ 5.45ಕ್ಕೆ ಮೋದಿ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ಮಂಗಳವಾರ ಸಂಜೆ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ಬಿಜೆಪಿ ಘಟಕ ಹಮ್ಮಿಕೊಂಡಿರುವ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ನಂತರ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬುಧವಾರ ಇಸ್ರೋಗೆ ಭೇಟಿ ನೀಡಿದ ಬಳಿಕ ಮೋದಿ ತುಮಕೂರಿಗೆ ತೆರಳಲಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಮೋದಿ ಒಂದೇ ಹೆಲಿಕಾಪ್ಟರ್‌ನಲ್ಲಿ ತುಮಕೂರಿಗೆ ತೆರಳಲಿದ್ದಾರೆ. [ಮೋದಿ ಸ್ವಾಗತಿಸಲಿದ್ದಾರೆ 10 ಸಾವಿರ ಕಾರ್ಯಕರ್ತರು]

Narendra Modi

ಬೆಂಗಳೂರು ಮತ್ತು ತುಮಕೂರಿನಲ್ಲಿ ಮೋದಿ ಆಗಮನದ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೋದಿ ಕಾರ್ಯಕ್ರಮವಿರುವ ಪ್ರದೇಶಗಳಲ್ಲಿ ಪ್ರಧಾನಿ ಭದ್ರತೆ ನೋಡಿಕೊಳ್ಳುವ ವಿಶೇಷ ಭದ್ರತಾ ದಳದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. [ಮೋದಿ ಅಮೆರಿಕ ಪ್ರವಾಸ ವೇಳಾಪಟ್ಟಿ]

ಮೋದಿ ಕಾರ್ಯಕ್ರದಮ ವೇಳಾಪಟ್ಟಿ ಹೀಗಿದೆ
* ಮಂಗಳವಾರ ಮಧ್ಯಾಹ್ನ 3ಗಂಟೆಗೆ ದೆಹಲಿಯಿಂದ ಪ್ರಯಾಣ
* ಸಂಜೆ 5.45ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ
* 6 ಗಂಟೆಗೆ ಬಿಜೆಪಿ ಆಯೋಜಿಸಿರುವ ಅಭಿನಂದನಾ ಸಮಾರಂಭದಲ್ಲಿ ಭಾಗಿ
* ರಾಜಭವನಕ್ಕೆ ಆಗಮನ, ಅಲ್ಲೇ ವಾಸ್ತವ್ಯ

ಬುಧವಾರದ ಕಾರ್ಯಕ್ರಮಗಳು
* ಬುಧವಾರ ಬೆಳಗ್ಗೆ 6.45 ರಿಂದ 9.10ರವರೆಗೆ ಇಸ್ರೋಗೆ ಭೇಟಿ
* ಹೆಲಿಕಾಪ್ಟರ್‌ ಮೂಲಕ ತುಮಕೂರಿಗೆ ಪ್ರಯಾಣ
* 10.05 ರಿಂದ 10.25ರ ತನಕ ಸಿದ್ದಗಂಗಾ ಮಠಕ್ಕೆ ಭೇಟಿ
* 11.10ಕ್ಕೆ ಫುಡ್‌ಪಾರ್ಕ್‌ ಉದ್ಘಾಟನೆಗಾಗಿ ಆಗಮನ
* 12.10ಕ್ಕೆ ತುಮಕೂರಿನಿಂದ ನಿರ್ಗಮನ
* 1 ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ

English summary
Prime Minister Narendra Modi coming to the Bangalore city on Tuesday evening. Modi will participate in two programmes during his two-day visit to the Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X