ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂಪುಟ ಭಾಗ್ಯ ರಾಜ್ಯದಿಂದ ಮೂವರಿಗೆ ಸಿಕ್ತು

By Srinath
|
Google Oneindia Kannada News

ಬೆಂಗಳೂರು, ಮೇ 26: ಅತ್ತ ರಾಜಧಾನಿ ದಿಲ್ಲಿಯಲ್ಲಿ ನರೇಂದ್ರ ಮೋದಿ ಅವರು ಇಂದು ಸಂಜೆ ಭಾರತದ ನೂತನ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಲು ಸಿದ್ಧತೆ ನಡೆಸಿರುವಾಗ ಇತ್ತ ಅವರ ಸಂಪುಟ ಹೇಗಿರುತ್ತದೆ? ಯಾರೆಲ್ಲಾ ಸಂಪುಟ ಸೇರುತ್ತಾರೆ? ಮೋದಿ ಸಂಪುಟದಲ್ಲಿರುವ ಕನ್ನಡಿಗರು ಯಾರು ಯಾರು? ಎಂಬುದು ಎಲ್ಲೆಡೆ ಭಾರಿ ಕುತೂಹಲವನ್ನುಂಟುಮಾಡಿತ್ತು.

ಸಚಿವರಯಾದಿ ಪ್ರಕಟ: ಗಮನಾರ್ಹವೆಂದರೆ ನಿಯೋಜಿತ ಪ್ರಧಾನಿ ಮೋದಿ ಅವರು ಈ ಬಗ್ಗೆ ಎಲ್ಲೂ ಯಾವೊಂದೂ ಸುಳಿವು ನೀಡಿರಲಿಲ್ಲ. ಇದೀಗ ತಮ್ಮ ಲೆಕ್ಕಾಚಾರವನ್ನೆಲ್ಲ ಮುಗಿಸಿರುವ ಪ್ರಧಾನಿ ಮೋದಿ ಅವರು ಮೊದಲ ಹಂತದಲ್ಲಿ ತಮ್ಮ ಸಂಪುಟ ರಚನೆಯನ್ನು ಸೋಮವಾರ ಬೆಳಗ್ಗೆ ಅಂತಿಮಗೊಳಿಸಿದ್ದಾರೆ. ಆದರೆ ಯಾರಿಗೆ ಯಾವ ಖಾತೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಸಂಪುಟದ ಇತರೆ ಸದಸ್ಯರ ವಿವರ ಸದ್ಯದಲ್ಲೇ ಪ್ರಕಟವಾಗಲಿದೆ.

ಮೋದಿ ಸಂಪುಟ ಭಾಗ್ಯ: ಕರ್ನಾಟಕದಿಂದ ಮೂವರೇನಾ?

ಮೋದಿ ಸಂಪುಟ ಭಾಗ್ಯ: ಕರ್ನಾಟಕದಿಂದ ಮೂವರೇನಾ?

ಕರ್ನಾಟಕದ ಮಟ್ಟಿಗೆ ತಕ್ಷಣಕ್ಕೆ ಹೇಳುವುದಾದರೆ ಮೋದಿ ಸಂಪುಟ ಸೇರುವ ಭಾಗ್ಯವು ಮೂವರಿಗೆ ಒಲಿದಿದೆ. ಖುದ್ದು ಮೋದಿ ಅವರೇ ಇಂದು ಬೆಳಗ್ಗೆ ದೂರವಾಣಿ ಕರೆ ಮಾಡಿ ಈ ಮೂವರಿಗೂ ಸಂದೇಶ ನೀಡಿದ್ದಾರೆ. ಕುತೂಹಲದ ಸಂಗತಿಯೆಂದರೆ ಸ್ವತಃ ಮೋದಿ ಅವರು ತಮ್ಮ ಸಂಪುಟ ಸೇರಲಿರುವ ಸಂಸದರಿಗೆ ಇಂದು ಬೆಳಗ್ಗೆಯಿಂದ ದೂರವಾಣಿ ಕರೆಗಳನ್ನು ಮಾಡಿ, ಪ್ರಮಾಣವಚನಕ್ಕೆ ಸಿದ್ಧರಾಗುವಂತೆ ಸೂಚಿಸುತ್ತಿದ್ದಾರೆ. ದೂರವಾಣಿ ಕರೆಗಳು ಇನ್ನೂ ನಿಂತಿಲ್ಲ. ಹಾಗಾಗಿ ಕರ್ನಾಟಕಕ್ಕೆ ಮೂವರೇನಾ? ಅಥವಾ ಇನ್ನೂ ಒಂದಷ್ಟು ಮಂದಿ ಸಂಪುಟ ಸೇರುತ್ತಾರಾ? ಎಂಬ ಕುತೂಹಲ ಮುಂದುವರಿದಿದೆ.

ಗೆಲುವಿನ ಸರದಾರ ಅನಂತಕುಮಾರ್ ನೂತನ ಸಚಿವ

ಗೆಲುವಿನ ಸರದಾರ ಅನಂತಕುಮಾರ್ ನೂತನ ಸಚಿವ

ನಿರೀಕ್ಷೆಯಂತೆ ಅನುಭವೀ ಸಂಸದ, ಬೆಂಗಳೂರು ದಕ್ಷಿಣ ಕ್ಷೇತ್ರದ ಗೆಲುವಿನ ಸರದಾರ ಅನಂತಕುಮಾರ್,

ಮಾಜಿ ಸಿಎಂ ಸದಾನಂದ ಗೌಡರು ಮೋದಿ ಕ್ಯಾಬಿನೆಟ್ ಗೆ

ಮಾಜಿ ಸಿಎಂ ಸದಾನಂದ ಗೌಡರು ಮೋದಿ ಕ್ಯಾಬಿನೆಟ್ ಗೆ

ಬೆಂಗಳೂರು ಉತ್ತರ ಕ್ಷೇತ್ರದ ಸಂಸದ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರುಮೋದಿ ಕ್ಯಾಬಿನೆಟ್ ಗೆ ಸೇರ್ಪಡೆಯಾಗಿದ್ದಾರೆ.

 ಜಿಎಂ ಸಿದ್ದೇಶ್ ಅವರಿಗೆ ಮೋದಿ ಮಂತ್ರಿಮಂಡಲದಲ್ಲಿ ಸ್ಥಾನ

ಜಿಎಂ ಸಿದ್ದೇಶ್ ಅವರಿಗೆ ಮೋದಿ ಮಂತ್ರಿಮಂಡಲದಲ್ಲಿ ಸ್ಥಾನ

ಹಿರಿಯ ಸಂಸದ ದಾವರಣಗೆರೆಯ ಜಿಎಂ ಸಿದ್ದೇಶ್ ಅವರಿಗೆ ಮೋದಿ ಮಂತ್ರಿಮಂಡಲದಲ್ಲಿ ಕೆಲಸ ಮಾಡುವ ಸದವಕಾಶ ದೊರೆತಿದೆ.

18 ಕ್ಯಾಬಿನೆಟ್, 16 ಸಹಾಯಕ ಸಚಿವರ ಪಟ್ಟಿ

18 ಕ್ಯಾಬಿನೆಟ್, 16 ಸಹಾಯಕ ಸಚಿವರ ಪಟ್ಟಿ

ಒಟ್ಟು 18 ಕ್ಯಾಬಿನೆಟ್ ಸ್ಥಾನಮಾನದ ಸಚಿವರು, 16 ಮಂದಿ ಸಹಾಯಕ ಸಚಿವರ ಪಟ್ಟಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕಳುಹಿಸಲಾಗಿದೆ. ನಿತಿನ್ ಗಡ್ಕರಿ ಮತ್ತು ವಿಕೆ ಸಿಂಗ್ ಅವರಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ.

ಆಶೀರ್ವಾದ ಕೋರಿ ವಾಜಪೇಯಿ ಮನೆಗೆ ತೆರಳಿದ ಮೋದಿ

ಆಶೀರ್ವಾದ ಕೋರಿ ವಾಜಪೇಯಿ ಮನೆಗೆ ತೆರಳಿದ ಮೋದಿ

ಇಂದು ಸಂಜೆ ಪ್ರಮಾಣ ವಚನ ಸ್ವೀಕಾರಕ್ಕೆ ಮುನ್ನ ಇದೀಗ ನಿಯೋಜಿತ ಪ್ರಧಾನ ಮಂತ್ರಿ ಮೋದಿ ಅವರು ಆಶೀರ್ವಾದ ಕೋರಿ ವಾಜಪೇಯಿ ಮನೆಗೆ ತೆರಳಿದ್ದಾರೆ. ಈ ಬಗ್ಗೆ ಮೋದಿ ಟ್ವೀಟ್ ಹೀಗಿದೆ: On my way to Atal ji's residence to seek his blessings.

ಅದಕ್ಕೂ ಮುನ್ನ, ರಾಜ್ ಘಾಟ್ ಗೆ ತೆರಳಿದ ಮೋದಿ ಅವರು ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ್ದಾರೆ.

English summary
A few hours before PM designate Narendra Modi's swearing-in ceremony Modi has just now announced his first cabinet members. Bangalore South MP Ananth Kumar, Bangalore North MP DV Sadananda Gowda and Davanagere Lok Sabha constituency member GM Siddeshwara have been picked for the cabinet from Karnatak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X