ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಜರಾಯಿ ಖಾತೆ ಸಿಎಂ ಸಿದ್ದರಾಮಯ್ಯ ಕೈಗೆ

|
Google Oneindia Kannada News

ಬೆಂಗಳೂರು, ಜೂನ್ 4 : ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ ಮುಜರಾಯಿ, ಸಣ್ಣಕೈಗಾರಿಕೆ ಮತ್ತು ಸಕ್ಕರೆ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು, ಪ್ರಕಾಶ್ ಹುಕ್ಕೇರಿ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಪ್ರಕಾಶ್‌ ಹುಕ್ಕೇರಿ ರಾಜೀನಾಮೆ ಸಲ್ಲಿಸಿದ್ದರು. ಹುಕ್ಕೇರಿ ಅವರು ನಿರ್ವ ಹಿಸುತ್ತಿದ್ದ ಮುಜರಾಯಿ ಹಾಗೂ ಸಣ್ಣ ಕೈಗಾರಿಕೆ ಖಾತೆಗಳನ್ನು ಸಿಎಂ ಸಿದ್ದರಾಮಯ್ಯ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. [ಕರ್ನಾಟಕದಲ್ಲಿ ಸೋತವರು, ಗೆದ್ದವರು]

Siddaramaiah

ಸಕ್ಕರೆ ಖಾತೆಯ ಜವಾಬ್ದಾರಿಯನ್ನು ಸಚಿವ ಎಚ್‌.ಎಸ್‌.ಮಹದೇವಪ್ರಸಾದ್‌ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ. ಶಾಸಕ ಸ್ಥಾನಕ್ಕೆ ಸ್ಪೀಕರ್‌ ರಾಜೀನಾಮೆ ನೀಡಿದ್ದ ಹುಕ್ಕೇರಿ ನಂತರ ಸಚಿವ ಸ್ಥಾನಕ್ಕೂ ಸಿಎಂಗೆ ರಾಜೀನಾಮೆ ಸಲ್ಲಿಸಿದ್ದರು. ಇದನ್ನು ರಾಜ್ಯಪಾಲರಿಗೆ ರವಾನಿಸಲಾಗಿತ್ತು.

ಶಾಸಕ ಸ್ಥಾನಕ್ಕೆ ಪ್ರಕಾಶ್ ಹುಕ್ಕೇರಿ ಅವರು ರಾಜೀನಾಮೆ ಸಲ್ಲಿಸಿರುವುದರಿಂದ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಾಗಿದೆ. ಕ್ಷೇತ್ರದಲ್ಲಿ ಹುಕ್ಕೇರಿ ಅವರು ತಮ್ಮ ಪುತ್ರ ಗಣೇಶ್‌ ಹುಕ್ಕೇರಿ ಅವರನ್ನು ಕಣಕ್ಕಿಳಿಸಲಿದ್ದಾರೆ ಎಂಬ ಮಾತುಗಳಿವೆ.

ಚಿಕ್ಕೋಡಿ ಕ್ಷೇತ್ರದ ಫಲಿತಾಂಶ : ಲೋಕಸಭೆ ಚುನಾವಣೆಯಲ್ಲಿ 4,74,373 ಮತಗಳನ್ನು ಪಡೆದು ಪ್ರಕಾಶ್ ಹುಕ್ಕೇರಿ ಜಯಗಳಿಸಿದ್ದರು. ಹುಕ್ಕೇರಿ ಅವರಿಗೆ ಪ್ರಬಲ ಪೈಪೋಟಿ ನೀಡಿದ ಬಿಜೆಪಿಯ ರಮೇಶ್ ಕತ್ತಿ ಅವರು 4,71,370 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರು. ಎಸ್ ಸಿಪಿಯ ಪ್ರತಾಪರಾವ್ ಪಾಟೀಲ 42,735 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. [ಮಾಹಿತಿ ಚುನಾವಣಾ ಆಯೋಗ]

English summary
Minister for Sugar, Small Scale Industries and Muzrai Prakash B. Hukkeri, who was fielded in the Lok Sabha elections much against his wishes and emerged a winner, has resigned from the Council of Ministers. Governor H.R. Bhardwaj has accepted the resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X