ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರಿನ ಹುಡುಗ ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ

|
Google Oneindia Kannada News

ರಾಯಚೂರು, ಮೇ 9 : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನಗಳಿಸಿದ್ದಾರೆ ರಾಯಚೂರಿನ ತಲಮಾರಿ ಗ್ರಾಮದ ನವೀನ್. ಭವಿಷ್ಯದಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿ ಗ್ರಾಮದ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಕನಸನ್ನು ನವೀನ್ ಹೊಂದಿದ್ದಾರೆ.

ನವೀನ್ ತಂದೆ ವೆಂಕಟೇಶ ನೇಕಾರ ಹಮಾಲಿಯಾಗಿದ್ದರೆ, ತಾಯಿ ದಿವ್ಯಾಭಾರತಿ ಅವರು ಕೂಲಿ ಕೆಲಸ ಮಾಡುತ್ತಿದ್ದಾರೆ. ಅನಕ್ಷರಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದ ನವೀನ್, ಸಾಧನೆಯನ್ನು ತಲಮಾರಿ ಗ್ರಾಮದ ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ. [ಪಿಯು ಫಲಿತಾಂಶಕ್ಕಾಗಿ ಕ್ಲಿಕ್ ಮಾಡಿ]

Naveen

ತಲಮಾರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದ್ದ ನವೀನ್, ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿಯೂ ಶೇ.88ರಷ್ಟು ಅಂಕಗಳಿಸಿದ್ದರು. ಸದ್ಯ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 574 ಅಂಕ ಶೇ.95.67 ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. [ರಾಜ್ಯಕ್ಕೆ ಪ್ರಥಮ ವೆಂಕಟೇಶ್ ಕಾಮತ್]

ಹಣ ಹೊಂದಿಸಲು ಕಷ್ಟವಾಗಿತ್ತು : ಇನಫಂಟ್ ಜೀಸಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನವೀನ್, ಬಿಸಿಎಂ ಹಾಸ್ಟೆಲ್ ನಲ್ಲಿದ್ದುಕೊಂಡು ಓದಿ ಮುಗಿಸಿದ್ದಾರೆ. ಮೊದಲು ಪಿಯುಸಿ ವಿಜ್ಞಾನಕ್ಕೆ ವಿಭಾಗಕ್ಕೆ ಪ್ರವೇಶ ಪಡೆದಿದ್ದ ನವೀನ್, ಇಂಗ್ಲೀಷ್ ಮಾಧ್ಯಮದ ಓದು, ಹಣ ಹೊಂದಿಸುವುದು ಕಷ್ಟವಾಯಿತು ಎಂದು ಕಲಾ ವಿಭಾಗಕ್ಕೆ ಸೇರಿದ್ದರು.[ವೈದ್ಯಳಾಗುವ ಕನಸಿನ ವಸುಧಾ ರಾಜ್ಯಕ್ಕೆ ಪ್ರಥಮ]

ಕಾಲೇಜಿನ ಪ್ರಾಚಾರ್ಯರು, ಬೋಧಕರು ನವೀನ್ ದೊಡ್ಡಪ್ಪನ ಮಗ ವೀರೇಶ್‌ ಅವರು ಓದಿಗೆ ಸಹಾಯ ಮಾಡಿದರು. ನವೀನ್ ಕಷ್ಟವನ್ನು ಮೊದಲೇ ಗುರುತಿಸಿದ್ದ ಕಾಲೇಜಿನ ಆಡಳಿತ ಮಂಡಳಿ, ಅವನ ಓದು ಅರ್ಧಕ್ಕೆ ನಿಲ್ಲಬಾರದು ಎಂದು ಉದ್ದೇಶದಿಂದ ಕಾಲೇಜಿನ ಶುಲ್ಕದಲ್ಲಿ ಅರ್ಧ ವಿನಾಯಿತಿ ನೀಡಿ ಓದು ಮುಂದುವರೆಸುವಂತೆ ಬೆಂಬಲ ನೀಡಿದ್ದರು. [2013ರಲ್ಲಿ 'ಕಲೆ'ಯಲ್ಲಿ ಅರಳಿದ 'ಕಲಾ'ವಿದೆ]

ಉಪನ್ಯಾಸಕನಾಗುವ ಕನಸು : ಪದವಿಯಲ್ಲಿ ಇಂಗ್ಲಿಶ್ ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಂಡು, ಸ್ನಾತಕೋತ್ತರ ಪದವಿ ಪಡೆದು ಇಂಗ್ಲಿಷ್ ಉಪನ್ಯಾಸಕನಾಗುವ ಕನಸನ್ನು ನವೀನ್ ಹೊಂದಿದ್ದಾರೆ. ತಮ್ಮೂರಿನ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಸುವ ಅದಮ್ಯ ಹಂಬಲ ಇಟ್ಟುಕೊಂಡಿದ್ದಾನೆ.

ನವೀನ್ ಪಡೆದ ಅಂಕಗಳು : ಕನ್ನಡ - 98, ಇಂಗ್ಲಿಷ್ - 92, ಇತಿಹಾಸ - 100, ಅರ್ಥಶಾಸ್ತ್ರ - 95, ಸಮಾಜಶಾಸ್ತ್ರ - 94 ಹಾಗೂ ರಾಜ್ಯಶಾಸ್ತ್ರ - 95. ಒಟ್ಟು 574 (ಶೇ.95.67).

English summary
Naveen the student from Infant Jesus College Raichur district has achieved almost the impossible. He score of 574/600 in II PUC exam in arts. His father Venkatesh is a porter at the railway station and his mother Divya Bharati is a housewife. Naveen resident of Talamari village of the Raichur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X