ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ 1.82 ರೂ. ಇಳಿಕೆ, ಡೀಸೆಲ್ ದರ ಏರಿಕೆ

|
Google Oneindia Kannada News

ಬೆಂಗಳೂರು, ಆ.31 : ವಾಹನ ಸವಾರರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದ್ದು, ಪ್ರತಿ ಲೀಟರ್‌ಗೆ ಪ್ರೆಟ್ರೋಲ್‌ ದರ 1.82 ರೂ. ಕಡಿಮೆಯಾಗಿದೆ. ಆದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 50 ಪೈಸೆ ಹೆಚ್ಚಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಸತತ ಮೂರನೇ ಸಲ ಪೆಟ್ರೋಲ್ ದರ ಇಳಿಕೆಯಾಗಿದ್ದು, ಪರಿಷ್ಕೃತ ದರಗಳು ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಇಳಿಕೆಯಿಂದಾಗಿ ಈ ದರ ಇಳಿಕೆ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ತಿಳಿಸಿದೆ.

Petrol

ಭಾನುವಾರದಿಂದ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 68.51 ರೂ.ಆಗಲಿದೆ. ಸ್ಥಳೀಯ ತೆರಿಗೆಗಳ ಅನ್ವಯ ಪೆಟ್ರೋಲ್ ದರ ವಿವಿಧ ನಗರಗಳಲ್ಲಿ ಬೇರೆಯಾಗಲಿದೆ. ಕರ್ನಾಟಕದಲ್ಲಿ ಸ್ಥಳೀಯ ತೆರಿಗೆ ಸೇರಿ ಅಂದಾಜು 2ರಿಂದ 2.10 ರೂ. ಇಳಿಕೆಯಾಗಿದೆ. [ಆ.15ರಿಂದ ಪೆಟ್ರೋಲ್ ಬೆಲೆ ಇಳಿಕೆ]

ಸಿಲಿಂಡರ್ 19 ರೂ. ಇಳಿಕೆ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಗಳಲ್ಲಿ ಇಳಿಕೆಯಾಗಿರುವುದರಿಂದ ಅಡುಗೆ ಅನಿಲದ ದರವೂ ರೂ.19 ರೂ. ಕಡಿಮೆ ಯಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್‌ಗಳಿಗೆ ಮಾತ್ರ ಈ ದರ ಅನ್ವಯವಾಗಲಿದೆ. [ಕೇವಲ ಹಣ ನೀಡಿದರೆ ಪೆಟ್ರೋಲ್‌ ಸಿಗದು]

ಬಲ್ಕ್ ಡಿಸೇಲ್ 1.32 ರೂ. ಇಳಿಕೆ : ರೈಲ್ವೆ, ರಕ್ಷಣೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಖರೀದಿಸುವ ಬಲ್ಕ್ (ಸಗಟು) ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 1.32 ರೂ. ಇಳಿಕೆ ಮಾಡಲಾಗಿದೆ.

English summary
Petrol price was cut by Rs 1.82 a liter, the third reduction in rates this month, but diesel rates were hiked by 50 paise per liter. The revised rates are effective from Saturday midnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X