ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರಿಗಳ ಶಿಕ್ಷೆ ನಿರ್ಧರಿಸಲು ತಜ್ಞರ ಸಮಿತಿ

|
Google Oneindia Kannada News

ಬೆಂಗಳೂರು, ಆ.1 : ಅತ್ಯಾಚಾರ ಪ್ರಕರಣಗಳ ನಿಯಂತ್ರಣ, ಕಾನೂನು ತಿದ್ದುಪಡಿ ಮತ್ತು ಶಿಕ್ಷೆ ಪ್ರಮಾಣ ಹೆಚ್ಚಿಸುವ ಸಂಬಂಧ ವರದಿ ನೀಡಲು ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿಯನ್ನು ರಚನೆ ಮಾಡಿದೆ. ಮೂರು ತಿಂಗಳಿನಲ್ಲಿ ಈ ಸಮಿತಿ ಸರ್ಕಾರಕ್ಕೆ ವರದಿ ನೀಡಬೇಕಾಗಿದೆ.

ಗುರುವಾರ ಸರ್ಕಾರ ಸಮಿತಿ ರಚನೆ ಬಗ್ಗೆ ಅಂತಿಮ ಆದೇಶ ಹೊರಡಿಸಿದ್ದು, ಅತ್ಯಾಚಾರ ಪ್ರಕರಣಗಳ ನಿಯಂತ್ರಣ, ಕಾನೂನಿಗೆ ತಿದ್ದುಪಡಿ ಹಾಗೂ ಶಿಕ್ಷೆ ಪ್ರಮಾಣ ಹೆಚ್ಚಿಸುವ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಗಿದೆ.

mc nanaiah

ಎಂ.ಸಿ.ನಾಣಯ್ಯ ನೇತೃತ್ವದಲ್ಲಿ ಈ ಸಮಿತಿ ರಚನೆ ಮಾಡಲಾಗಿದ್ದು, ಮೂರು ತಿಂಗಳೊಳಗೆ ಸಮಿತಿ ಸರ್ಕಾರಕ್ಕೆ ವರದಿ ನೀಡಲಿದೆ. ಸಮಿತಿ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದ್ದು, ಸಮಿತಿ ಕಾರ್ಯದರ್ಶಿ ಸೇರಿ ಒಟ್ಟು 25 ಮಂದಿ ಸದಸ್ಯರಿದ್ದಾರೆ. ಹನ್ನೊಂದು ಶಾಸಕರು, ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ನಾನಾ ಕ್ಷೇತ್ರದ ಗಣ್ಯರು ಸಮಿತಿ ಸದಸ್ಯರಾಗಿದ್ದಾರೆ. [ಅ- ಅತ್ಯಾಚಾರ, ಆ-ಆತ್ಮರಕ್ಷಣೆ, ಇ-ಇರಿದುಬಿಡು]

ಬೆಂಗಳೂರು ಮತ್ತು ರಾಜ್ಯದಲ್ಲಿ ನಡೆದ ಸರಣಿ ಅತ್ಯಾಚಾರದ ಪ್ರಕರಣಗಳು ಬೆಳಕಿಗೆ ಬಂದ ನಂತರ ವಿಧಾನಸಭೆಯಲ್ಲಿ ಚರ್ಚೆ ನಡೆದ ವೇಳೆ ತಜ್ಞರ ಸಮಿತಿ ರಚನೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅದರ ಅನ್ವಯ ಸಮಿತಿ ರಚನೆ ಮಾಡಲಾಗಿದೆ.

ಸಮಿತಿಯ ಸದಸ್ಯರು : ಎಂ.ಸಿ.ನಾಣಯ್ಯ ನೇತೃತ್ವದ ಸಮಿತಿಯಲ್ಲಿ ಗೋವಿಂದ ಕಾರಜೋಳ, ತನ್ವೀರ್ ಸೇಠ್, ಶಕುಂತಲಾ ಶೆಟ್ಟಿ , ವೈ.ಎಸ್.ವಿ.ದತ್ತ, ವಿನೀಶ ನಿರೋ, ಮೇಲ್ಮನೆ ಸದಸ್ಯರಾದ ಮೋಟಮ್ಮ, ಜಯಮಾಲ, ತಾರಾ ಅನುರಾಧ, ವಿ.ಎಸ್.ಉಗ್ರಪ್ಪ , ಬಸವರಾಜ್ ಹೊರಟ್ಟಿ , ಕೆ.ಬಿ.ಶಾಣಪ್ಪ . [ರೇಪ್ ವಿರೋಧಿ ಬೆಂಗಳೂರು ಬಂದ್ ಗೆ ಶುಭಮಂಗಳ!!]

ಮಾಜಿ ಸಚಿವೆ ರಾಣಿ ಸತೀಶ್, ಮಹಿಳಾ ರಕ್ಷಣಾ ಸಮಿತಿ ಸದಸ್ಯೆ ಡಾ.ಲೀಲಾ ಸಂಪಿಗೆ, ನಿವೃತ್ತ ಪೊಲೀಸ್ ಅಧಿಕಾರಿ ಜೀಜಾ ಹರಿಸಿಂಗ್, ಲೇಖಕಿ ಸುಚಿತ್ರಾ ರಾವ್, ಪತ್ರಕರ್ತೆ ಗೌರಿ ಲಂಕೇಶ್, ವೈದ್ಯೆ ಡಾ.ಸಂಗೀತಾ ಸಕ್ಸೇನ, ಕೃಪಾ ಆಳ್ವ, ನಿವೃತ್ತ ಸರಕಾರಿ ಅಭಿಯೋಜಕ ಚಂದ್ರಮೌಳಿ.

ರಾಜ್ಯ ಚುನಾವಣೆ ಆಯೋಗದ ಮಾಜಿ ಆಯುಕ್ತ ಎಂ.ಆರ್.ಹೆಗಡೆ, ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಈ ಸಮಿತಿ ಸದಸ್ಯರಾಗಿದ್ದಾರೆ. ಸಂಸದೀಯ ವ್ಯವಹಾರಗಳ ಹಾಗೂ ಶಾಸನ ರಚನಾ ಇಲಾಖೆ ವಿಶೇಷ ಕಾರ್ಯದರ್ಶಿ ದ್ವಾರಕನಾಥ ಬಾಬು ಸಮಿತಿ ಕಾರ್ಯದರ್ಶಿಯಾಗಿದ್ದಾರೆ.

English summary
The Karnataka government has constituted a 26-member expert panel to suggest amendments to existing laws, in order to curb rapes and implement measures for the safety of women. The panel will be headed by former minister M.C.Nanaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X