ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿಗೆ ಹರಿದ ಕಾವೇರಿ, ರೈತರ ಪ್ರತಿಭಟನೆ

By ರಾಜೇಶ್ ಕೊಂಡಾಪುರ
|
Google Oneindia Kannada News

ಮಂಡ್ಯ, ಜು. 16 : ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸಿದ ಕ್ರಮವನ್ನು ಖಂಡಿಸಿ ನೂರಾರು ರೈತರು ಶ್ರೀರಂಗಪಟ್ಟಣ, ಮಂಡ್ಯ, ಮಳವಳ್ಳಿಯಲ್ಲಿ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಮೈಸೂರು-ಬೆಂಗಳೂರು ಹೆದ್ದಾರಿಯನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸಂಜೆ ಕೆಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ಹೆಚ್ಚು ನೀರು ಬಿಡಲಾಗಿದೆ ಎಂಬುದು ರೈತ ಸಂಘದ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳವಾರ ಬೆಳಗ್ಗೆ 6.30ಕ್ಕೆ 1,453 ಕ್ಯುಸೆಕ್ ನೀರು ಡ್ಯಾಂನಿಂದ ಹರಿದು ಹೋಗುತ್ತಿತ್ತು. ಸಂಜೆಯ ವೇಳೆಗೆ ಅದು 8,052 ಕ್ಯುಸೆಕ್ ಆಗಿದ್ದರಿಂದ ರೊಚ್ಚಿಗೆದ್ದ ರೈತರು ಪ್ರತಿಭಟನೆ ನಡೆಸಿದ್ದಾರೆ.

ಕೆಆರ್ ಎಸ್ ಅಣೆಕಟ್ಟೆಯಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ಇಷ್ಟೊಂದು ಪ್ರಮಾಣದಲ್ಲಿ ನೀರು ಹರಿಸಿದ್ದು ಏಕೆ? ಎಂದು ಪ್ರಶ್ನಿಸಿದ ರೈತರು. ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಮಂಡ್ಯ, ಶ್ರೀರಂಗಪಟ್ಟಣ, ಮಳವಳ್ಳಿಯಲ್ಲಿ ರೈತ ಸಂಘದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರೈತ ಸಂಘದ ಮುಖಂಡರಾದ ಕೊಣಸಾಲೆ ನರಸರಾಜು ಮತ್ತು ಸುರೇಶ್ ಮುಂತಾದದವರು ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತಡೆದು ಅಣೆಕಟ್ಟೆ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು. [ತಮಿಳುನಾಡು ಅರ್ಜಿ ತಿರಸ್ಕರಿಸಿದ ಕಾವೇರಿ ನ್ಯಾಯಾಧೀಕರಣ]

ಒಳಹರಿವು ಎಷ್ಟಿದೆ : ಅಂದದಾಗೆ ಮಂಗಳವಾರ ಸಂಜೆಯ ಮಾಹಿತಿ ಪ್ರಕಾರ ಕೆಆರ್ ಎಸ್ ಜಲಾಶಯಕ್ಕೆ 20,106 ಕ್ಯುಸೆಕ್ ನೀರು ಹರಿದು ಬರುತ್ತಿದೆ. 124.8 ಅಡಿಯ ಕೆಆರ್ ಎಸ್ ಜಲಾಶಯದಲ್ಲಿ ಸದ್ಯ 88 ಅಡಿ ನೀರು ಸಂಗ್ರಹಣೆ ಇದೆ.

Mandya

ಮಂಗಳವಾರ ಸಂಜೆ ಜಲಾಶಯದ ಹೊರ ಹರಿವನ್ನು ಹೆಚ್ಚಳ ಮಾಡಿದ್ದರಿಂದ ರೈತರು ಪ್ರತಿಭಟನೆ ನಡೆಸಿದರು. ಮೊದಲು ಅಣೆಕಟ್ಟೆ ಭರ್ತಿಯಾಗಲಿ ನಂತರ ತಮಿಳುನಾಡಿಗೆ ನೀರು ಹರಿಸೋಣ ಎಂದು ಡ್ಯಾಂ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು.

English summary
The Irrigation Department on Tuesday evening increased the quantity of water being released from the Krishnaraja Sagar (KRS) to Tamil Nadu triggering protests by farmers across the district. Members of the Karnataka Rajya Raitha Sangha (KRRS) staged flash protests in Srirangapatna, Mandya, Malavalli and other places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X