ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಎಲ್‌ಸಿ ಟಾಪರ್‌ ನಿತ್ಯಾ ಸುರಭಿ ಸಂದರ್ಶನ

By Ashwath
|
Google Oneindia Kannada News

ಮೈಸೂರು, ಮೇ 13: ಮಾರ್ಚ್‌ ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ.ಎ. ನಿತ್ಯಾ ಸುರಭಿ 625ಕ್ಕೆ 622 (ಶೇ 99.52) ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಮೂರು ವಿಷಯದಲ್ಲಿ ನಿತ್ಯಾ ಸುರಭಿ ಫುಲ್‌ ಮಾರ್ಕ್ಸ್‌ ಪಡೆದುಕೊಂಡಿದ್ದಾಳೆ. ಪ್ರಥಮ ಭಾಷೆ ಸಂಸ್ಕೃತ 125ಕ್ಕೆ 125, ದ್ವಿತೀಯ ಭಾಷೆ ಇಂಗ್ಲಿಷ್‌ 100ಕ್ಕೆ 99, ತೃತೀಯ ಭಾಷೆ ಕನ್ನಡದಲ್ಲಿ 99, ಗಣಿತದಲ್ಲಿ 100, ವಿಜ್ಞಾನದಲ್ಲಿ 99, ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಗಳಿಸಿದ್ದಾಳೆ.[ಎಸ್ಎಸ್ಎಲ್‌ಸಿ ಫಲಿತಾಂಶ : ಅವಳಿ ಸಹೋದರಿಯರ ಸಾಧನೆ]

 SSLC topper B A Nithya Surabhi

ನಗರದ ಮೆಡ್‌ಪಲ್ಸ್‌ ಔಷಧ ಅಂಗಡಿಯ ಫಾರ್ಮಸಿಸ್ಟ್‌ ಬಿ.ಎಸ್‌. ಅನಂತಶಯನಂ ಮತ್ತು ರೂಪಶ್ರೀ ದಂಪತಿಯ ಪುತ್ರಿ ನಿತ್ಯಾ ಸುರಭಿ ಒನ್‌ ಇಂಡಿಯಾ ಕನ್ನಡದ ಜೊತೆ ತನ್ನ ಸಂತಸವನ್ನು ಹಂಚಿಕೊಂಡದ್ದು ಹೀಗೆ

ಪ್ರಥಮ ಸ್ಥಾನ ಬರುತ್ತದೆ ಎಂದು ನಿರೀಕ್ಷೆ ಮಾಡಿದ್ರಾ?
ನಿಜವಾಗಿ ನಾನು ರಾಜ್ಯಕ್ಕೆ ಪ್ರಥಮ ಸ್ಥಾನ ಬರುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಟಿವಿ ಸುದ್ದಿಯನ್ನು ನೋಡಿ ನನಗೆ ಒಮ್ಮೆ ಆಶ್ಚರ್ಯ‌ ಆಯಿತು. 10 ಅಥವಾ 12 ಸ್ಥಾನ ಬರಬಹುದೆಂದು ನಿರೀಕ್ಷಿಸಿದ್ದೆ.

ಸಾಧನೆಯ ಗುಟ್ಟೇನು?
ಪೋಷಕರು ಗುರುಗಳ ಸಹಕಾರ, ಅಂದಿನ ಪಾಠ ಅಂದೇ ಓದಿಕೊಳ್ಳತ್ತಿದ್ದೆ. ಆಯಾ ದಿನದ ಪಾಠವನ್ನು ರಾತ್ರಿ 11 ಗಂಟೆಯವರೆಗೆ ಓದುತ್ತಿದ್ದೆ. ಹೆಚ್ಚಾಗಿ ತರಗತಿಯಲ್ಲಿ ಶಿಕ್ಷಕರು ಹೇಳುತ್ತಿದ್ದ ಪಾಠವನ್ನು ಚೆನ್ನಾಗಿ ಗೃಹಿಸುತ್ತಿದ್ದೆ.

ಟ್ಯೂಷನ್‌ಗೆ ಹೋಗುತ್ತಿದ್ದೀರಾ?
ಹೌದು. ವಾರದಲ್ಲಿ ಮೂರು ದಿನಗಳ ಕಾಲ ಟ್ಯೂಷನ್‌ಗೆ ಹೋಗುತ್ತಿದ್ದೆ. ಬೆಳಗ್ಗೆ ಏಳರಿಂದ ಎಂಟು ಗಂಟೆಯವರೆಗೆ ಟ್ಯೂಷನ್‌ ಇರುತ್ತಿತ್ತು.

ತಂದೆ ತಾಯಿಗಳು ಯಾವ ರೀತಿ ಪ್ರೋತ್ಸಾಹ ನೀಡುತ್ತಿದ್ದರು?
ತಂದೆ ಮತ್ತು ತಾಯಿ ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದರು. ಆದರೆ ಹೀಗೆಯೇ ಓದಬೇಕು, ಇಷ್ಟೇ ಅಂಕ ತೆಗೆಯಬೇಕು ಎಂದು ಒತ್ತಡ ಹಾಕಿಲ್ಲ.

ಮುಂದಿನ ಓದು?
ಮುಂದೆ ವಿಜ್ಞಾನದಲ್ಲಿ ಪಿಸಿಎಂಬಿಯನ್ನು ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೇನೆ. ಮುಂದೆ ಇಂಥಾದ್ದೇ ಆಗಬೇಕೆಂದು ಇನ್ನೂ ನಿರ್ಧರಿಸಿಲ್ಲ.

ಬೇರೆ ಹವ್ಯಾಸಗಳೇನು?
ಚಿತ್ರ ಬಿಡಿಸುವುದು ನನ್ನ ಹವ್ಯಾಸ. ಓದಿನ ಬಿಡುವಿನ ಮಧ್ಯೆ ಚಿತ್ರಗಳನ್ನು ಬಿಡಿಸುತ್ತಿದ್ದೆ.

ಮಗಳ ಸಾಧನೆಯ ತಂದೆ ಅನಂತಶಯನಂ ಹೇಳುವುದು ಹೀಗೆ- ಮೂರು ದಿನಗಳ ಹಿಂದೆ ರಾಜ್ಯದಲ್ಲಿ ಪ್ರಥಮ ಸ್ಥಾನ ನಿನಗೆ ಬರುತ್ತದೆ . ಮಾಧ್ಯಮದವರು ಮನೆಗೆ ಬಂದು ಸಂದರ್ಶನ ಮಾಡುತ್ತಾರೆ ಎಂದು ತಮಾಷೆ ಮಾಡಿದ್ದೆ. ಈ ಊಹೆ ನಿಜವಾಗಿದ್ದು ಮಗಳ ಸಾಧನೆ ಸಂತಸ ತಂದಿದೆ.[ಮೈಸೂರಿನ ಹುಡುಗಿಗೆ ಆಪಲ್ ಕಂಪೆನಿ ಸೇರುವ ಆಸೆ!]

English summary
Oneindia Kannada takes this moment to have a candid chat with Ms. Nithya Surabhi , daughter of Anantha Shayana and Roopashree, who secured the First Rank with total of 622 out of 625 in SSLC exams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X