ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರಿನಲ್ಲಿ ಬಿಜೆಪಿಗೆ ಕೈಕೊಟ್ಟ ಮತದಾರ

By Ashwath
|
Google Oneindia Kannada News

ರಾಯಚೂರು, ಮೇ.19: ರಾಜ್ಯದಲ್ಲಿ ಅಳಿಯ ಮಾವನ ಮಧ್ಯೆ ತೀವ್ರ ಸ್ಪರ್ಧೆ‌ಗೊಳಗಾದ ರಾಯಚೂರು ಲೋಕಸಭಾ ಕ್ಷೇತ್ರದ ಕದನದಲ್ಲಿ ಕೊನೆಗೆ ಜಯ ಮಾವನ ಪಾಲಾಗಿದೆ. ಕಾಂಗ್ರೆಸ್‌ ಬಿ.ವಿ.ನಾಯಕ್‌‌ 1499 ಮತಗಳ ಅಂತರದಿಂದ ಬಿಜೆಪಿಯ ಅರಕೇರಾ ಶಿವನಗೌಡ ನಾಯಕ್‌‌ರನ್ನು ಸೋಲಿಸಿ ಸಂಸತ್‌ಗೆ ಆಯ್ಕೆಯಾಗಿದ್ದಾರೆ.

ಕಳೆದ ಬಾರಿ ಬಿಜೆಪಿಯ ಸಣ್ಣ ಫಕಿರಪ್ಪ ಸ್ಪರ್ಧಿ‌ಸಿ ಬಿ.ವಿನಾಯಕರನ್ನು 30,636 ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ ಈ ಬಾರಿ ಬಿ.ವಿ.ನಾಯಕ್‌ ಕಡಿಮೆ ಅಂತರದಲ್ಲಿ ಗೆಲ್ಲುವ ಮೂಲಕ ಮರಳಿ ಕಾಂಗ್ರೆಸ್‌ಗೆ ಈ ಕ್ಷೇತ್ರವನ್ನು ತಂದುಕೊಟ್ಟಿದ್ದಾರೆ.ಬಿ.ವಿ. ನಾಯಕ್‌ರನ್ನು ಗೆಲ್ಲಿಸುವ ಮೂಲಕ ಹತ್ತನೇ ಬಾರಿ ರಾಯಚೂರಿನ ಮತದಾರ ಕಾಂಗ್ರೆಸ್‌‌ನ ಕೈಹಿಡಿದಿದ್ದಾರೆ.

ರಾಯಚೂರು ಲೊಕಸಭಾ ಕ್ಷೇತ್ರದಲ್ಲಿ 13,175 ಜನ 'ನೋಟಾ' ಮತ ಚಲಾಯಿಸುವ ಮೂಲಕ ಯಾವ ಅಭ್ಯರ್ಥಿಯೂ ಸರಿ ಇಲ್ಲ ಎಂದು ಹೇಳಿದ್ದಾರೆ. ಕಳೆದ ಬಾರಿ ಶೇ.45.9 ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.58.3ರಷ್ಟು ಮತದಾನವಾಗಿತ್ತು. ಜೆಡಿಎಸ್ 21,706 ಮತ ಗಳಿಸಲಷ್ಟೇ ಶಕ್ತವಾಗಿದೆ.[ರಾಯಚೂರು ಲೋಕಸಭಾ ಕ್ಷೇತ್ರದ ಕಿರುಪರಿಚಯ]

B.V.Nayak
ರಾಯಚೂರು ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಬಿ.ವಿ. ನಾಯಕ 1 ಕಾಂಗ್ರೆಸ್ 4,43,659
ಶಿವನಗೌಡ ನಾಯಕ್‌ 2 ಬಿಜೆಪಿ 4,42,160
ಡಿ.ಬಿ ನಾಯಕ 3 ಜೆಡಿಎಸ್ 21,706
ರಾಜ ತಿಮ್ಮಪ್ಪ ನಾಯಕ 4 ಬಿಎಸ್‌ಪಿ 12,254
English summary
Lok Sabha Election results 2014, Karnataka: B.V.Nayak of INC WINS the Raichur Constituency with 443,659 votes in Lok Sabha Election, Raichur Constituency of Karnataka. B.V.Nayak WINS by a margin of 1499 compared to his immediate rival Shivanagouda Nayak of BJP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X