ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ ಮೊದಲ ವಾರವಿಡೀ ಬ್ಯಾಂಕ್‌ ತೆರೆಯಲ್ಲ

|
Google Oneindia Kannada News

ಬೆಂಗಳೂರು, ಸೆ. 24 : ಮನೆ ಖರೀದಿಗೆ ಸಾಲ ಪಡೆದುಕೊಂಡು ಬ್ಯಾಂಕ್‌ನಿಂದ ತರಬೇಕು ಅಂದುಕೊಂಡಿದ್ದಾರಾ ಅಥವಾ ಮಗಳ ಮದುವೆ ಮಾಡಲು ದುಡ್ಡು ತರಬೇಕಾಗಿದೆಯೇ? ಯಾವೂದಾದರೂ ಚೆಕ್‌ ಕ್ಯಾಶ್‌ ಆಗಬೇಕಾಗಿದೆಯೇ? ಇನ್ಯಾವುದೋ ರೀತಿಯ ಬ್ಯಾಂಕ್‌ ಕೆಲಸಗಳು ಬಾಕಿ ಉಳಿದಿವೆಯೆ? ಹಾಗಾದರೆ ಕೂಡಲೇ ಮುಗಿಸಿಕೊಳ್ಳಿ. ಒಂದು ವೇಳೆ ವಿಳಂಬಮಾಡಿದರೆ ಆಮೇಲೆ ಕೈ ಕೈ ಹಿಸುಕಿಕೊಳ್ಳಬೇಕಾಗುತ್ತದೆ.(ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?)

bank

ಹೌದು.. ಅಕ್ಟೋಬರ್‌ ಆರಂಭದ ವಾರ ಸರಣಿ ರಜೆಗಳಿಗೆ ಮೀಸಲು. ಅರ್ಧ ವರ್ಷದ ಮುಕ್ತಾಯದ ದಿನ (ಅಕ್ಟೋಬರ್‌ 1) ರೊಳಗಾಗಿ ನಿಮ್ಮ ಹಣದ ವ್ಯವಹಾರ ಮುಗಿಸಿಕೊಂಡರೆ ಒಳ್ಳೆಯದು. ಗಾಂಧಿ ಜಯಂತಿ, ವಿಜಯದಶಮಿ, ಬಕ್ರೀದ್‌ ನಡುವೆ ಒಂದು ಶನಿವಾರ ಮತ್ತು ಭಾನುವಾರ ಬರಲಿದೆ. ಹಾಗಾಗಿ ಸೆಪ್ಟಂಬರ್‌ 29 ರೊಳಗೆ ಕೆಲಸ ಮುಗಿಸಿಕೊಳ್ಳುವುದು ಒಳಿತು. ಇಲ್ಲವಾದಲ್ಲಿ ಅಕ್ಟೋಬರ್‌ 7, 8 ರವರೆಗೆ ಕಾಯಬೇಕಾಗುತ್ತದೆ.(ಬೇರೆ ಬ್ಯಾಂಕ್‌ ಎಟಿಎಂ ಬಳಕೆ ಎರಡಕ್ಕೆ ಇಳಿಕೆ!)

ಅಕ್ಟೋಬರ್‌ 7, 8 ರಂದು ಬ್ಯಾಂಕ್‌ಗಳಿಗೆ ಒಮ್ಮೆಲೆ ಜನ ನುಗ್ಗಲಿದ್ದು ಒಂದೇ ದಿನಕ್ಕೆ ಕೆಲಸ ಮುಗಿದು ಬಿಡುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗಾಗಿ ಕೂಡಲೇ ನಿಮ್ಮ ಬ್ಯಾಂಕ್‌ ವ್ಯವಹಾರಗಳನ್ನು ಮುಗಿಸಿಕೊಳ್ಳಿ.

ಎದುರಾಗಲಿರುವ ರಜಾ ದಿನದ ಲಿಸ್ಟ್‌
ಅಕ್ಟೋಬರ್‌ 2 : ಗಾಂಧಿ ಜಯಂತಿ
ಅಕ್ಟೋಬರ್‌ 3 : ವಿಜಯದಶಮಿ
ಅಕ್ಟೋಬರ್‌ 4 : ಶನಿವಾರ (ಅರ್ಧದಿನ)
ಅಕ್ಟೋಬರ್‌ 5 : ಭಾನುವಾರ
ಅಕ್ಟೋಬರ್‌ 6 : ಬಕ್ರೀದ್‌ ರಜೆ( ಭಾನುವಾರವೇ ಬಕ್ರೀದ್‌ ಬಂದಿದ್ದರೂ ಬ್ಯಾಂಕ್‌ಗಳು ಅದನ್ನು 6 ಕ್ಕೆ ಅಂದರೆ ಸೋಮವಾರಕ್ಕೆ ಇಟ್ಟುಕೊಂಡಿದ್ದಾರೆ)

English summary
Please complete your bank transaction by 29th September as 30th and 1st October will be half year closing. Holidays follow from 2 Oct to 6 Oct due to festivals of India - Gandhi Jayanti, Dasara, Sunday and Bakrid. Happy Holidays!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X