ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಿಯಿಂದ ಪ್ಯಾಟೆಗೆ ಬಂದ ಯಶಸ್ವಿನಿ

By Ashwath
|
Google Oneindia Kannada News

ಬೆಂಗಳೂರು.ಮೇ. 27:ಗ್ರಾಮೀಣ ಪ್ರದೇಶಗಳ ರೈತರಿಗೆ ಮಾತ್ರ ಲಭ್ಯವಾಗುತ್ತಿದ್ದ ಯಶಸ್ವಿನಿ ಯೋಜನೆ ಇದೀಗ ನಗರ ಪ್ರದೇಶದ ಜನರಿಗೆ ವಿಸ್ತರಣೆಯಾಗಿದೆ.

ನಗರ ಪ್ರದೇಶದ ಸಹಕಾರ ಸಂಘಗಳ ಸದಸ್ಯರ ಯಶಸ್ವಿನಿ ಯೋಜನೆಯನ್ನು ವಿಸ್ತರಿಸುವ ಕಾರ್ಯಕ್ರಮಕ್ಕೆ ಮೇ. 27 ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ಬಜೆಟ್‌‌ನಲ್ಲಿ ಈ ಯೋಜನೆಗೆ ಗ್ರಾಮೀಣ ಭಾಗಕ್ಕೆ 45 ಕೋಟಿ ಹಣ ಮೀಸಲಿಟ್ಟರೆ, ನಗರ ಪ್ರದೇಶಗಳಿಗೆ ಹತ್ತು ಕೋಟಿ ಹಣ ಮೀಸಲಿಟ್ಟಿದ್ದೇವೆ. ಈ ವರ್ಷ‌ ಪ್ರಾಯೋಗಿಕವಾಗಿ ಈ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸಿದ್ದು, ನಗರದ ಜನತೆಯ ಪ್ರತಿಕ್ರಿಯೆಯನ್ನು ಆಧರಿಸಿ ಮುಂದಿನ ವರ್ಷದಿಂದ ಮತ್ತಷ್ಟು ಹಣವನ್ನು ಇದಕ್ಕೆ ಮೀಸಲಿಡಲಾಗುವುದು ಎಂದರು.

ಯಶಸ್ವಿನಿಯಲ್ಲಿ ಈಗ 823 ಕಾಯಿಲೆಗಳ ಶಸ್ತ್ರಚಿಕಿತ್ಸೆಗೆ ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸೇರ್ಪಡೆಯಾಗದಿರುವ ಕಾಯಿಲೆಗಳನ್ನು ಯಶಸ್ವಿನಿಯಲ್ಲಿ ಸೇರಿಸಲಿದ್ದೇವೆ. ಇದಕ್ಕಾಗಿ ಹೆಚ್ಚಿನ ಅರ್ಥಿ‌ಕ ಸಹಾಯವನ್ನು ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.

ಸಂಘಗಳ ಸದಸ್ಯರುಗಳಿಗೆ ಮಾತ್ರವಲ್ಲದೆ ರಾಜ್ಯದ ಎಲ್ಲಾ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಆರೋಗ್ಯ ಸೇವೆ ದೊರಕುವಂತೆ ಸರ್ಕಾರದ ವತಿಯಿಂದ ಆರೋಗ್ಯ ವಿಮಾ , ಯೋಜನೆಯನ್ನು ರೂಪಿಸುವ ಬಗ್ಗೆ ಪೂರ್ವಸಿದ್ಧತೆಯನ್ನು ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Now Yashaswini Scheme for Urbanites

ಇಲಾಖೆಯು ಪ್ರಥಮ ವರ್ಷದ ಸಾಧನೆ ಹಾಗೂ ನಗರ ಯಶಸ್ವಿನಿ ಯೋಜನೆಯ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಹಕಾರ ಸಚಿವ ಶ್ರೀ ಹೆಚ್. ಎಸ್. ಮಹದೇವಪ್ರಸಾದ್ ಅವರು ಗ್ರಾಮೀಣ ಭಾಗದಲ್ಲಿ ಯಶಸ್ವಿನಿ ಯೋಜನೆ ಯಶಸ್ವಿಯಾಗಿದೆ. ನಗರ ಪ್ರದೇಶದ ಕಾರ್ಮಿ‌ಕರ ಸಂಘ, ಕಲಾವಿದರ ಸಂಘಗಳು ಈ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸಲು ಮನವಿ ಮಾಡಿದ ಹಿನ್ನಲೆಯಲ್ಲಿ ಇದೀಗ ನಗರ ಪ್ರದೇಶಕ್ಕೂ ಈ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ ಎಂದರು.

ಗ್ರಾಮೀಣ ಯಶ್ವಸಿನಿ ಯೋಜನೆ ಪ್ರಾರಂಭವಾದ 11 ವರ್ಷಗಳಲ್ಲಿ 6,07,729 ಸದಸ್ಯರಿಗೆ 543.58 ಕೋಟಿ ರೂ. ವೆಚ್ಚದಲ್ಲಿ 496 ಆಸ್ಪತ್ರೆಗಳಲ್ಲಿ 823 ವಿವಿಧ ಚಿಕಿತ್ಸಾ ಸೌಲಭ್ಯಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯಶಸ್ವಿನಿ ಯೋಜನೆಯ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿಪ್ರಸಾದ್ ಶೆಟ್ಟಿ, ಜಯದೇವ್ ಹೃದ್ರೋಗ ಸಂಸ್ಥೆಯ ಮುಖ್ಯಸ್ಥ ಡಾ. ಸಿ.ಎನ್. ಮಂಜುನಾಥ್, ಡಾ. ಬಿದ್ರಿ ಹಾಗೂ ಡಾ. ಚಂದ್ರಮೌಳಿ ಅವರನ್ನು ಗೌರವಿಸಲಾಯಿತು.

ನಗರ ಯಶಸ್ವಿನಿ ಯೋಜನೆ ವಿವರ:
*ಯೋಜನೆಯಲ್ಲಿ ನಗರ ಪ್ರದೇಶದ ಕಾರ್ಯನಿರತ ಸಹಕಾರ ಸಂಘದ ಸದಸ್ಯರಾಗಿ ಮೂರು ತಿಂಗಳಾಗಿದ್ದರೆ ಈ ಯೋಜನೆಯಡಿ ಸದಸ್ಯರಾಗಬಹುದು. ಅಲ್ಲದೇ ಅವರ ಕುಟುಂಬದವರನ್ನು ಸಹ ಯೋಜನೆಯಡಿ ನೋಂದಾಯಿಸಬಹುದು.

*ಪ್ರತಿಯೊಬ್ಬ ಸದಸ್ಯರು ವಾರ್ಷಿ‌ಕವಾಗಿ ವಂತಿಗೆಯಾಗಿ 1,010 ರೂ.ಪಾವತಿಸಬೇಕು.

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರುಗಳು ನೋಂದಾಯಿಸಿಕೊಳ್ಳಲು 810 ರೂ.ಗಳನ್ನು ಪಾವತಿಸಬೇಕು. ಉಳಿದ 200 ರೂಗಳನ್ನು ಟ್ರಸ್ಟ್‌‌ ಪಾವತಿಸುತ್ತದೆ.

*ಸಹಕಾರ ಸಂಘದ ಸದಸ್ಯರು ತಮ್ಮ ಕುಟುಂಬದ ನವಜಾತ ಶಿಶುವಿನಿಂದ 75 ವರ್ಷದ ಒಳಗಿನ ಎಲ್ಲಾ ಸದಸ್ಯರನ್ನು ಯೋಜನೆಯಡಿಯಲ್ಲಿ ನೋಂದಾಯಿಸಬಹುದು.

*ನಗರ ಯಶಸ್ವಿನಿ ಯೋಜನೆಯಡಿ ಸದಸ್ಯತ್ವ ಹಾಗೂ ಗುರುತಿನ ಕಾರ್ಡ್‌‌‌ ಸಹಕಾರ ಸಂಘಗಳ ಸದಸ್ಯರು ಆಯಾ ಸಹಕಾರ ಸಂಘಗಳಲ್ಲೇ ಪಡೆಯಬಹುದು.

*ಈ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡ ಸದಸ್ಯರು ಜೂನ್‌1, 2014ರಿಂದ ಯಶಸ್ವಿನಿ ಟ್ರಸ್ಟ್‌‌ ಗುರುತಿಸಿದ ಚಿಕಿತ್ಸೆಗಳನ್ನು ನೆಟ್‌‌ವರ್ಕ್‌ ಆಸ್ಪತ್ರೆಗಳಲ್ಲಿ ಪಡೆಯಬಹುದು.

ಯಶಸ್ವಿನಿ ಯೋಜನೆಯ ಸಾಧನೆ:
ಕಳೆದ 11 ವರ್ಷ‌ಗಳಲ್ಲಿ 6,07,729 ಯಶಸ್ವಿನಿ ಸದಸ್ಯರಿಗೆ ರೂ.543.58 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ ಇರುವ 496 ವಿವಿಧ ನೆಟ್‌‌ವರ್ಕ್‌‌ ಆಸ್ಪತ್ರೆಗಳಲ್ಲಿ ಟ್ರಸ್ಟ್‌‌‌ನಿಂದ ಗುರುತಿಸಲ್ಪಟ್ಟ 823 ಶಸ್ತ್ರ ಚಿಕಿತ್ಸೆಗಳ ಸೌಲಭ್ಯವನ್ನು ನೀಡಲಾಗಿದೆ. ಅಲ್ಲದೇ 13,35,289 ಯಶಸ್ವಿನಿ ಸದಸ್ಯರು ವಿವಿಧ ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ ಉಚಿತ ಹೊರ ರೋಗಿ ಚಿಕಿತ್ಸೆಗಳನ್ನು ಪಡೆದಿದ್ದಾರೆ.

ನಗರ ಯಶಸ್ವಿನಿ ಯೋಜನೆಯಡಿ ಸಿಗುವ ಸೌಲಭ್ಯಗಳು:
*ಇದೊಂದು ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಆರೋಗ್ಯ ರಕ್ಷಣಾ ಯೋಜನೆಯಾಗಿದ್ದು, 823 ಶಸ್ತ್ರ ಚಿಕಿತ್ಸೆಗಳನ್ನು ನಗದು ರಹಿತವಾಗಿ ಟ್ರಸ್ಟ್‌‌ ಗುರುತಿಸಿದ ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ ಪಡೆಯಬಹುದು.

*ಕಾರ್ಡುದಾರರು ಸಾಮಾನ್ಯ ಆರೋಗ್ಯ ತಪಾಸಣೆಯನ್ನು ರೂ.100 ಹಾಗೂ ವಿಶೇಷ ತಜ್ಞರಿಂದ ತಪಾಸಣೆಯನ್ನು ರೂ.200 ಪಾವತಿಸಿ ಪರೀಕ್ಷಿಸಿಕೊಳ್ಳಬಹುದು. ಕಾರ್ಡ್ ಪಡೆದ ಮೂರು ತಿಂಗಳವರೆಗೆ ಅದೇ ಕಾರ್ಡ್‌‌ನಿಂದ ಉಚಿತ ತಪಾಸಣೆ ಮಾಡಿಸಿಕೊಳ್ಳಬಹುದು.

*ಕ್ಲಿನಿಕಲ್‌ ಮತ್ತು ಇತರೆ ಇನ್ವೆಸ್ಟಿಗೇಶನ್‌ಗಳನ್ನು ಶೇ.25 ರಿಯಾಯಿತಿ ಬೆಲೆಯಲ್ಲಿ ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ ಪಡೆಯಬಹುದು.

English summary
Now Members of cooperative societies in urban areas avail the benefit of Yashaswini Health Insurance scheme with the government. The annual premium for the beneficiaries is Rs.1010. Over 496 hospitals across the state have been listed for rendering the medical services to the beneficiaries. Those who enrol for the scheme could avail the health insurance benefit from the very next day of enrolment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X