ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಹೋರಾಟಗಾರರನ್ನು ಕೆಣಕಿದ ನಿತ್ಯಾನಂದ

|
Google Oneindia Kannada News

ಬೆಂಗಳೂರು, ಜು. 28 : ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮೀಜಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕನ್ನಡ ಪರ ಸಂಘಟನೆಗಳು ಕೇವಲ ಹಣಕ್ಕಾಗಿ ತಮ್ಮ ಆಶ್ರಮದ ಮುಂದೆ ಪ್ರತಿಭಟನೆ ನಡೆಸುತ್ತಾರೆ. 300 ರೂ.ಗಳಿಗಾಗಿ ಮೂರು ಗಂಟೆ ಕೂಗಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಹರಿದ್ವಾರದಲ್ಲಿ ಪ್ರವಚನ ನೀಡಿರುವ ನಿತ್ಯಾನಂದ ಸ್ವಾಮೀಜಿ "ತನ್ನ ವಿರುದ್ಧ ಪ್ರತಿಭಟನೆ ನಡೆಸುವ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಕೂಲಿ ಹೋರಾಟಗಾರರು, ನನ್ನ ಆಶ್ರಮದಲ್ಲಿ ಎಷ್ಟು ಗೇಟ್ ಗಳಿವೆ ಎಂದು ಅವರಿಗೆ ತಿಳಿದಿಲ್ಲ" ಎಂದು ಲೇವಡಿ ಮಾಡಿದ್ದಾರೆ. [ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಮುಹೂರ್ತ ಫಿಕ್ಸ್]

nithyananda

"ನನ್ನ ಆಶ್ರಮದ ಮುಂದೆ ನಡೆಯುವುದು ನೈಜ ಹೋರಾಟವಲ್ಲ, ಅಲ್ಲಿ ಪ್ರತಿಭಟನೆ ನಡೆಸುವವರು ಹಣ ಪಡೆದು ಮೂರು ಗಂಟೆಗಳ ಕೂಗಾಡಿ ಹೋಗುತ್ತಾರೆ. ನನ್ನ ಆಶ್ರಮದ ಮುಂದೆ ಪ್ರತಿಭಟನೆ ನಡೆಸಿ, ನನ್ನ ಭಾವಚಿತ್ರಕ್ಕೆ ಬೆಂಕಿಯಿಟ್ಟು, ಘೋಷಣೆಗಳನ್ನು ಕೂಗಿ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಇದಕ್ಕಾಗಿಯೇ ಪದೇ ಪದೇ ನನ್ನ ಆಶ್ರಮದ ಎದುರು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ" ಎಂದು ಪ್ರವಚನದಲ್ಲಿ ಹೋರಾಟಗಾರರ ವಿರುದ್ಧ ನಿತ್ಯಾನಂದ ಸ್ವಾಮೀಜಿ ಕಿಡಿ ಕಾಡಿದ್ದಾರೆ.

"ಮೂರು ಗಂಟೆಗಳ ಕಾಲ ನನ್ನ ಆಶ್ರಮದ ಮಂದೆ ಪ್ರತಿಭಟನೆ ನಡೆಸಿ, ಕೂಗಾಡುವುದು ಒಂದು ಶಿಫ್ಟ್ ನಲ್ಲಿ ಕೆಲಸ ಮಾಡಿದಂತೆ. ಇದಕ್ಕೆ ಅವರೆಲ್ಲರಿಗೂ 300 ರೂಪಾಯಿಗಳನ್ನು ನೀಡಲಾಗುತ್ತದೆ. ನ್ಯಾಯಯುತವಾಗಿ ಬೇಡಿಕೆ ಈಡೇರಲಿ ಎಂದು ಅವರು ಪ್ರತಿಭಟನೆ ನಡೆಸುವುದಿಲ್ಲ. ಅವರು ಮುಂದಿನ ಗೇಟ್ ಬಳಿ ಪ್ರತಿಭಟನೆ ನಡೆಸುವಾಗ ನಾನು ಹಿಂಬಾಗಿಲಿನಿಂದ ಓಡಾಡುತ್ತೇನೆ" ಎಂದು ನಿತ್ಯಾನಂದ ಸ್ವಾಮಿಗಳು ಹೋರಾಟವನ್ನು ವಿಶ್ಲೇಷಿಸಿದ್ದಾರೆ.

ಹೇಳಿಕೆಗೆ ಖಂಡನೆ : ಕಸ್ತೂರಿ ಕನ್ನಡ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ನಿತ್ಯಾನಂದ ಸ್ವಾಮೀಜಿಯ ಹೇಳಿಕೆಯನ್ನು ಖಂಡಿಸಿದ್ದಾರೆ. ನಿತ್ಯಾನಂದ ಸ್ವಾಮಿ ಆವರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿರುವ ಸಂಘಟನೆಗಳು ಆಶ್ರಮದ ಮುಂದೆ ಮತ್ತೊಂದು ಸುತ್ತಿನ ಹೋರಾಟ ನಡೆಸಲು ಚಿಂತನೆ ನಡೆಸುತ್ತಿವೆ.

ನಿತ್ಯಾಗೆ ಮತ್ತಷ್ಟು ಸಂಕಷ್ಟ : ಪುರುಷತ್ವ ಪರೀಕ್ಷೆ ಸಂಬಂಧದ ವಿಚಾರಣೆಗೆ ಗೈರು ಹಾಜರಾದ ನಿತ್ಯಾನಂದ ಸ್ವಾಮೀಜಿ ವಿರುದ್ಧ ರಾಮನಗರ ಸಿಜೆಎಂ ಕೋರ್ಟ್ ಸೋಮವಾರ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ. ನ್ಯಾಯಾಲಯದಲ್ಲಿ ನಿತ್ಯಾನಂದ ಪರ ವಕೀಲರು ತಮ್ಮ ಕಕ್ಷಿದಾರರು ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿರುವ ಕಾರಣ ಹಾಜರಾಗಲು ಸಾಧ್ಯವಿಲ್ಲ. ಆದ್ದರಿಂದ ಖುದ್ದು ಹಾಜರಾತಿಗೆ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನಿತ್ಯಾನಂದ ಪರ ವಕೀಲರ ಮನವಿಯನ್ನು ತಳ್ಳಿ ಹಾಕಿದೆ. ಆ.7ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದ್ದು, ಅಂದು ನಿತ್ಯಾನಂದ ಸ್ವಾಮೀಜಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಸಿಓಡಿ ಪೊಲೀಸರಿಗೆ ಸೂಚನೆ ನೀಡಿದೆ.

English summary
Kannada Activists protesting in front of my ashram for the sake of money said, Self-styled Godman Nithyananda. Kannada Activists condemned Nithyananda Swamy statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X