ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಜನತೆ ರಮ್ಯಾರನ್ನು ಕ್ಷಮಿಸುವುದಿಲ್ಲ: ನಿಖಿಲ್

By Mahesh
|
Google Oneindia Kannada News

ಮಂಡ್ಯ, ಏ.14: ಸಂಸದೆ ಹಾಗೂ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ಸ್ಥಳೀಯ ಮುಖಂಡರನ್ನು ಕಡೆಗಣಿಸಿದ್ದಾರೆ. ಹಿರಿಯ ನಾಯಕ ಅಂಬರೀಷ್ ಅವರ ಆರೋಗ್ಯ ಹಾಗೂ ರಾಜಕೀಯ ಪ್ರವೇಶದ ಬಗ್ಗೆ ಲಘುವಾದ ಹೇಳಿಕೆ ನೀಡಿದ್ದಾರೆ. ಹೀಗಾಗಿ ರಮ್ಯಾ ಅವರನ್ನು ಮಂಡ್ಯ ಜನತೆ ಸೋಲಿಸಲಿದ್ದಾರೆ. ಅಂಬರೀಷ್ ಅವರು ರಮ್ಯಾ ಅವರನ್ನು ಕ್ಷಮಿಸಬಹುದು ಆದರೆ, ಮಂಡ್ಯ ಜನತೆ ಕ್ಷಮಿಸುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಪಕ್ಷದ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಪರ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ‌ಶೋ ನಡೆಸಿ ಮತಯಾಚಿಸುವ ಸಂದರ್ಭದಲ್ಲಿ ರಮ್ಯಾ ವಿರುದ್ಧ ಈ ರೀತಿ ಹೇಳಿಕೆ ನೀಡಿದರು. ನಿಖಿಲ್ ಅವರ ಜತೆಯಲ್ಲಿ ನಟ ದಿಗಂತ್ ಅವರು ಉಪಸ್ಥಿತರಿದ್ದರು.

ನಂತರ ಹೊಳಲು ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ನಿಖಿಲ್,'ಅಂಬರೀಷ್ ‌ರವರ ಹಿರಿತನ ಹಾಗೂ ಸ್ಥಾನಮಾನಕ್ಕೆ ಬೆಲೆ ನೀಡಬೇಕಾದ ರಮ್ಯಾ ಅವರು, ಅಂಬಿ ದೊಡ್ಡ ನಟರೆಂಬುದನ್ನು ಮರೆತು ಲಘು ಹೇಳಿಕೆ ನೀಡುವ ಮೂಲಕ ಜಿಲ್ಲೆಯ ಜನ ಹಾಗೂ ಕಾರ್ಯಕರ್ತರ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದಾರೆ. ಇದೇ ಅವರ ಸೋಲಿಗೆ ಕಾರಣವಾಗಲಿದೆ. ರಾಜಕೀಯ ಕಾರಣಗಳಿಂದ ಅಂಬರೀಷ್, ರಮ್ಯಾರನ್ನು ಕ್ಷಮಿಸಬಹುದು. ಆದರೆ ಜಿಲ್ಲೆಯ ಜನತೆ ಹಾಗೂ ಅಂಬಿ ಅಭಿಮಾನಿಗಳು ಅವರನ್ನು ಕ್ಷಮಿಸುವುದಿಲ್ಲ ಎಂದರು.

Nikhil Kumaraswamy takes on Mandya Congress candidate Ramya

ದೇವೇಗೌಡರ ಹೋರಾಟಕ್ಕೆ ಶಕ್ತಿ : ಮಂಡ್ಯ ಜಿಲ್ಲೆ ಹೋರಾಟದ ಶಕ್ತಿ ಕೇಂದ್ರವಾಗಿದ್ದು, ಜೆಡಿಎಸ್ ಪಕ್ಷ ಸಹ ಹೋರಾಟದ ಕೇಂದ್ರ ಬಿಂದುವಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯ ಜನತೆ ಪಕ್ಷದ ಅಭ್ಯರ್ಥಿ ಪುಟ್ಟರಾಜು ಅವರನ್ನು ಬೆಂಬಲಿಸುವ ಮೂಲಕ ದೇವೇಗೌಡರ ಹೋರಾಟಕ್ಕೆ ಶಕ್ತಿ ತುಂಬಬೇಕೆಂದು ಮನವಿ ಮಾಡಿದರು.

ನಾನು ಈಗಾಗಲೇ ಹಲವು ಬಾರಿ ಮಂಡ್ಯಕ್ಕೆ ಭೇಟಿ ಕೊಟ್ಟಿದ್ದೆ. ಆದರೆ ಚುನಾವಣಾ ಪ್ರಚಾರಕ್ಕಾಗಿ ಪ್ರಥಮ ಬಾರಿಗೆ ಆಗಮಿಸಿದ್ದು, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನಮ್ಮ ತಾತಾ ದೇವೇಗೌಡರ ಕಾವೇರಿ ಹಾಗೂ ರೈತ ಪರ ಹೋರಾಟಕ್ಕೆ ಬಲ ನೀಡಲು ಪಕ್ಷದ ಅಭ್ಯರ್ಥಿಯನ್ನು ಚುನಾಯಿಸಿ ಲೋಕಸಭೆಗೆ ಕಳುಹಿಸಬೇಕೆಂದು ಕರೆ ನೀಡಿದರು.

ಜಿಲ್ಲೆಯ ಜನರ ವಿಶ್ವಾಸಕ್ಕೆ ಪಾತ್ರವಾಗಿರುವ ಜೆಡಿಎಸ್ ಈ ಬಾರಿ ಹೆಚ್ಚು ಅಂತರದಿಂದ ಜಯಗಳಿಸಲು ಜಿಲ್ಲೆಯಲ್ಲಿ ಚಲುವರಾಯಸ್ವಾಮಿ ಅವರ ನಾಯಕತ್ವದಲ್ಲಿ ಪಕ್ಷದ ಶಾಸಕರು, ಮುಖಂಡರು ಶ್ರಮಿಸುತ್ತಿದ್ದು, ಕಾರ್ಯಕರ್ತರು ಸಹ ಹಗಲಿರುಳು ಪಕ್ಷದ ಅಭ್ಯರ್ಥಿ ಪರ ಶ್ರಮಿಸಬೇಕೆಂದು ಮನವಿ ಮಾಡಿದರು.

English summary
Nikhil Gowda, son of former Chief Minister H.D. Kumaraswamy, has said he would actively work for strengthening the Janata Dal (Secular) across the State. Actor Diganth also present during the rally. Nikhil Gowda said Mandya people will never forgive Ramya, congress candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X