ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರ-ಬೆಂಗಳೂರು ನಡುವೆ ಹೊಸ ರೈಲು

|
Google Oneindia Kannada News

ಚಾಮರಾಜನಗರ, ಸೆ.2 : ಗಡಿ ಜಿಲ್ಲೆ ಚಾಮರಾಜನಗರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಹೊಸ ರೈಲು ಸೇವೆಯನ್ನು ಆರಂಭಿಸಲಾಗಿದೆ. ನೈಋತ್ಯ ರೇಲ್ವೆ ಸೋಮವಾರ ನೂತನ ರೈಲು ಸೇವೆಗೆ ಚಾಲನೆ ನೀಡಿದೆ.

ಚಾಮರಾಜನಗರದಿಂದ ಬೆಳಗ್ಗೆ 6.50ಕ್ಕೆ ಹೊರಡುವ ರೈಲು ಮೈಸೂರಿಗೆ 8.30ಕ್ಕೆ ತಲುಪಲಿದ್ದು, ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ. ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಹೊರಡುವ ಅದೇ ರೈಲು ರಾತ್ರಿ 8.30ಕ್ಕೆ ಚಾಮರಾಜನಗರ ತಲುಪಲಿದೆ. [ರೈಲಿನಲ್ಲೂ ಸಿಗುತ್ತೆ ಮಯ್ಯಾಸ್ ಉಪ್ಪಿಟ್ಟು, ಇಡ್ಲಿ]

Chamarajanagar

ನೂತನ ರೈಲು ಸೇವೆಯಿಂದಾಗಿ ಕೊಳ್ಳೆಗಾಲದಿಂದ ಬೆಂಗಳೂರಿಗೆ ಆಗಮಿಸಲು ಬಸ್ಸುಗಳನ್ನು ಅವಲಂಬಿಸಿದ್ದ ಜನರಿಗೆ ಅನುಕೂಲವಾಗಲಿದೆ. ಈ ರೈಲು ಮೈಸೂರು ಮೂಲಕ ಸಂಚರಿಸುವುದರಿಂದ ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಜನರಿಗೂ ಸಹಾಯಕವಾಗಲಿದೆ.

ಲಸಿಕೆ ಹಾಕುವ ಕಾರ್ಯಕ್ರಮ ಆರಂಭ : ಚಾಮರಾಜನಗರ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಸೆ.1ರಿಂದ ಆರಂಭಿಸಲಾಗಿದೆ. 19ನೇ ಜಾನುವಾರು ಗಣತಿ ಅನ್ವಯ ಜಿಲ್ಲೆಯಲ್ಲಿ 2,80.466 ಜಾನುವಾರುಗಳಿದ್ದು, ಆ ಪೈಕಿ 2,59.523 ರಾಸುಗಳು, 19,623 ಎಮ್ಮೆಗಳು. 1320 ಹಂದಿಗಳಿಗೆ ಸೆ. 1 ರಿಂದ 20 ರವರೆಗೆ ಲಸಿಕೆ ಹಾಕಲಾಗುತ್ತದೆ.

ಪ್ರತಿ ತಾಲೂಕುಗಳಲ್ಲೂ ಭಿತ್ತಿಪತ್ರ ಹಾಗೂ ಕರಪತ್ರ ಹಂಚಿ, ಬ್ಯಾನರ್ ಹಾಕಿ, ಹಾಲು ಉತ್ಪಾದಕರ ಸಹಕಾರ ಸಂಘದವರಿಗೆ ಮಾಹಿತಿ ನೀಡಿ ಲಸಿಕೆ ಹಾಕುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಲಸಿಕೆ ಹಾಕಲು ಜಿಲ್ಲೆಯ ನಾನಾ ಜಾನುವಾರುಗಳ ಸಂಖ್ಯೆಗನುಗುಣವಾಗಿ ಒಟ್ಟು 20 ತಂಡಗಳನ್ನು ರಚನೆ ಮಾಡಲಾಗಿದೆ.

English summary
The South Western Railway introduced a new train from Chamarajanagar to Bangalore on Monday. The train leaves Chamarajanagar at 6.50 am and reaches Mysore at 8.30 am and Bangalore at 12 pm. The same train leaves Bangalore at 3.30 pm and reach Chamarajanagar at 8.30 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X