ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಬಿ ಚಂದ್ರೇಗೌಡರಿಗೆ ರಾಜ್ಯಪಾಲ ಹುದ್ದೆ?

|
Google Oneindia Kannada News

ಬೆಂಗಳೂರು, ಜೂ.7 : ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯುಪಿಎ 2 ಆಡಳಿತ ಅವಧಿಯಲ್ಲಿ ನೇಮಕವಾದ ರಾಜ್ಯಪಾಲರ ಬದಲಾವಣೆಗೆ ಚಿಂತನೆ ನಡೆಸುತ್ತಿದೆ. ಒಟ್ಟು 9 ಜನ ರಾಜ್ಯಪಾಲರನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರ ನೂತನ ರಾಜ್ಯಪಾಲರನ್ನು ನೇಮಕ ಮಾಡುವ ಕಾರ್ಯ ಆರಂಭಿಸಿದರೆ ಕರ್ನಾಟಕದ ಇಬ್ಬರು ನಾಯಕರು ರಾಜ್ಯಪಾಲರ ಹುದ್ದೆ ಅಲಂಕರಿಸುವ ಸಾಧ್ಯತೆ ಇದೆ. ರಾಜ್ಯಸಭಾ ಸದಸ್ಯ ಎಂ.ರಾಮಾಜೋಯಿಸ್ ಮತ್ತು ಬಿಜೆಪಿ ಹಿರಿಯ ಮುಖಂಡ ಡಿ.ಬಿ.ಚಂದ್ರೇಗೌಡ ಅವರು ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆ ಇದೆ.

D.B. Chandre Gowda

ನಿವೃತ್ತ ನ್ಯಾಯಮೂರ್ತಿ ಎಂ.ರಾಮಾಜೋಯಿಸ್ ಅವರು ಈಗಾಗಲೇ ಜಾರ್ಖಂಡ್ ಮತ್ತು ಬಿಹಾರದಲ್ಲಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸದ್ಯ ಅವರ ರಾಜ್ಯಸಭಾ ಸದಸ್ಯತ್ವದ ಅವಧಿಯೂ ಮುಗಿಯುತ್ತಾ ಬಂದಿದ್ದು, ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡುವಂತೆ ರಾಜ್ಯ ಬಿಜೆಪಿ ಘಟಕವೂ ಸಲಹೆ ನೀಡಿದೆ ಎಂದು ತಿಳಿದುಬಂದಿದೆ. [ಬೆಂಗಳೂರು ಉತ್ತರದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ]

ಹಾಲಿ ಸಂಸದರಾಗಿದ್ದರೂ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಡಿ.ಬಿ.ಚಂದ್ರೇಗೌಡರಿಗೆ ಟಿಕೆಟ್ ನೀಡಿರಲಿಲ್ಲ. ಹಿರಿಯ ನಾಯಕ ಚಂದ್ರೇಗೌಡರನ್ನು ಸದ್ಯ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಈಗಾಗಲೇ ಕೇಂದ್ರ ಸರ್ಕಾರ ನೂತನ ರಾಜ್ಯಪಾಲರ ಪಟ್ಟಿ ಸಿದ್ಧಪಡಿಸುತ್ತಿದೆ ಎನ್ನುತ್ತವೆ ಮೂಲಗಳು. [ಅವಧಿಗೂ ಮುನ್ನ ನಾನೇಕೆ ರಾಜೀನಾಮೆ ಕೊಡ್ಲಿ? : ರಾಜ್ಯಪಾಲರು]

ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳ ರಾಜ್ಯಪಾಲರ ಅವಧಿ ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ಕೊನೆಗೊಳ್ಳಲಿದೆ. ಆದ್ದರಿಂದ ಕೇಂದ್ರ ಸರ್ಕಾರ ನೂತನ ರಾಜ್ಯಪಾಲರ ನೇಮಕದ ಬಗ್ಗೆ ಚಿಂತನೆ ಆರಂಭಿಸಿದೆ. ಕರ್ನಾಟಕ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರ ಅವಧಿ ಜೂನ್ 29ಕ್ಕೆ ಕೊನೆಗೊಳ್ಳಲಿದ್ದು, ಕಲ್ಯಾಣ್ ಸಿಂಗ್ ನೂತನ ರಾಜ್ಯಪಾಲರಾಗುವ ಸಾಧ್ಯತೆ ಇದೆ.

ಉಳಿದದಂತೆ ಬಿಜೆಪಿಯ ಹಿರಿಯನಾಯಕರಾದ ಮುರಳಿ ಮನೋಹರ್ ಜೋಶಿ, ಯಶವಂತ್ ಸಿನ್ಹಾ, ವಿ.ಕೆ.ಮಲ್ಹೋತ್ರಾ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಲು ಬಿಜೆಪಿ ನಿರ್ಧರಿಸಿದೆ. ಮುಂದಿನ ವಾರ ನೂತನ ರಾಜ್ಯಪಾಲರ ಪಟ್ಟಿಯನ್ನು ರಾಷ್ಟ್ರಪತಿಗಳ ಅಂತಿಮ ಒಪ್ಪಿಗೆಗಾಗಿ ಕಳುಹಿಸುವ ಸಾಧ್ಯತೆ ಇದೆ.

English summary
Nearly two weeks after taking charge, the government led by Prime Minister Narendra Modi is considering to replace Governors who were appointed by the UPA-II regime. Karnataka based Justice M.Rama Jois and D.B. Chandre Gowda may appointed as governors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X