ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

28 ಅಭ್ಯರ್ಥಿಗಳನ್ನು ಗೆಲ್ಲಿಸಿ : ಕೊಪ್ಪಳದಲ್ಲಿ ಮೋದಿ

|
Google Oneindia Kannada News

ಕೊಪ್ಪಳ, ಏ.8 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಂಗಳವಾರ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಕೊಪ್ಪಳ, ಬಾಗಲಕೋಟೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಮೋದಿ ಭಾರತ ವಿಜಯ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದು, ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡಸಲಿದ್ದಾರೆ.

ಮೊದಲು ಕೊಪ್ಪಳದಲ್ಲಿ ನರೇಂದ್ರ ಮೋದಿ ಸಮಾವೇಶ ನಡೆಯಲಿದೆ. ಕೊಪ್ಪಳಕ್ಕೆ ಮಧ್ಯಾಹ್ನ 1.45ರ ಸುಮಾರಿಗೆ ನರೇಂದ್ರ ಮೋದಿ ಕೊಪ್ಪಳಕ್ಕೆ ಆಗಮಿಸಿದರು. ಕೇಂದ್ರ ಸರ್ಕಾರಕ್ಕೆ ಕಣ್ಣಿಲ್ಲ, ಕಿವಿಯೂ ಇಲ್ಲ ಎಂದು ಸರ್ಕಾರವನ್ನು ಲೇವಡಿ ಮಾಡಿದ ಮೋದಿ, ಕೇಂದ್ರದ ಯುಪಿಎ ಸರ್ಕಾರ ಜನರಿಗೆ ಭಾರವಾಗಿದೆ ಎಂದು ಹೇಳಿದರು. ಕ್ಷೇತ್ರದ ಅಭ್ಯರ್ಥಿ ಸಂಗಣ್ಣ ಕರಡಿ ಪರವಾಗಿ ಮತ ಯಾಚಿಸಿದ ಮೋದಿ ರಾಜ್ಯದ 28 ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಿ ಎಂದು ಜನರಿಗೆ ಮನವಿ ಮಾಡಿದರು. [ದೇವರ ನಾಡಲ್ಲಿ ಮೋದಿ ಕನ್ನಡದ ಕಂಪು]

Narendra Modi

ಮೋದಿ ಭಾಷಣದ ಮುಖ್ಯಾಂಶಗಳು

* ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಶೆಹಜಾದ್ ಹೇಳುತ್ತಾರೆ ನಾವು ಆರ್ ಟಿಐ ನೀಡಿದ್ದೇವೆ ಎಂದು. ಆದರೆ, ಇದರಿಂದ ಜನರ ಹೊಟ್ಟೆ ತುಂಬಿದೆಯೇ?. ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರಲು ಸಾಧ್ಯವಾಗಿದೆಯೇ? ಎಂದು ಪ್ರಶ್ನಿಸಿದರು.

* ಕೇಂದ್ರ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. ಅದಕ್ಕೆ ಕಣ್ಣು ಮತ್ತು ಕಿವಿ ಇಲ್ಲ. ಆದ್ದರಿಂದ ಬಡವರ ಕಷ್ಟ ಕಾಣುವುದಿಲ್ಲ, ಕೂಗು ಕೇಳುವುದಿಲ್ಲ ಎಂದು ಮೋದಿ ಲೇವಡಿ ಮಾಡಿದರು.

* ಕೇಂದ್ರ ಸರ್ಕಾರ ಜನರಿಗೆ ಭಾರವಾಗಿದೆ. ಭ್ರಷ್ಟಾಚಾರದಿಂದ ತುಂಬಿ ಹೋಗಿರುವ ಸರ್ಕಾರ ದೇಶದ ಜನರಿಗೆ ಭಾರವಾಗಿದೆ. ರೈತ ವಿರೋಧಿ, ಯುವಕರ ವಿರೋಧಿ ಸರ್ಕಾರಕ್ಕೆ ಒಂದು ನಿಮಿಷವೂ ಅಧಿಕಾರದಲ್ಲಿ ಇರಲು ಹಕ್ಕಿಲ್ಲ ಎಂದು ಮೋದಿ ಹೇಳಿದರು.

* ದೇಶವನ್ನು ಅಭಿವೃದ್ಧಿ ಮಾಡಬೇಕು ಎಂದರೆ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದ ಮೋದಿ, ರಾಜ್ಯದ 28 ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಿ. ನಿಮ್ಮ ರಾಜ್ಯವನ್ನು ಅಭಿವೃದ್ಧಿ ಮಾಡುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.

ಸಿಂಹದ ಕತೆ : ಮೋದಿ ತಮ್ಮ ಭಾಷಣದಲ್ಲಿ ಸಿಂಹದ ಕತೆ ಹೇಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದರು. ಕಾಡಿನಲ್ಲಿ ನಿಮ್ಮ ಕಾರಿಗೆ ಸಿಂಹ ಎದುರಾದಾಗ ಅದನ್ನು ಓಡಿಸಲು ನೀವು ನನ್ನ ಬಳಿ ಬಂದೂಕಿನ ಲೈಸೆನ್ಸ್ ಇದೆ ಎಂದರೆ ಸಾಕೇ ಎಂದು ಪ್ರಶ್ನಿಸಿದ ಮೋದಿ, ಕಾಂಗ್ರೆಸ್ ಸಹ ಎಲ್ಲದಕ್ಕೂ ನಮ್ಮ ಬಳಿ ಆರ್ ಟಿಐ ಇದೆ ಎಂದು ಹೇಳುತ್ತಿದೆ ಎಂದು ವ್ಯಂಗ್ಯವಾಡಿದರು.

English summary
Elections 2014 : Bharatiya Janata Partys prime ministerial candidate Narendra Modi address Bharat Vijay rally in Koppal on April 8 as part of his election campaign in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X