ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿದ ಹಾವೇರಿಯಲ್ಲಿ ಮೋದಿ ಮಾತಿನ ಲಹರಿ

By Mahesh
|
Google Oneindia Kannada News

ಹಾವೇರಿ, ಏ.13: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ನಂತರ ಹಾವೇರಿಯಲ್ಲಿ ನಡೆದ ಭಾರತ್ ವಿಜಯ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಯುಪಿಎ ಸರ್ಕಾರದ ಬೆಲೆ ಏರಿಕೆ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ಮೋದಿ ಭಾಷಣ ಜಾರಿಯಲ್ಲಿದೆ. ಸೋನಿಯಾ ಅವರು ಕುರುಡು ಪ್ರೇಮದಿಂದ ಪುತ್ರವ್ಯಾಮೋಹಕ್ಕೆ ಒಳಗಾಗಿ ಮಗನನ್ನು ಬೆಳೆಸಲು ದೇಶವನ್ನು ಹಾಳು ಮಾಡಿದ್ದಾರೆ ಎಂದಿದ್ದಾರೆ.

ಹಾವೇರಿಯಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಅಭ್ಯರ್ಥಿ ಶಿವಕುಮಾರ್ ಉದಾಸಿ ಸೇರಿದಂತೆ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.

ಹಾವೇರಿಯಲ್ಲಿ ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು:
* ಮೊಟ್ಟ ಮೊದಲ ಬಾರಿಗೆ ತತ್ತ್ವ ಸಿದ್ಧಾಂತ ಗಾಳಿಗೆ ತೂರಿ ಕಾಂಗ್ರೆಸ್ ಸರ್ಕಾರ ಮೈತ್ರಿ ಕೂಟ ಮಾಡಿಕೊಂಡು ಮೋದಿ ತಡೆಯಲು ಯತ್ನಿಸುತ್ತಿದೆ.
* ಭ್ರಷ್ಟಾಚಾರ ತೊಲಗಬೇಕು, ಇದಕ್ಕೆ ಬಿಜೆಪಿ ಅಧಿಕಾರಕ್ಕೆ ಬರಬೇಕು.
* ಕುಡಿಯುವ ನೀರು ಬೇಕೇ ಬೇಡವೇ? ಉದ್ಯೋಗ ಸಿಗಬೇಕೇ ಬೇಡವೆ? ಕಾಂಗ್ರೆಸ್ ಏನಾದರೂ ನೀಡಲು ಸಾಧ್ಯವೇ?
* ರೈತರಿಗೆ ಬೀಜ, ಗೊಬ್ಬರ, ವಿದ್ಯುತ್, ನೀರು ಹೀಗೆ ಕೃಷಿಗೆ ಆಗುವ ಎಲ್ಲಾ ಖರ್ಚು ಆಧಾರಿಸಿ, ಇಳುವರಿ ನಂತರ ಬಂದ ಲಾಭವನ್ನು ಸಮೀಕರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವ ಯೋಜನೆ ಮಾಡುತ್ತೇನೆ.

Modi address Bharat Vijay Rally at Haveri, Karnataka

* ಮನಮೋಹನ್ ಸಿಂಗ್ ಒಬ್ಬ accidental prime minister.. ಸಿಂಗ್ ಅವರ ಅಪಘಾತದಿಂದ ಕೋಟಿಗಟ್ಟಲೆ ಜನರು ಕಷ್ಟ ಅನುಭವಿಸಬೇಕಿದೆ.
* ಸರ್ಕಾರವನ್ನು ಮೇಡಂ ಸೋನಿಯಾ ಚಲಾಯಿಸುತ್ತಿದ್ದಾರೆ ಎಂಬುದನ್ನು ಪ್ರಧಾನಿ ಕಾರ್ಯಾಲಯದವರೇ ಒಪ್ಪಿಕೊಂಡಿದ್ದಾರೆ.
*ಸೋನಿಯಾ ಗಾಂಧಿ ಅವರು ದೇಶದಲ್ಲಿ ಕಿವುಡು ಮೂಗ, ಕೈ ಕಾಲಿಲ್ಲದ ಸರ್ಕಾರ ನಡೆಸಿದ್ದಾರೆ. ಆಡಳಿತ ಆಸ್ಪತ್ರೆಯಲ್ಲಿ ಮಲಗಿದೆ.
* ತಮ್ಮ ಮಗನನ್ನು ಬೆಳೆಸಲು ಮನಮೋಹನ್ ಸಿಂಗ್ ಅವರು ರಿಮೋಟ್ ಕಂಟ್ರೋಲ್ ಮಾಡಿಕೊಂಡು ಸೋನಿಯಾ ಅವರು ಆಡಳಿತ ನಡೆಸಿದ್ದಾರೆ. 10 ವರ್ಷ ದುರಾಡಳಿತ ನೀಡಿದ್ದಾರೆ.
* ಯುಪಿಎ 2 ಪ್ರಧಾನಿಯಾಗಲು ಮನಮೋಹನ್ ಅವರು ಸಿದ್ದರಿರಲಿಲ್ಲ. ಆದರೆ, ಮಗ ಇನ್ನೂ ತಯಾರಿಲ್ಲದ ಕಾರಣ, ಎಂಎಂ ಸಿಂಗ್ ಅವರನ್ನು ಬಲವಂತವಾಗಿ ಪ್ರಧಾನಿ ಪಟ್ಟಕ್ಕೇರಿಸಿದರು.
* ಕರ್ನಾಟಕ ಬಯಸಿದರೆ ಭಾರತದ ಭವಿಷ್ಯ ಬದಲಾಯಿಸಬಲ್ಲದು.
* ಮತ್ತೊಮ್ಮೆ ಗುಜರಾತಿಗೆ ಬನ್ನಿ ಎಂದು ದೇವೇಗೌಡರಿಗೆ ಆಹ್ವಾನ ನೀಡಿದ ನರೇಂದ್ರ ಮೋದಿ.
*ಕಾಂಗ್ರೆಸ್ಸಿನ 15 ಅಂಶಗಳ ಕಾರ್ಯಕ್ರಮ ಎಂಬುದೆಲ್ಲ ಸುಳ್ಳು, ಅಲ್ಪಸಂಖ್ಯಾತರಿಗೆ ಯುಪಿಎ ಸರ್ಕಾರ ಏನು ಮಾಡಿಲ್ಲ.
* ಹಾವೇರಿಯ ಮಹಾ ಜನಗಳೇ ಈ ಬಿಸಿಲು, ಧೂಳಿನಲ್ಲಿ ಬಹಳ ಹೊತ್ತು ಕಾದಿದ್ದೀರಾ? ನಿಮ್ಮ ನಿರೀಕ್ಷೆಯನ್ನು ನಾನು ಹುಸಿಗೊಳಿಸುವುದಿಲ್ಲ ಎಂದು ಮೋದಿ ಹೇಳಿದರು. ಹಾವೇರಿಯಲ್ಲಿ ಭಾನುವಾರ 39 ಡಿಗ್ರಿಸೆಲ್ಸಿಯಸ್ ತಾಪಮಾನವಿದೆ.

ನರೇಂದ್ರ ಮೋದಿ ಭಾಷಣದ ನೇರ ವಿಡಿಯೋ ವೀಕ್ಷಿಸಿ:

English summary
BJP’s Prime Ministerial candidate Narendra Modi addresses Bharat Vijay rally at Haveri today(Apr.13).Modi is campaigning for BJP candidate Shivakumar Udasi. Expecting massive crowd at the rally venue, elaborate security arrangements have been made.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X