ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಿನಲ್ಲಿ ಶೋಭಾ ಪರ ಮೋದಿ ಭಾಷಣ

By Mahesh
|
Google Oneindia Kannada News

ಚಿಕ್ಕಮಗಳೂರು, ಏ.13: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮ್ಮ ಭಾರತ್ ವಿಜಯ್ ಸಮಾವೇಶವನ್ನು ಮುಂದುವರೆಸಿದ್ದು ಭಾನುವಾರ ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಮೋಯ್ಲಿ, ದೇವೇಗೌಡರ ವಿರುದ್ಧ ತಿರುಗೇಟು ನೀಡಿದರು. ಮಧ್ಯಾಹ್ನದ ವೇಳೆಗೆ ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತಮಾಡಿದರು..

ಚಿಕ್ಕಮಗಳೂರಿನ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆದಿರುವ ಭಾರತ ಗೆಲ್ಲಿಸಿ, ಭಾರತ ವಿಜಯ್ ಯಾತ್ರೆ ಸಮಾವೇಶದಲ್ಲಿ ಮೋದಿ ಅವರು ಉಡುಪಿ-ಚಿಕ್ಕಮಗಳೂರಿನ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತ ಯಾಚಿಸಿದ್ದಾರೆ..

Narendra Modi addresses Bharat Vijay Rally in Chikmagalur

ಚಿಕ್ಕಮಗಳೂರಿನಲ್ಲಿ ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು:
* ಕಾಫಿ, ಅಡಿಕೆ, ತೆಂಗು ಮಲೆನಾಡಿನ ತವರು ಚಿಕ್ಕಮಗಳೂರು, ಉಡುಪಿ, ಹಾಸನ ಜಿಲ್ಲೆಯ ಜನತೆಗೆ ಅನಂತ ಅನಂತ ನಮಸ್ಕಾರ.
* ಈ ಚುನಾವಣೆ ಅಂಕ ಗಣಿತಕ್ಕೆ ಸಂಬಂಧಿಸಿದ್ದಲ್ಲ. ಇದು ಕೋಟಿಗಟ್ಟಲೇ ಜನರ ಮನಸ್ಸಿನ ಬೆಸುಗೆಯಾಗಿದೆ. ಜನರು 1+1=2 ಅಲ್ಲ 111 ಮಾಡಬಲ್ಲರು.
* ಚಿಕ್ಕಮಗಳೂರಿನ ಜನತೆ ನೀವು ಇಂದಿರಾಗಾಂಧಿ ಅವರಿಗೆ ರಾಜಕೀಯ ಮರುಹುಟ್ಟು ನೀಡಿದ್ದೀರಿ. ಅವರು ಮಾಡಿದ ಯೋಜನೆಗಳ ಹತ್ತು ಪಟ್ಟು ಇಲ್ಲಿ ಸಾಕಾರಗೊಳಿಸಲು ನಾನು ಬದ್ಧ ನಾಗಿದ್ದೇನೆ.
* 70ರ ದಶಕರಲ್ಲಿ ಇಂದಿರಾ ಗಾಂಧಿ "Ek sherni, sau langur Chikmagalur, Chikmagalur," ಎಂಬ ವಾಕ್ಯ ಇಲ್ಲಿನ ಹಳಬರಿಗೆ ಗೊತ್ತಿರುತ್ತದೆ. ಈಗ sherni(ಸಿಂಹಿಣಿ) ಬದುಕಿಲ್ಲ. ಮಕ್ಕಳು, ಮೊಮ್ಮಕ್ಕಳಲ್ಲಿ ಬಲವಿಲ್ಲ. ಈಗ ಯಾರು ಉಳಿದಿದ್ದಾರೆ ಎಂಬುದು ನಿಮಗೆ ಗೊತ್ತಿದೆ.


* ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಹೇಳಿದ ಜೈ ಜವಾನ್ ಜೈ ಕಿಸಾನ್ ವಾಕ್ಯಕ್ಕೆ ಮತ್ತೆ ಬೆಲೆ ಸಿಗಬೇಕಿದೆ.
* ಕಾಂಗ್ರೆಸ್ ಇದೇ ವಾಕ್ಯವನ್ನು ಮರ್ ಜವಾನ್ ಮರ್ ಕಿಸಾನ್ ಎಂದು ಬದಲಾಯಿಸಿಬಿಟ್ಟಿದೆ. ಇದರಿಂದ ಆತಂಕವಾದಿಗಳ ಸೃಷ್ಟಿಯಾಗಿದೆ.
* ನಮ್ಮ ಪೂರ್ವಜರು ಅಡಿಕೆಗೆ ಪಾವಿತ್ರ ಸ್ಥಾನ ಕಲ್ಪಿಸಿ ಪೂಜೆ ಕಾರ್ಯದಲ್ಲೂ ಬಳಸಲು ಆರಂಭಿಸಿದರು. ಆದರೆ, ಕಾಂಗ್ರೆಸ್ ಅಡಿಕೆಯನ್ನು ವ್ಯಾಪಾರಿ ದೃಷ್ಟಿಯಿಂದ ಮಾತ್ರ ನೋಡುತ್ತಿದೆ. ಕಾಂಗ್ರೆಸ್ ಸರ್ಕಾರ ರೈತರನ್ನು ಕಣ್ಣೀರು ಹಾಕುವಂತೆ ಮಾಡಿದೆ.
* ನಾನು ವಿಕಾಸ, ಅಭಿವೃದ್ಧಿ, ಪಾರದರ್ಶಕ ಆಡಳಿತ ನೀಡುವ ಭರವಸೆ ನೀಡುತ್ತೇನೆ.
* ಇಲ್ಲಿಗೆ ಕೂಲಿಗೆ ಬಂದಿರುವ ತಮಿಳುನಾಡು ಮೂಲದವರಿಗೆ ನನ್ನ ವಣಕಂ, ನಾಳೆಯ ಶುಭದಿನದ ಶುಭಹಾರೈಕೆಗಳು.
* ಚೆನ್ನೈಗೆ ಹೋಗಿ ರಜನಿಕಾಂತ್ ಅವರನ್ನು ಭೇಟಿ ಮಾಡಲು ಕಾರ್ಯಕ್ರಮ ನಿಗದಿಯಾಗಿದೆ.

* ಮತ್ತೊಮ್ಮೆ ದೇವೇಗೌಡರ ನಿವೃತ್ತಿ ಬಗ್ಗೆ ಮೋದಿ ಪ್ರತಿಕ್ರಿಯಿಸುತ್ತಾ.. ನೀವು ಕರ್ನಾಟಕ ರಾಜ್ಯ ತೊರೆಯಲೇಬೇಕಾಗಿದ್ದರೆ ದಯವಿಟ್ಟು ಗುಜರಾತಿಗೆ ಬನ್ನಿ.. ನೀವು ಬೇಕಾದ ವ್ಯವಸ್ಥೆ ಮಾಡುತ್ತೇನೆ ಮಗನಂತೆ ನೋಡಿಕೊಳ್ಳುತ್ತೇನೆ. ಬೇಡವೆಂದರೆ ವಯೋವೃದ್ಧರ ಆಶ್ರಮದಲ್ಲಿ ನೆಲೆಸಿ.

* 300ಕ್ಕೂ ಅಧಿಕ ಕಮಲಗಳನ್ನು, ಕರ್ನಾಟಕದಲ್ಲೂ ಗರಿಷ್ಠ ಪ್ರಮಾಣಗಳನ್ನು ಗೆಲ್ಲಿಸಿ ದೆಹಲಿಗೆ ಕಳಿಸಿ. ಸಮರ್ಥ ಸರ್ಕಾರದ ಅವಶ್ಯಕತೆ ದೇಶಕ್ಕಿದೆ.
* ಕಾಂಗ್ರೆಸ್ ಹಲವೆಡೆ ಠೇವಣಿ ಕಳೆದುಕೊಳ್ಳಲಿದೆ. ಎರಡಂಕಿ ದಾಟಲು ಕಷ್ಟಪಡಬೇಕಾಗುತ್ತದೆ.

ಸಮಾವೇಶದಲ್ಲಿ ಪಾಲ್ಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಾತನಾಡಿ
* ಮಹಿಳೆಯರ ಸಂರಕ್ಷಣೆ, ಸಬಲೀಕರಣಕ್ಕಾಗಿ ಮಹಿಳಾ ಅಭ್ಯರ್ಥಿ ಶೋಭಾ ಅವರನ್ನು ಗೆಲ್ಲಿಸಿ, ಮೋದಿ ಅವರಿಂದ ಮಾತ್ರ ಮಹಿಳೆಯರ,ದೇಶದ ರಕ್ಷಣೆ ಸಾಧ್ಯ: ಬಿಎಸ್ ಯಡಿಯೂರಪ್ಪ.
* ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅಡಿಕೆ ಮೇಲಿನ ನಿಷೇಧ ತೆರವು ನಮ್ಮ ಭರವಸೆ.
* ಬೆಳಗಾವಿಯಲ್ಲಿ ಸುವರ್ಣ ಸೌಧದ ಬಳಿ ಕಬ್ಬುಬೆಳೆಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡು ಸತ್ತ. ಆದರೆ, ಬಿಜೆಪಿ ಕಾಲದಲ್ಲಿ ನಡೆದ ರೈತರ ಆತ್ಮಹತ್ಯೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡುತ್ತಾ ರೈತ ಕುಡಿದು ಸತ್ತ ಎಂದಿದ್ದಾರೆ.

ಕಾರ್ಕಳದ ಮುಖಂಡ ಸುನಿಲ್ ಕುಮಾರ್: ಜಿಲ್ಲೆಯಲ್ಲಿ ಹುಲಿ ಯೋಜನೆ ಬೇಡ ಎಂದು ಬಿಜೆಪಿ ವಿರೋಧ ಮಾಡಿತ್ತು. ಈಗ ಪಶ್ಚಿಮ ಘಟ್ಟದಲ್ಲಿ ಪರಿಸರ ಉಳಿಸಲು ಕಸ್ತೂರಿ ರಂಗನ್ ವರದಿ ಶಿಫಾರಸ್ಸನ್ನು ಒಪ್ಪಿಕೊಂಡರೆ ಎರಡು ಜಿಲ್ಲೆಗಳ ನೂರಾರು ಗ್ರಾಮಗಳು ಒಕ್ಕಲೆಬ್ಬಿಸಬೇಕಾಗುತ್ತದೆ.
* ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಕಸ್ತೂರಿ ರಂಗನ್ ವರದಿ ಬಗ್ಗೆ ಒಂದೇ ಮಾತು ಆಡಿಲ್ಲ.

BS Yeddyurappa

* ಮಹಿಳೆಯರ ಸಂರಕ್ಷಣೆ, ಸಬಲೀಕರಣಕ್ಕಾಗಿ ಮಹಿಳಾ ಅಭ್ಯರ್ಥಿ ಶೋಭಾ ಅವರನ್ನು ಗೆಲ್ಲಿಸಿ, ಮೋದಿ ಅವರಿಂದ ಮಾತ್ರ ಮಹಿಳೆಯರ,ದೇಶದ ರಕ್ಷಣೆ ಸಾಧ್ಯ: ಬಿಎಸ್ ಯಡಿಯೂರಪ್ಪ.
* ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅಡಿಕೆ ಮೇಲಿನ ನಿಷೇಧ ತೆರವು ನಮ್ಮ ಭರವಸೆ.
Sunil kumar

ಜೀವರಾಜ್ : ಸಿದ್ದರಾಮಯ್ಯ ಅವರದ್ದು ರೈತ ವಿರೋಧಿ ಸರ್ಕಾರ, ಕ್ವಾರ್ಟರ್(ಮದ್ಯ) ರೇಟ್ ಏರಿಸುತ್ತಾರೆ. ಅನ್ನ ಭಾಗ್ಯ ಎಂದು ಮಾತನಾಡುತ್ತಾರೆ. ಕೂಲಿ ಕಾರ್ಮಿಕರು ಮಲೆನಾಡಿನಲ್ಲಿ ಬದುಕಲು ಆಗದಂಥ ವಾತಾವರಣ ಸೃಷ್ಟಿಸಿದ್ದಾರೆ.
* ಜಯಪ್ರಕಾಶ್ ಅವರು ರೈಲು ಯೋಜನೆ ತಮ್ಮ ಕೊಡುಗೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಾಜಪೇಯಿ ಅವರ ಕಾಲದಲ್ಲಿ ಮಂಜೂರಾದ ಯೋಜನೆಗೆ ಯಡಿಯೂರಪ್ಪ ಅವರು ಅನುದಾನ ಮಂಜೂರು ಮಾಡಿದ್ದು ಎಂಬುದು ಎಲ್ಲರಿಗೂ ಗೊತ್ತಿದೆ.
* ಗುಟ್ಕಾ, ಅಡಿಕೆ ಬ್ಯಾನ್ ಮಾಡಿದ್ದು ಏಕೆ ಎಂದರೆ ಐಟಿಸಿ ಸಿಗರೇಟ್ ಕಂಪನಿ ಜತೆ ಕಾಂಗ್ರೆಸ್ ಕೈ ಜೋಡಿಸಿದೆ.

ಚಿಕ್ಕಮಗಳೂರಿನ ಸಮಾವೇಶದ ನಂತರ ಮೋದಿ ಅವರು ಹಾವೇರಿಯಲ್ಲಿ ಶಿವಕುಮಾರ ಉದಾಸಿ ಪರ ಭಾಷಣ ಮಾಡಲಿದ್ದಾರೆ. ನಂತರ ಮೋದಿ ಅವರು ತಮಿಳುನಾಡಿಗೆ ತೆರಳಲಿದ್ದು, ಚೆನ್ನೈನಲ್ಲಿ ಸಮಾವೇಶದಲ್ಲಿ ಎಲ್ ಕೆ ಅಡ್ವಾಣಿ ಅವರ ಜತೆ ಭಾಗವಹಿಸಲಿದ್ದಾರೆ. ಇದೇ ವೇಳೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

ಚಿಕ್ಕಮಗಳೂರಿನಲ್ಲಿ ನರೇಂದ್ರ ಮೋದಿ ಭಾಷಣದ ನೇರ ವಿಡಿಯೋ ವೀಕ್ಷಿಸಿ:

English summary
Watch LIVE! BJP prime minister candidate Narendra Modi addressing Bharat Vijay Rally in Chikmagalur on Apr 13. Modi is campaigning for BJP candidate Shobha Karandlaje
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X