ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈತ್ರಿಯಾ ಗೌಡ ಪ್ರಕರಣ, ಡಿವಿಎಸ್‌ಗೆ ನೋಟಿಸ್‌

|
Google Oneindia Kannada News

ಬೆಂಗಳೂರು, ಸೆ.8 : ನಟಿ ಮೈತ್ರಿಯಾ ಗೌಡ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಆರ್.‌ಟಿ.ನಗರ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ತಮ್ಮ ಪುತ್ರನನ್ನು ಪೊಲೀಸರ ಮುಂದೆ ಹಾಜರುಪಡಿಸಿ ಎಂದು ಸೂಚನೆ ನೀಡಿದ್ದಾರೆ.

ಮೈತ್ರಿಯಾಗೌಡ ಅವರ ವಿರುದ್ಧದ ದೂರಿನ ಹಿನ್ನಲೆಯಲ್ಲಿ ಕಾರ್ತಿಕ್ ಗೌಡ ಬಂಧನಕ್ಕೆ ವಾರೆಂಟ್ ಇದ್ದರೂ ವಿಚಾರಣೆಗೆ ಕಾರ್ತಿಕ್ ಗೌಡ ಹಾಜರಾಗದ ಹಿನ್ನಲೆಯಲ್ಲಿ ಪೊಲೀಸರು ನೋಟಿಸ್ ನೀಡಿದ್ದಾರೆ. ಸೆ.2ರಂದು ಈ ನೋಟಿಸ್ ಜಾರಿಗೊಳಿಸಲಾಗಿದ್ದು, ವಿಚಾರಣೆಗೆ ಸಹಕಾರ ನೀಡುವಂತೆ ಸೂಚಿಸಲಾಗಿದೆ.

Sadananda Gowda

ಇತ್ತ ಮೈತ್ರಿಯಾ ಗೌಡ ಮತ್ತು ಕಾರ್ತಿಕ್ ಗೌಡ ಅವರ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಸೋಮವಾರ ಅಂತಿಮ ತೀರ್ಪು ಹೊರಬೀಳಲಿದೆ. ಕಾರ್ತಿಕ್ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದ್ದರೂ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ. [ಮೈತ್ರಿಯಾ ಬಗ್ಗೆ ಡಾಟಿ ಸದಾನಂದ ಗೌಡರು ಹೇಳಿದ್ದೇನು?]

ಅಪರಾಧ ಪ್ರಕ್ರಿಯೆ ಸಂಹಿತೆ ಕಲಂ 41(ಎ)ರ ಅಡಿಯಲ್ಲಿ ಪ್ರಕರಣದ ತನಿಖಾಧಿಕಾರಿ ಓಂಕಾರಯ್ಯ ಅವರು ಸದಾನಂದಗೌಡರ ಇ-ಮೇಲ್ ವಿಳಾಸಕ್ಕೆ ನೋಟಿಸ್ ಕಳುಹಿಸಿದ್ದಾರೆ. ಅದಕ್ಕೂ ಮುಂಚೆ ಸದಾನಂದಗೌಡರ ಬೆಂಗಳೂರಿನ ನಿವಾಸಕ್ಕೆ ನೋಟಿಸನ್ನು ಅಂಟಿಸಲಾಗಿತ್ತು.

ವಿಚಾರಣೆಗೆ ಮತ್ತು ತನಿಖೆಗೆ ಸಹಾಯ ಮಾಡುವಂತೆ ಕೋರಿ ಪೊಲೀಸರು ಕಳುಹಿಸಿದ್ದ ಇ-ಮೇಲ್‌ಗೆ ಈ ವರೆಗೂ ಸದಾನಂದ ಗೌಡರಿಂದ ಅವರಿಂದ ಪ್ರತ್ಯುತ್ತರ ಬಂದಿಲ್ಲ ಎಂದು ತಿಳಿದುಬಂದಿದೆ. ಕಾರ್ತಿಕ್ ಗೌಡ ತಮ್ಮನ್ನು ವಿವಾಹವಾಗಿದ್ದು, ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ನಟಿ ಮೈತ್ರಿಯಾ ಗೌಡ ಅವರು ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. [ಸೆ.8ಕ್ಕೆ ಕಾರ್ತಿಕ್ ಗೌಡ ಜಾಮೀನು ಅರ್ಜಿ ತೀರ್ಪು]

ಪ್ರಕರಣ ಸಂಬಂಧ ಡಿವಿಎಸ್ ಪುತ್ರ ಕಾರ್ತಿಕ್ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ವಂಚನೆ ಪ್ರಕರಣಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ ಅವರಿಗೆ ನೋಟಿಸ್ ಸಹ ನೀಡಿದ್ದರು. ಆದರೆ, ಕಾರ್ತಿಕ್ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಅವರ ವಿರುದ್ಧ ಬಂಧನದ ವಾರೆಂಟ್ ಜಾರಿಗೊಳಿಸಲಾಗಿದೆ.

English summary
Bangalore R.T.Nagar police had served a notice on Union minister for Railways, DV Sadananda Gowda, asking him to produce his son Karthik Gowda in the case where the latter was accused of rape and abduction by a little-known Kannada actor Mythriya Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X