ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ನಾಲ್ಕು ಸಮಾವೇಶದ ದಿನಾಂಕ ಬದಲು

|
Google Oneindia Kannada News

ಬೆಂಗಳೂರು,ಜ.28 : ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ನಾಲ್ಕು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಸದ್ಯ, ಸಮಾವೇಶಗಳ ದಿನಾಂಕಗಳು ಬದಲಾವಣೆಯಾಗಿದ್ದು, ಫೆ.18 ಮತ್ತು 28ಕ್ಕೆ ಮೋದಿ ನಾಲ್ಕು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಸೋಮವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಘುನಾಥ್ ಮಲ್ಕಾಪುರೆ, ಹಿಂದೆ ಫೆ.12 ಮತ್ತು 18ರಂದು ಮೋದಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿತ್ತು. ಸದ್ಯ, ಅವುಗಳ ದಿನಾಂಕಗಳು ಬದಲಾವಣೆಯಾಗಿವೆ. ಮೋದಿ ಅವರ ವೇಳಾಪಟ್ಟಿ ಹಿನ್ನಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದರು.

Narendra Modi

ಹಿಂದಿನ ವೇಳಾಟಪಟ್ಟಿಯಂತೆ ನರೇಂದ್ರ ಮೋದಿ ದಾವಣಗೆರೆ, ಮಂಗಳೂರು, ಗುಲ್ಬರ್ಗ ಮತ್ತು ಹುಬ್ಬಳ್ಳಿಯಲ್ಲಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೆ, ಅವುಗಳ ದಿನಾಂಕಗಳಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ ಎಂದು ಮಲ್ಕಾಪುರೆ ಹೇಳಿದರು. [ಅಹಿಂದ ಮತ ಸೆಳೆಯಲು ಬಿಜೆಪಿ ಸಮಾವೇಶ]

ನೂತನ ವೇಳಾಪಟ್ಟಿಯಂತೆ ಫೆ.18ರಂದು ದಾವಣಗೆರೆ ಮತ್ತು ಮಂಗಳೂರಿನಲ್ಲಿ ನರೇಂದ್ರ ಮೋದಿ ಎರಡು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಫೆ.28ರಂದು ಗುಲ್ಬರ್ಗಾ ಮತ್ತು ಹುಬ್ಬಳ್ಳಿಯಲ್ಲಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಫೆ.2ನೇ ವಾರ ಮೊದಲ ಪಟ್ಟಿ : ಜ.31ರಂದು ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದ್ದು ಫೆ.2ನೇವಾರದಲ್ಲಿ ಲೋಕಸಭೆ ಚುನಾವಣೆಗೆ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ರಘುನಾಥ್ ಮಲ್ಕಾಪುರೆ ತಿಳಿಸಿದರು. ಮೊದಲ ಪಟ್ಟಿಯಲ್ಲಿ 10-13 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

English summary
The Bharatiya Janata Party prime ministerial candidate Narendra Modi will address 4 rallys in Karnataka on February. Modi will address rallies in Davangere and Mangalore on February 18 and Gulbarga and Hubli on February 28 said party state general secretary Raghunath Malkapure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X