ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹಣ ಬಲದಿಂದ ಮೋದಿ ಸರ್ಕಾರ ರಚನೆ ಅಸಾಧ್ಯ'

By Mahesh
|
Google Oneindia Kannada News

ಕುಮಟಾ, ಏ.21: ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಎನ್ ಡಿಎ ಅಧಿಕಾರ ಪಡೆಯುವ ಅವಕಾಶ ಸಿಕ್ಕರೂ ನರೇಂದ್ರ ಮೋದಿ ಅವರಿಂದ ಸರ್ಕಾರ ರಚನೆ ಅಸಾಧ್ಯ. ತೃತೀಯರಂಗದ ನೆರವಿಲ್ಲದೆ ಕೇಂದ್ರದಲ್ಲಿ ಸರ್ಕಾರ ರಚನೆ ಆಗುವುದಿಲ್ಲ. ಪ್ರಾದೇಶಿಕ ಪಕ್ಷಗಳ ಶಕ್ತಿ ಏನೆಂಬುದು ಈ ಬಾರಿ ತಿಳಿಯಲಿದೆ ಎಂದಿದ್ದಾರೆ.

ನರೇಂದ್ರ ಮೋದಿ ಅವರು ಕಾರ್ಪೊರೇಟ್ ಜಗತ್ತಿನ ಹಣ ಬಲದಿಂದ ಸರ್ಕಾರ ನಡೆಸುವ ಹುಮ್ಮಸ್ಸಿನಲ್ಲಿದ್ದಾರೆ. ಕೇವಲ ಹಣ ಬಲದಿಂದ ರಾಜ್ಯ, ದೇಶ ಮುನ್ನಡೆಸಲು ಆಗದು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Narendra Modi can't form government

ಮಾಜಿ ಶಾಸಕ ದಿನಕರ ಶೆಟ್ಟಿ ಅವರ ಮಗಳ ಮದುವೆ ಸಮಾರಂಭಕ್ಕಾಗಿ ನಗರಕ್ಕೆ ಆಗಮಿಸಿರುವ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರಿಗೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಸುನಿಲ್ ಹೆಗಡೆ, ಬಿ.ಆರ್ ನಾಯ್ಕ, ಗಜಾನನ ನಾಯ್ಕ, ಕಿರಣ್ ಕಾಮತ್ ಮುಂತಾದವರು ಸಾಥ್ ನೀಡಿದ್ದಾರೆ. ಕುಮಾರಸ್ವಾಮಿ ಅವರನ್ನು ಹುಡುಕಿಕೊಂಡು ಮದುವೆ ಮನೆಗೂ ಕಾಲಿಟ್ಟ ಪತ್ರಕರ್ತರಿಗೆ ನಿರಾಶೆ ಮಾಡದ ಕುಮಾರಸ್ವಾಮಿ ಅವರು ದೇಶದ ಸರ್ಕಾರ ರಚನೆ ಭವಿಷ್ಯ ನುಡಿದರು.

ಕುಮಾರಸ್ವಾಮಿ ಅವರ ಮಾತಿನ ತಿರುಳು 'ಮೋದಿ ಸರ್ಕಾರ ರಚಿಸಲು ಸಾಧ್ಯವಿಲ್ಲ' ಎಂಬುದಾಗಿತ್ತು. ಆದರೆ, ತೃತೀಯರಂಗ, ಕಾಂಗ್ರೆಸ್ ಬೆಂಬಲ, ಹೀಗೆ ಗೊಂದಲಮಯವಾಗಿ ಮಾತು ಕತೆ ಮಾಡಿದರು. ಲೋಕಸಭೆ ಚುನಾವಣೆ ಇನ್ನೂ ನಾಲ್ಕೈದು ಹಂತಗಳಲ್ಲಿ ನಡೆಯಬೇಕಿದೆ. ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳು ಸರ್ಕಾರ ರಚನೆಗೆ ಸಹಕಾರ ನೀಡಲು ಮುಂದಾದರೆ ಅವಶ್ಯವಾಗಿ ನೆರವು ಪಡೆಯುವುದಾಗಿ ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ಕೂಡಾ ಹೇಳಿದ್ದಾರೆ.

ಚುನಾವಣೆ ಫಲಿತಾಂಶ ನಂತರ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಹುನ್ನಾರ ನಡೆದಿದೆ. ಈ ಚುನಾವಣೆಯಲ್ಲಿ ಜೆಡಿಎಸ್ 7 ಸ್ಥಾನ ಗೆಲ್ಲಲಿದೆ. 2 ಸ್ಥಾನಗಳು ಫೋಟೋ ಫಿನಿಶ್ ಆಗಲಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶಿವಾನಂದ ನಾಯ್ಕ್ ಪ್ರಕರಣದ ನಂತರ ಆರ್ ವಿ ದೇಶಪಾಂಡೆ ಅವರು ತಾವೇ ತೋಡಿಕೊಂಡ ಹೊಂಡಕ್ಕೆ ಬಿದ್ದು ತಮ್ಮ ಮಗನಿಗೆ ಮುಳುವಾಗಿದ್ದಾರೆ ಎಂದರು.

English summary
BJP priminister candidate Narendra Modi can't form government without support from regional parties. Third front will be the kingmaker. Modi is banking on financial support from corporate world. Money alone can't help in ruling the state or country said HD Kumaraswamy in Kumta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X