ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರ ಬಗ್ಗೆ ನಾನೇನೂ ಹೇಳಿಲ್ಲ: ಪ್ರೊ. ಕಲಬುರ್ಗಿ ಆಣೆ

By Srinath
|
Google Oneindia Kannada News

ಬೆಂಗಳೂರು, ಜೂನ್ 11: ನಾಡಿನ ಹಿರಿಯ ಸಂಶೋಧಕರಾದ ಪ್ರೊಫೆಸರ್ ಮಲ್ಲೇಶಪ್ಪ ಎಂ ಕಲುಬುರ್ಗಿ ಅವರು ಹಿಂದೂ ದೇವತೆಗಳನ್ನು ತಾನು ಅವಹೇಳನ ಮಾಡಿಲ್ಲ. ಹಿಂದೂಗಳ ಭಾವನೆಗಳನ್ನು ಕೆರಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೂರು ದಿನಗಳ ಹಿಂದೆ ಬೆಂಗಳೂರಿನ ವಿಜ್ಞಾನ ಭವನದಲ್ಲಿ 'ಮೌಢ್ಯಮುಕ್ತ ಸಮಾಜದತ್ತ' ಎಂಬ ವಿಚಾರಗೋಷ್ಠಿಯಲ್ಲಿ ತಾವು ಸದುದ್ದೇಶದಿಂದಲೇ ಮಾತನಾಡಿದ್ದಾಗಿಯೂ ಹಂಪಿ ಕನ್ನಡ ವಿಶ್ವವಿದ್ಯಾಯದ ವಿಶ್ರಾಂತ ಕುಲಪತಿ ಪ್ರೊಫೆಸರ್ ಕಲುಬುರ್ಗಿ ಅವರು ವಿವಾದಾತ್ಮಕ ಹೇಳಿಕೆ ಬಗ್ಗೆ ಸಮಜಾಯಿಷಿ ನೀಡಿದ್ದಾರೆ.

mm-kalburgi-retracts-his-statement-on-urinating-on-hindu-gods
ಜ್ಞಾನಪೀಠ ಪ್ರಶಸ್ತಿ ವಿಜೇತ ಯುಆರ್ ಅನಂತಮೂರ್ತಿ ಅವರು 80ರ ದಶಕದಲ್ಲಿ ಬರೆದಿರುವ ಪುಸ್ತಕದಲ್ಲಿ ಇದ್ದ ವಿಷಯವನ್ನು ಯಥಾವತ್ತಾಗಿ ಹೇಳಿದ್ದೇನೆಯೇ ಹೊರತು ತಾನು ಸ್ವಂತಿಕೆಯಿಂದ ಬೇರೆ ಏನನ್ನೂ ಅದಕ್ಕೆ ಸೇರಿಸಿ ಹೇಳಿಲ್ಲ ಎಂದು ಡಾ. ಕಲುಬುರ್ಗಿ ತಮ್ಮ ಮಾತಿನ ವರಸೆಯನ್ನು ಬದಲಿಸಿದ್ದಾರೆ.

ಇದರ ಹೊರತಾಗಿಯೂ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದರೆ, ಯಾರಿಗಾದರೂ ನೋವುಂಟಾಗಿದ್ದರೆ ಬೇಷರತ್ ಕ್ಷಮೆಯಾಚಿಸುವೆ ಎಂದು ಪ್ರೊ. ಮಲ್ಲೇಶಪ್ಪ ಕಲುಬುರ್ಗಿ ಅವರು ಕೋರಿದ್ದಾರೆ. (ಬೆಂಗಳೂರು ದೇವರ ಬಗ್ಗೆ ಕಲಬುರ್ಗಿ ಏನೆಂದು ಅಪ್ಪಣೆ ಕೊಡ್ಸಿದ್ದಾರೆ ಕೇಳಿ)

ಅನಾಥ ಮೂರ್ತಿ ಮೇಲೆ ಮೂತ್ರ ಮಾಡಿದ್ದ ಅನಂತಮೂರ್ತಿ
'ಒಮ್ಮೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯುಆರ್ ಅನಂತಮೂರ್ತಿ ಅವರು ಹಳ್ಳಿಗೆ ತೆರಳಿದ್ದ ಸಂದರ್ಭದಲ್ಲಿ ಸ್ಥಳೀಯರೊಬ್ಬರು 'ಆ ಕಲ್ಲಿನ ದೇವತೆ ಹತ್ತಿರ ತೆರಳಬೇಡಿ, ಅದನ್ನ ಕೆರಳಿಸಿದರೆ ದೆವ್ವದ ಸ್ವರೂಪ ಪಡೆದುಕೊಂಡು ನಿಮ್ಮನ್ನು ಕಾಡುತ್ತದೆ' ಎಂದು ಹೇಳಿದ್ದರಂತೆ. ಅದಕ್ಕೆ ಪ್ರತಿಕ್ರಿಯೆಯಾಗಿ ಅನಂತಮೂರ್ತಿ ಅವರು ಅಂದೇ ರಾತ್ರಿ ಆ ಜಾಗಕ್ಕೆ ತೆರಳಿ ಕಲ್ಲಿನ ಮೇಲೆ ಮೂತ್ರ ಮಾಡಿದರಂತೆ. ಇಲ್ಲಿಯವರೆಗೂ ಆ ಕಲ್ಲಿನಿಂದ ಅವರಿಗೆ ಯಾವ ತೊಂದರೆಯೂ ಆಗಿಲ್ಲವಂತೆ. ಹಾಗಂತ ಅವರೇ ಒಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ' ಎಂದು ಡಾ. ಕಲುಬುರ್ಗಿ ಹೇಳಿದ್ದರು. (ಎಂಎಂ ಕಲಬುರ್ಗಿ ಅವರಿಗೆ ತಲೆ ಕೆಟ್ಟಿದೆ : ಮುತಾಲಿಕ್)

ಮೂರ್ತಿಗಳ ಪುಸ್ತಕದಲ್ಲಿನ ಅಂಶವನ್ನೇ ಆಧಾರವಾಗಿಸಿಕೊಂಡು ತಮ್ಮ ಮಾತನ್ನು ಮುಂದುವರಿಸಿದ್ದ 'ದೇವತೆಗೆ ಶಕ್ತಿಯೇ ಇಲ್ಲದ ಕಾರಣ ಮೂತ್ರ ಮಾಡಿದರೂ ಏನೂ ಆಗುವುದಿಲ್ಲ' ಎಂದು ಡಾ. ಕಲುಬುರ್ಗಿ ತಮ್ಮ ಅಭಿಪ್ರಾಯ ಮಂಡಿಸಿದ್ದರು.

English summary
Former Vice Chancellor of Hampi University, Noted writer and academic Dr. M.M. Kalburgi retracts his statement on urinating on hindu gods. Kalburgi had asked to urinate on hindu gods as the stone made sculptures are lifeless and the gods cannot protect themselves while speaking at a seminar in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X