ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಅಂಬರೀಶ್ ಮೂರು ಸೈಟ್ ಪಡೆದಿದ್ದಾರಂತೆ

|
Google Oneindia Kannada News

ಮಂಡ್ಯ, ಜೂ. 18 : ಮೂಡಾದಿಂದ ನಿವೇಶನ ಪಡೆದು ಅದನ್ನು ಮಾರಾಟ ಮಾಡಿದ ಆರೋಪ ಎದುರಿಸುತ್ತಿರುವ ವಸತಿ ಸಚಿವ ಅಂಬರೀಶ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಅಂಬರೀಷ್‌ ಅವರು ಬೆಂಗಳೂರು ಹಾಗೂ ಮೈಸೂರಿನಲ್ಲಿಯೂ ಅಭಿವೃದ್ಧಿ ಪ್ರಾಧಿಕಾರಗಳಿಂದ ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ರವೀಂದ್ರ ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರವೀಂದ್ರ ಅವರು, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ನಿವೇಶನವನ್ನು ಪಡೆದಿರುವ ಸಚಿವ ಅಂಬರೀಶ್ ಅವರು, ಮೈಸೂರು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಗಳ ಮೂಲಕವೂ ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ambareesh

1986ರಲ್ಲಿ ಮೈಸೂರಿನ ಕುವೆಂಪುನಗರದಲ್ಲಿ 50*80 ಅಡಿ ಅಳತೆಯ ನಿವೇಶನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಚಿವರಿಗೆ ಮಂಜೂರಾಗಿದೆ. ಇದನ್ನು 22 ವರ್ಷಗಳ ನಂತರ 2008ರಲ್ಲಿ ಕ್ರಯಪತ್ರವನ್ನು ಮಾಡಿಸಿಕೊಂಡಿದ್ದಾರೆ. ಅಷ್ಟು ವರ್ಷ ಕಳೆದ ನಂತರ ಕ್ರಯಪತ್ರ ಮಾಡಿಸಿಕೊಂಡಿದ್ದು ಹೇಗೆ ಎಂದು ರವೀಂದ್ರ ಅವರು ಪ್ರಶ್ನಿಸಿದ್ದಾರೆ? [ನಿಂದಕರಿಗೆ ತಕ್ಕ ಉತ್ತರ ಕೊಟ್ಟ ಮಂಡ್ಯದ ರಮ್ಯಾ]

1987ರಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಜೆ.ಪಿ. ನಗರದಲ್ಲಿ 120*80 ಅಡಿ ಅಳತೆ ನಿವೇಶನವನ್ನು ಪಡೆದುಕೊಂಡಿದ್ದಾರೆ. 2002ರಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ ನಿವೇಶನ ಮಂಜೂರಾಗಿದೆ. ಅದನ್ನು ಎರಡು ಭಾಗವಾಗಿಸಿ ಮಾರಾಟ ಮಾಡಿದ್ದಾರೆ ಎಂದು ರವೀಂದ್ರ ಆರೋಪಿಸಿದ್ದಾರೆ.

ಒಂದು ಬಾರಿ ಪ್ರಾಧಿಕಾರದಿಂದ ನಿವೇಶನ ಪಡೆದವರು, ಮತ್ತೊಂದು ಸಲ ರಾಜ್ಯದ ಯಾವುದೇ ಪ್ರಾಧಿಕಾರದಿಂದ ನಿವೇಶನ ಪಡೆಯಬಾರದು ಎಂಬ ನಿಯಮವಿದೆ. ಆದರೆ, ಸಚಿವ ಅಂಬರೀಶ್ ಅವರು ಹೇಗೆ? ಮೂರು ಕಡೆಗಳಲ್ಲಿ ನಿವೇಶನ ಪಡೆದಿದ್ದಾರೆ ಎಂದು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಅಂಬರೀಶ್ ಏನು ಹೇಳುತ್ತಾರೆ : ರವೀಂದ್ರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಸತಿ ಸಚಿವ ಅಂಬರೀಶ್ ಅವರು, "ನಾನು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. ಯಾವುದೇ ನಿವೇಶನ ಪಡೆಯಲು ನಾನು ಅರ್ಜಿ ಸಲ್ಲಿಸಲ್ಲಿಸಿರಲಿಲ್ಲ." ಎಂದು ಹೇಳಿದ್ದಾರೆ.

ಸರ್ಕಾರವೇ ನನಗೆ ನಿವೇಶನಗಳನ್ನು ನೀಡಿದೆ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಿದ್ದಾಗ ನನಗೆ ಮೈಸೂರು ಮತ್ತು ಬೆಂಗಳೂರಿನ ನಿವೇಶನಗಳನ್ನು ನೀಡಲಾಗಿತ್ತು. ನಾನು ಯಾವುದೇ ನಿಯಮಗಳನ್ನು ಉಲ್ಲಂಘಿಸಿ ನಿವೇಶನಗಳನ್ನು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

English summary
Mandya based RTI activist Ravindra alleged that, actor-turned-politician M.H.Ambareesh had flouted rules with regard to three sites he had acquired in Mandya, Mysore and Bangalore. But Ambareesh has refuted the charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X