ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: ಐಪಿಎಸ್‌ ಅಧಿಕಾರಿಗಳ ವರ್ಗಾವರ್ಗಿ‌

By Ashwath
|
Google Oneindia Kannada News

sonia narang
ಬೆಂಗಳೂರು,ಜು.1: ನಗರದಲ್ಲಿ ಸರಣಿ ಅತ್ಯಾಚಾರ ಪ್ರಕರಣಗಳ ನಂತರ ಬೆಂಗಳೂರು ನಗರ ಪೊಲೀಸ್‌ ವಿಭಾಗಕ್ಕೆ ಸರ್ಕಾರ ಮೇಜರ್‌ ಸರ್ಜರಿ ಮಾಡಿದೆ. ಕೆಲದಿನಗಳ ಹಿಂದೆ ಆಯುಕ್ತರನ್ನು ವರ್ಗಾವಣೆ ಮಡಿದ್ದ ಸರ್ಕಾರ ಈಗ ನಗರದ ಪೂರ್ವ ವಿಭಾಗದ ಕಾನೂನು ಸುವ್ಯವಸ್ಥೆ ಜಂಟಿ ಪೊಲೀಸ್‌ ಕಮಿಷನರ್‌, ಆರು ಡಿ.ಸಿ.ಪಿ.ಗಳು ಸೇರಿದಂತೆ 29 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.[ನಗರ ಪೊಲೀಸ್ ಆಯುಕ್ತ ರಾಘವೇಂದ್ರ ವರ್ಗ]

ಡಿಸಿಪಿಗಳಾಗಿದ್ದ ಟಿ.ಡಿ.ಪವಾರ್‌, ಬಿ.ಆರ್‌. ರವಿಕಾಂತೇಗೌಡ ಮತ್ತು ಎಂ.ಮುತ್ತುರಾಯ ಅವರನ್ನು ಬೇರೆ ಜಿಲ್ಲೆಗಳಿಗೆ ಹಾಗೂ ಇತರ ಮೂವರು ಡಿ.ಸಿ.ಪಿಗಳನ್ನು ನಗರದ ಬೇರೆ ವಿಭಾಗಗಳಿಗೆ ವರ್ಗ ಮಾಡಲಾಗಿದೆ. ರಾಜಕಾರಣಿಗಳಿಗೆ,ಬಿಬಿಎಂಪಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಮುಖ್ಯಸ್ಥ ಆರ್‌.ಪಿ. ಶರ್ಮಾ ಅವರನ್ನೂ ವರ್ಗಾಯಿಸಲಾಗಿದೆ.


ವರ್ಗಾ‌ವಣೆಯಾದ ಐಪಿಎಸ್‌‌ ಅಧಿಕಾರಿಗಳು:
ಸೋನಿಯಾ ನಾರಂಗ್‌- ಡಿಸಿಪಿ(ಆಡಳಿತ),
ಪ್ರವೀಣ್‌ ಸೂದ್‌‌‌- ಪ್ರಧಾನ ಕಾರ್ಯದರ್ಶಿ‌,ಗೃಹ ಇಲಾಖೆ
ಆರ್‌‌‌ಪಿ ಶರ್ಮ‌- ಎಡಿಜಿಪಿ ರೈಲ್ವೆ
ಟಿ. ಸುನಿಲ್‌‌ ಕುಮಾರ್‌- ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಜೊತೆ ಬಿಎಂಟಿಎಫ್‌ನ ಹೆಚ್ಚುವರಿ ಹೊಣೆ


ವರ್ಗಾವಣೆಯಾದ ಐಜಿಪಿಗಳು
ಸುನಿಲ್‌ ಅಗರ್‌ವಾಲ್‌‌- ಐಜಿಪಿ( ಆಡಳಿತ -ಕೇಂದ್ರ ಕಚೇರಿ)
ಸಿ.ಎಚ್‌ ಪ್ರತಾಪ್‌ ರೆಡ್ಡಿ- ಐಜಿಪಿ,ಆಂತರಿಕ ಭದ್ರತಾ ಕಾರ್ಯಾಚರಣೆ ವಿಭಾಗ(ಎಟಿಸಿ)
ಕೆ.ರಾಮಚಂದ್ರ ರಾವ್‌- ರಸ್ತೆ, ಸಂಚಾರ ಸುರಕ್ಷತಾ ಆಯುಕ್ತರು,ಬೆಂಗಳೂರು
ಅರುಣ್‌ ಚಕ್ರವರ್ತಿ‌ ಜೆ.- ಐಜಿಪಿ ಪ್ರಧಾನ ಕಚೇರಿ-1 ಬೆಂಗಳೂರು
ಸೀಮಂತ್‌ ಕುಮಾರ್‍ ಸಿಂಗ್‌‌- ವ್ಯವಸ್ಥಾಪಕ ನಿರ್ದೆಶಕ, ರಾಜ್ಯ ಪೊಲೀಸ್‌‌ ಗೃಹ ನಿರ್ಮಾ‌ಣ ನಿಗಮ, ಬೆಂಗಳೂರು
ಕೆ.ವಿ.ಶರತ್‌‌ ಚಂದ್ರ- ಡಿಐಜಿ(ತರಬೇತಿ),ಬೆಂಗಳೂರು
ಬಿ.ಶಿವಕುಮಾರ್‌‌‌- ಡಿಐಜಿ ಮತ್ತು ಪ್ರಾಂಶುಪಾಲರು,ಪೊಲೀಸ್‌‌ ತರಬೇತಿ ಕಾಲೇಜು, ಗುಲ್ಬರ್ಗ
ಎಚ್‌.ಎಸ್‌‌.ವೆಂಕಟೇಶ್‌‌- ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು


ಜಿಲ್ಲಾ ಎಸ್‌ಪಿಗಳು
ಡಿ.ಪ್ರಕಾಶ್‌‌- ಎಸ್‌ಪಿ, ಚಿತ್ರದುರ್ಗ‌
ಡಾ.ಟಿ.ಡಿಪವಾರ್‌‌ - ಎಸ್‌ಪಿ, ಕೊಪ್ಪಳ
ಬಿ.ಆರ್‌‌.ರವಿಕಾಂತೇಗೌಡ -ಎಸ್‌ಪಿ,ವಿಜಾಪುರ
ಡಾ.ಎಂ.ಬಿ. ಬೋರಲಿಂಗಯ್ಯ- ಎಸ್‌ಪಿ, ದಾವಣಗೆರೆ
ಪಿ.ರಾಜೇಂದ್ರ ಪ್ರಸಾದ್‌‌- ಎಸ್‌ಪಿ, ಉಡುಪಿ
ಎಚ್‌.ಆರ್‌‌‌‌ ಭಗವಾನ್‌ ದಾಸ್‌‌- ಎಸ್‌ಪಿ, ಕೆಜಿಎಫ್‌‌‌
ವರ್ತಿ‌ಕಾ ಕಟಿಯಾರ್‌- ಎಸ್‌ಪಿ, ಧಾರವಾಡ
ಎಸ್‌‌.ರಂಗಸ್ವಾಮಿ ನಾಯ್ಕ- ಎಸ್‌ಪಿ, ಚಾಮರಾಜನಗರ
ಎಂ.ಮುತ್ತುರಾಯ- ಎಸ್‌ಪಿ, ಯಾದಗಿರಿ


ಇತರ ಅಧಿಕಾರಿಗಳು
ಡಾ. ವೈ.ಎಸ್‌‌‌.ರವಿಕುಮಾರ್‌‌- ಎಸ್‌ಪಿ, ಗುಪ್ತಚರ, ಬೆಂಗಳೂರು
ಡಾ.ರಾಮ್‌ ನಿವಾಸ್‌ ಸೆಪಟ್‌- ಕಮಾಂಡೆಟ್‌, ಇನೇ ಬೆಟಾಲಿಯನ್‌ ಕೆಎಸ್‌ಆರ್‌‌ಪಿ ಬೆಂಗಳೂರು
ಸಿ.ವಂಶಿ ಕೃಷ್ಣ - ಸಹಾಯಕ ಐಜಿಪಿ ಸಾಮಾನ್ಯ ಪೊಲೀಸ್‌, ಪ್ರಧಾನ ಕಚೇರಿ, ಬೆಂಗಳೂರು


ಐಎಎಸ್‌ ಅಧಿಕಾರಿಗಳು
ಜಿ.ಲತಾ ಕೃಷ್ಣರಾವ್‌- ಅಭಿವೃದ್ಧಿ ಆಯುಕ್ತರು.
ಪಿ.ರವಿ ಕುಮಾರ್‌ - ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೊತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೆಚ್ಚುವರಿ ಜವಾಬ್ದಾರಿ
ಪಿ.ಮಣಿವಣ್ಣನ್‌- ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.
ಡಾ.ರಾಮೇಗೌಡ- ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು.
ಎಸ್‌.ಜಿಯಾವುಲ್ಲಾ- ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ.

English summary
The Karnataka government on Thursday effected mass transfer of IPS and IAS officials.The transferred officials and their new postings are: Praveen Sood, Additional Director-General of Police (ADGP) and Principal Secretary, Home Department (FCAS)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X