ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ಮೂಲಕ ಮದುವೆ ನೋಂದಣಿ ಮಾಡಬಹುದು

|
Google Oneindia Kannada News

ಬೆಂಗಳೂರು, ಜೂನ್ 2 : ವಿವಾಹ ನೋಂದಣಿ ಮಾಡಿಸಲು ಗಂಟೆಗಟ್ಟಲೆ ಕಾಯುವ ಶ್ರಮಕ್ಕೆ ಸದ್ಯದಲ್ಲೇ ತಡೆ ಬೀಳಲಿದೆ. ಆನ್ ಲೈನ್ ಮೂಲಕ ವಿವಾಹ ನೋಂದಣಿ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ನೀವು ಆನ್ ಲೈನ್ ಮೂಲಕ ವಿವರಗಳನ್ನು ಭರ್ತಿ ಮಾಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರಮಾಣಪತ್ರ ಪಡೆಯಬಹುದಾಗಿದೆ.

ಕೇಂದ್ರದ ಇ ಆಡಳಿತ ಇಲಾಖೆ ಕರ್ನಾಟಕದಲ್ಲಿ ವಿವಾಹ ನೋಂದಣಿಯನ್ನು ಆನ್ ಲೈನ್ ಮೂಲಕ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಆನ್ ಲೈನ್ ಮೂಲಕ ವಿವರಗಳನ್ನು ಭರ್ತಿ ಮಾಡಿದವರು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರಮಾಣ ಪ್ರತ ಪಡೆಯಲು ಆಲ್ ಲೈನ್ ಮೂಲಕವೇ ಸಮಯ ನಿಗದಿಗೊಳಿಸಬಹುದಾಗಿದೆ.

marriage

ಸದ್ಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿ ಅಲ್ಲಿ ವಿವರಗಳನ್ನು ಭರ್ತಿ ಮಾಡಿ ವಿವಾಹ ನೋಂದಣಿ ಮಾಡಿಸಬೇಕಾಗಿದೆ. ಇದಕ್ಕೆ ಏನಿಲ್ಲವೆಂದರೂ ಸುಮಾರು ಒಂದು ಗಂಟೆಗಳ ಸಮಯಾವಕಾಶ ಬೇಕಾಗುತ್ತದೆ. ಅದರಲ್ಲೂ ಮಧ್ಯವರ್ತಿಗಳ ಹಾವಳಿಯಿಂದಾಗಿ ಅವರಿಗೆ ಹಣ ಪಾವತಿ ಮಾಡಬೇಕಾಗುತ್ತದೆ. [ಭಾಗ್ಯಲಕ್ಷ್ಮೀ ಯೋಜನೆಗೆ ವಿವಾಹ ನೋಂದಣಿ ಕಡ್ಡಾಯ]

ಕೇಂದ್ರ ಸರ್ಕಾರದ ಇ ಆಡಳಿತ ಇಲಾಖೆ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಒಪ್ಪಿಗೆ ನೀಡಿರುವುದರಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಈ ಸೌಲಭ್ಯವನ್ನು ಶೀಘ್ರದಲ್ಲೇ ಆರಂಭಿಸುವ ಸಾಧ್ಯತೆ ಇದೆ. ಇದು ಜಾರಿಗೆ ಬಂದರೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಲೆದಾಡುವ ಶ್ರಮಕ್ಕೆ ತಡೆ ಬೀಳಲಿದೆ.

ನೋಂದಣಿ ಹೇಗೆ : ಆನ್ ಲೈನ್ ಮೂಲಕ ವಿವಾಹ ನೋಂದಣಿ ಮಾಡಿಸುವವರು ಅಗತ್ಯವಿವರಗಳನ್ನು ಭರ್ತಿ ಮಾಡಿ, ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ನೀವು ವಿವರಗಳನ್ನು ಭರ್ತಿ ಮಾಡುವಾಗ, ಆನ್ ಲೈನ್ ಮೂಲಕವೇ ಪ್ರಮಾಣ ಪತ್ರ ಪಡೆಯಲು ಸಮಯಾವಕಾಶ ಕಾಯ್ದಿರಿಸಬಹುದಾಗಿದೆ.

ಅಂದಹಾಗೆ ಸರ್ಕಾರ ಹೆಣ್ಣುಮಕ್ಕಳಿಗೆ ನೀಡುವ ಭಾಗ್ಯಲಕ್ಷ್ಮೀ ಬಾಂಡ್ ಪಡೆಯಲು ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನುಮುಂದೆ 2014ರ ನಂತರ ಜನಿಸುವ ಹೆಣ್ಣು ಮಕ್ಕಳಿಗೆ ಬಾಂಡ್ ನೀಡಬೇಕಾದರೆ, ಪೋಷಕರು ಕಡ್ಡಾಯವಾಗಿ ತಮ್ಮ ವಿವಾಹವನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿರಬೇಕು.

English summary
A marriage registration at the Sub-Registrar’s office can take about an hour or so and also set you back by a few thousand rupees if a middleman is involved. But soon you will be able to upload data online and visit the Sub-Registrar’s office only to receive the certificate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X