ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ಗ್ರಾಮಗಳಲ್ಲಿ ತಟ್ಟಿತು ಬಹಿಷ್ಕಾರದ ಬಿಸಿ

|
Google Oneindia Kannada News

ಬೆಂಗಳೂರು, ಏ. 18 : ಹದಿನಾರನೇ ಲೋಕಸಭೆ ಗುರುವಾರ ನಡೆದ ಚುಣಾವಣೆಯಲ್ಲಿ ಶೇ. 65 ಮತದಾನವಾಗಿದೆ. ಕಳೆದ ಬಾರಿಗಿಂತ ಶೇ.10 ಅಧಿಕ ಮತದಾನವಾಗಿದ್ದರೂ, ಅಲ್ಲಲ್ಲಿ ಮತದಾನ ಬಹಿಷ್ಕಾರದ ಪ್ರಕರಣಗಳು ನಡೆದಿವೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಮತದಾನ ಬಹಿಷ್ಕರಿಸಿದರು. ಕೆಲವು ಗ್ರಾಮಗಳಲ್ಲಿ ಜನರ ಮನವೊಲಿಸುವ ರಾಜಕೀಯ ಮುಖಂಡರ ಪ್ರಯತ್ನಗಳು ಯಶಸ್ವಿಯಾಗಲಿಲ್ಲ.[ಎಲ್ಲಿ ಎಷ್ಟು ಮತದಾನ ನೋಡಿ]

Election

ಪ್ರಮುಖವಾಗಿ ಚಿತ್ರದುರ್ಗ, ಬೀದರ್, ಉತ್ತರ ಕನ್ನಡ, ಹಾಸನ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತದಾನ ಬಹಿಷ್ಕರಿಸಿದ ಘಟನೆಗಳು ವರದಿಯಾಗಿವೆ. ಮತದಾನ ಬಹಿಷ್ಕರಿಸುವ ಮೂಲಕ ಜನಪ್ರತಿನಿಧಿಗಳಿಗೆ ಜನರು ಬಿಸಿ ಮುಟ್ಟಿಸಿದ್ದಾರೆ. [ಮತದಾನದ ಚಿತ್ರಗಳನ್ನು ನೋಡಿ]

ಚಿತ್ರದುರ್ಗ : ಅಮೃತ್‌ ಮಹಲ್ ಕಾವಲ್ ಉಳಿವಿಗೆ ಒತ್ತಾಯಿಸಿ ಚಳ್ಳಕೆರೆಯ ದೊಡ್ಡ ಉಳ್ಳಾರ್ತಿಯ ನಾಲ್ಕು ಸಾವಿರ ಮತದಾರರು ಮತದಾನ ಬಹಿಷ್ಕರಿಸಿದ್ದಾರೆ. ಹಿರಿಯೂರು ತಾಲೂಕಿನ ಐಮಂಗಲ, ಹೊಸಕೆರೆ, ಹೊಸಕೆರೆ ಪಾಳ್ಯ ಗ್ರಾಮಗಳಲ್ಲಿನ 2312 ಜನ ಮತದಾರರಲ್ಲಿ 54 ಜನ ಮತ ಚಲಾಯಿಸಿದರು. ಉಳಿದ 2258 ಜನ ಮೂಲಸೌಲಭ್ಯಕ್ಕೆ ಆಗ್ರಹಿಸಿ ಮತದಾನದಿಂದ ದೂರ ಉಳಿದರು.

ಹಾಸನ : ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗೊಲ್ಲೇನಹಳ್ಳಿಯ 557 ಮತದಾರರು, ಗೊರವನಹಳ್ಳಿ, ಹೊಸಹಳ್ಳಿ ತುಂದೇವನಹಳ್ಳಿಯಲ್ಲಿನ 322 ಮತದಾರರು ಮತದಾನ ಬಹಿಷ್ಕರಿಸಿದರು. ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಪಟ್ಟರೂ ಅದು ಪ್ರಯೋಜನವಾಗಲಿಲ್ಲ.

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪ-ನಾರಗೋಡು, ಕಾಗೋಡುದಿಂಬ ಗ್ರಾಮಸ್ಥರು ತಮ್ಮ ಊರಿನಲ್ಲಿ ಸ್ಥಾಪಿಸಿದ್ದ ಮತ ಕೇಂದ್ರವನ್ನು ಬೇರೆಡೆಗೆ ವರ್ಗಾಯಿಸಿದ್ದನ್ನು ಖಂಡಿಸಿ ಮತದಾನ ಮಾಡಲಿಲ್ಲ. ಈ ಗ್ರಾಮಗಳಲ್ಲಿ 416 ಮತಗಳಿದ್ದವು.

ಚಾಮರಾಜನಗರ : ಟಿ.ನರಸಿಪುರ ತಾಲೂಕಿನ ಹೊಸಹಳ್ಳಿ ಮೋಳೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯಿಸಿ ಮತದಾನ ಬಹಿಷ್ಕರಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾಗಾನಪಲ್ಲಿ ಮತ್ತು ವೆಂಕಟಕೃಷ್ಣಮ್ಮನ ಹಳ್ಳಿ ಗ್ರಾಮಗಳಲ್ಲಿ 380 ಜನ ಮತದಾನದಿಂದ ದೂರ ಉಳಿದರು.

ಅಭ್ಯರ್ಥಿಯೇ ಮತದಾನ ಮಾಡಲಿಲ್ಲ : ರಾಯಚೂರಿನಲ್ಲಿ ಮತಯಂತ್ರಕ್ಕೆ ಅಳವಡಿಸಿದ ಅಭ್ಯರ್ಥಿಗಳ ಚುನಾವಣಾ ಚಿಹ್ನೆಗಳ ಮುದ್ರಣದಲ್ಲಿ ಜಿಲ್ಲಾಡಳಿತ ತಾರತಮ್ಯ ಮಾಡಿದೆ ಎಂದು ಆರೋಪಿಸಿ ಎಸ್ ಯುಸಿಐ ಪಕ್ಷದ ಅಭ್ಯರ್ಥಿ ಕೆ. ಸೋಮಶೇಖರ ಮತದಾನ ಮಾಡಲಿಲಿಲ್ಲ. ಮತಯಂತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಚಿಹ್ನೆಗಳು ಮಾತ್ರ ಸ್ಪಷ್ಟವಾಗಿ ಕಾಣುವಂತೆ ಮಾಡಲಾಗಿದೆ ಎಂಬದು ಅವರ ಆರೋಪವಾಗಿತ್ತು.

ತುಮಕೂರು : ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ, ಹಳ್ಳದ ಹೊಸಳ್ಳಿ, ಲಕ್ಷ್ಮೀದೇವಹಳ್ಳಿ, ಬಿಗೆನೇನಹಳ್ಳಿ, ಗೊಟ್ಟಿಕೆರೆ- ಹಿಂಡುಮಾರನಹಳ್ಳಿ ಗ್ರಾಮಗಳ ಮತದಾರರು ದಬ್ಬೆಘಟ್ಟ ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕೆಂದು ಮತದಾನ ಬಹಿಷ್ಕರಿಸಿದರು. ಗ್ರಾಮದಲ್ಲಿ 3700ಕ್ಕೂ ಹೆಚ್ಚು ಮತದಾರರಿದ್ದಾರೆ

ಗುಲ್ಬರ್ಗ : ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕಿನ ತಿರುಮಲಾಪುರ ಗ್ರಾಮದ 227 ಜನ ಮತದಾನ ಬಹಿಷ್ಕರಿಸಿದರು ಮತ್ತು ಹಾಗರಗಾ ಗ್ರಾಮಸ್ಥರು ನವೋದಯ ಶಾಲೆಯ ಸ್ಥಳಾಂತರಿಸಬಾರದು ಎಂದು ಒತ್ತಾಯಿಸಿ ಮತದಾನ ಮಾಡಲಿಲ್ಲ, ಈ ಗ್ರಾಮದ 2243 ಮತದಾರರ ಪೈಕಿ 2220 ಮತದಾರರು ಮತದಾನದಿಂದ ದೂರ ಉಳಿದಿದ್ದರು.

English summary
Elections 2014 : All the appeals of the district administration, politicians and political parties to vote failed to make any impact on the people in some village of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X