ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಆಯೋಗಕ್ಕೆ ಮಂಜುಳಾ ಮಾನಸ ಅಧ್ಯಕ್ಷೆ

|
Google Oneindia Kannada News

ಬೆಂಗಳೂರು, ಜೂ. 22 : ಒಂದೂವರೆ ವರ್ಷದಿಂದ ತೆರವಾಗಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಮೈಸೂರು ಮೂಲದ ಮಂಜುಳಾ ಮಾನಸ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ನೂತನವಾಗಿ ಆರು ಜನ ಸದಸ್ಯರನ್ನು ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಲಾಗಿದೆ.

ಶನಿವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು, ನೂತನ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಯನ್ನು ಅಧಿಕೃತವಾಗಿ ಘೋಷಿಸಿದರು. ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿ ಮೂರು ವರ್ಷಗಳಾಗಿರುತ್ತದೆ ಎಂದು ಹೇಳಿದರು.

State Commission for Women

ಮೈಸೂರು ಮೂಲದ ಮಂಜುಳಾ ಅವರು ಎಂ.ಎ ಹಾಗೂ ಎಲ್‌ಎಲ್‌ಬಿ ಪದವೀಧರಾಗಿದ್ದಾರೆ. ವೃತ್ತಿಯಿಂದ ವಕೀಲರಾಗಿರುವ ಇವರು ಕಾಂಗ್ರೆಸ್‌ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನ ಒಂದು ವರ್ಷದಿಂದ ಖಾಲಿ ಉಳಿದಿತ್ತು.

ನೂತನ ಸದಸ್ಯರು : ಮಹಿಳಾ ಆಯೋಗಕ್ಕೆ ಅಧ್ಯಕ್ಷರ ಜೊತೆಗೆ ಹೊಸ ಸದಸ್ಯರನ್ನು ನೇಮಕ ಮಾಡಲಾಗಿದೆ. ಶಾರದಾ (ಹಾಸನ), ರಫ‌ತ್‌ ಮತೀನ್‌ (ಬೀದರ್‌), ಶ್ಯಾಮಲಾ ಭಂಡಾರಿ (ಉಡುಪಿ), ಅನಿತಾ ಗುಂಜಾಲ್‌ (ಹುಬ್ಬಳ್ಳಿ), ಪುಷ್ಪಾ ಲಕ್ಷ್ಮಣಸ್ವಾಮಿ (ಬೆಂಗಳೂರು), ಸುಮನ್‌ ಹೆಗ್ಡೆ (ಬೆಂಗಳೂರು) ಆಯೋಗದ ಸದಸ್ಯರಾಗಿದ್ದಾರೆ.

ಪ್ರಕರಣ ಬಗೆಹರಿಸುತ್ತೇನೆ : ಮಹಿಳಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಂಜುಳಾ ಮಾನಸ ಅವರು, ಮಹಿಳಾ ಆಯೋಗದಲ್ಲಿ ಸಾಕಷ್ಟು ಪ್ರಕರಣಗಳಿವೆ ಎಂಬುದನ್ನು ಕೇಳಿದ್ದೇನೆ. ದೌರ್ಜನ್ಯ, ಅತ್ಯಾಚಾರ, ವಂಚನೆ, ಆ್ಯಸಿಡ್‌ ದಾಳಿ ಸೇರಿದಂತೆ ಹಲವು ಪ್ರಕರಣಗಳಿವೆ. ಆದ್ಯತೆ ಮೇಲೆ ಪ್ರಕರಣಗಳನ್ನು ಇತ್ಯರ್ಥಪಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

English summary
The Karnataka government has appointed Manjula Manasa, an advocate and women’s rights activist, as chairperson of the Karnataka State Commission for Women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X