ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು, ಹುಬ್ಬಳ್ಳಿಯಲ್ಲೂ ಏಪ್ರಿಲ್ 1ರಿಂದ ಬಿಪಿಒ

|
Google Oneindia Kannada News

ನವದೆಹಲಿ, ಜ. 5: ದೇಶದ ಸಣ್ಣ ಸಣ್ಣ ನಗರಗಳಲ್ಲೂ ಬಿಪಿಒ ಆರಂಭಿಸುವ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿ ಸಿದ್ಧಪಡಿಸಿದ್ದು, ಮಂಗಳೂರು, ಮೈಸೂರು ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಚಿಕ್ಕ ನಗರಗಳಲ್ಲೂ ಬಿಪಿಒ ಆರಂಭ ಮಾಡಲಾಗುವುದು.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಏಪ್ರಿಲ್ 1 ರಿಂದ ಆರಂಭಗೊಳ್ಳಲಿರುವ ಹೊಸ ಆರ್ಥಿಕ ವರ್ಷದ ವೇಳೆಗೆ ಸಣ್ಣ ನಗರಗಳಲ್ಲಿ ಬಿಪಿಒಗಳು ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದ್ದಾರೆ.[2015ರ ಆಗಸ್ಟ್ ಒಳಗೆ ದೇಶದ ಎಲ್ಲ ಗ್ರಾಮಗಳಲ್ಲಿ ಬ್ಯಾಂಕ್]

prasad

ಕರ್ನಾಟಕ, ಉತ್ತರ ಪ್ರದೇಶ, ಬಿಹಾರ , ಒರಿಸ್ಸಾ ಸೇರಿದಂತೆ ಹಲವು ರಾಜ್ಯಗಳ ಚಿಕ್ಕ ಚಿಕ್ಕ ನಗರಗಳಲ್ಲಿ ಬಿಪಿಒ ಆರಂಭಕ್ಕೆ ಮಾರ್ಗಸೂಚಿ ತಯಾರು ಮಾಡಲಾಗುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದ್ದು ಮಹಾನಗರಗಳಿಗೆ ವಲಸೆ ಹೋಗುತ್ತಿರುವ ಯುವಕರ ಸಂಖ್ಯೆ ಕಡಿಮೆ ಮಾಡಬಹುದು ಎಂದು ಪ್ರಸಾದ್ ಹೇಳಿದ್ದಾರೆ.

ಎಲ್ಲೆಲ್ಲಿ ಬಿಪಿಒ?
ಮಂಗಳೂರು, ಹುಬ್ಬಳ್ಳಿ, ತಿರುಚಿರಾಪಳ್ಳಿ, ವಡೋದರ ಮತ್ತು ವಿಶಾಖಪಟ್ಟಣದಲ್ಲಿ ಬಿಪಿಒ ಆರಂಭಕ್ಕೆ ಉತ್ತಮ ಅವಕಾಶವಿದೆ. ಜತೆಗೆ ಮೈಸೂರು, ಕಾನ್ಪುರ, ನಾಸಿಕ್, ಪುದುಚೇರಿ, ಸೇಲಂಗಳಲ್ಲೂ ಆಂಗ್ಲ ಭಾಷೆ ಬಲ್ಲವರಿದ್ದು ಬಿಪಿಒ ಮೂಲಕ ಉದ್ಯೋಗ ಕಲ್ಪಿಸಿಕೊಡಬಹುದು. ಬಿಪಿಒಗಳಿಗೆ ಮೂಲ ಸೌಕರ್ಯದ ಜತೆಗೆ 24 ಗಂಟೆ ವಿದ್ಯುತ್ ನೀಡುವ ಕುರಿತು ಗಮನ ಹರಿಸಲಾಗುವುದು ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಬಿಪಿಒ ಎಂದರೇನು?
ಬಿಸಿನಸ್ ಪ್ರೊಸೆಸ್ ಔಟ್ ಸೊರ್ಸಿಂಗ್ ನ್ನು ಬಿಪಿಒ ಎಂದು ಕರೆಯಲಾಗುತ್ತದೆ. ಅಂದರೆ ಇವು ಒಂದು ರೀತಿ ಕಾಲ್ ಸೆಂಟರ್ ಗಳ ರೀತಿಯಯೇ ಕೆಲಸ ನಿರ್ವಹಿಸುತ್ತವೆ. ಸರಳವಾಗಿ ಹೇಳುವುದಾದರೆ ವಿವಿಧ ಕಂಪನಿಗಳ ಗ್ರಾಹಕರ ಸಮಸ್ಯೆ ಬಗೆಹರಿಸುವ ಗುತ್ತಿಗೆ ಪಡೆದು ಸಂಭಾಷಣೆ ಮೂಲಕ ಪರಿಹಾರ ಕಲ್ಪಿಸಿಕೊಡುವುದೇ ಬಿಪಿಒದ ಪ್ರಮುಖ ಕೆಲಸ.

English summary
Central Government is in the final stages of formulating guidelines for setting up BPOs in small towns and cities in states like Karnataka, Uttar Pradesh, Bihar and Odisha. The guidelines are expected to be implemented in the new fiscal starting April 1, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X