ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮ್ಯಾ ಸಾಧನೆಗಳ ವಿಡಿಯೋ ಬಹಿರಂಗ

By Mahesh
|
Google Oneindia Kannada News

ಬೆಂಗಳೂರು, ಏ.4: ಕನ್ನಡ ಚಿತ್ರರಂಗದ ಲಕ್ಕಿ ಸ್ಟಾರ್ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರಿಗೆ ರಾಜಕೀಯ ಕ್ಷೇತ್ರದಲ್ಲೂ ಲಕ್ ಕೈ ಕೊಟ್ಟಿಲ್ಲ. ಮಂಡ್ಯ ಕ್ಷೇತ್ರದಲ್ಲಿ ಕಳೆದ ಆಗಸ್ಟ್ ನಲ್ಲಿ ನಡೆದ ಉಪ ಚುನಾವಣೆಗೆ ಸ್ಪರ್ಧಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಜತೆಗೆ ಭಾರಿ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸಂಸತ್ ಪ್ರವೇಶಿಸಿದ ಈ ಕ್ಷೇತ್ರ ಮೊದಲ ಮಹಿಳಾ ಪ್ರತಿನಿಧಿ ಎನಿಸಿದರು. ಈಗ 2014ರ ಲೋಕಸಭೆ ಚುನಾವಣೆಯಲ್ಲಿಯೂ ಇದೇ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ.

ಸಂಸದೆಯಾದ ನಂತರ ಕ್ಷೇತ್ರದಲ್ಲೇ ಮನೆ ಮಾಡಿ ಜನಗಳ ಮನಗೆದ್ದಿರುವ ರಮ್ಯಾ ಅವರು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ವರ್ ಮೂಲಕ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತಾಬಂದಿದ್ದಾರೆ. ಇತ್ತೀಚೆಗಷ್ಟೇ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರ ಜತೆ ಕಾಂಗ್ರೆಸ್ ಪರ ಜಾಹೀರಾತಿಗಾಗಿ ಮುಖ ತೋರಿಸಿ ಬಂದಿರುವ ರಮ್ಯಾ ಅವರು ತಮ್ಮ ಸಾಧನೆಯ ವಿಡಿಯೋ ಬಹಿರಂಗಗೊಳಿಸಿದ್ದಾರೆ.[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಈ ವಿಡಿಯೋದಲ್ಲಿ ಕಳೆದ ಆರು ತಿಂಗಳಲ್ಲಿ ರಮ್ಯಾ ಸಾಧಿಸಿದ್ದೇನು ಎಂಬುದರ ಬಗ್ಗೆ ಕ್ಷೇತ್ರದ ಜನತೆ ಮಾತನಾಡಿದ್ದಾರೆ. 15ನೇ ಲೋಕಸಭೆ ಅಧಿವೇಶನದ ಕೊನೆಯಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ರಮ್ಯಾ ಅವರು ಮಂಡ್ಯದ ಕಬ್ಬುಬೆಳೆಗಾರ ಸಮಸ್ಯೆ, ಎಥೆನಾಲ್ ಬಳಕೆ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು ಮಂಡ್ಯ ಜನತೆಗೆ ಭಾರಿ ಇಷ್ಟವಾಗಿದೆ. ಪಟ್ಟಣದಲ್ಲಿ ಓದಿ ಬೆಳೆದ ನಮ್ಮ ಸಂಸದೆಗೆ ಮಣ್ಣಿನ ಮಕ್ಕಳ ನೋವು ನಲಿವು ತಿಳಿದಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದೇ ವಿಡಿಯೋವನ್ನು ಸುವರ್ಣ ಸುದ್ದಿವಾಹಿನಿ ಸಂಪಾದಕ ಅನಂತ್ ಚಿನಿವಾರ್ ಅವರಿಗೆ ಗುರುವಾರ ರಾತ್ರಿ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರದರ್ಶಿಸಲಾಯಿತು.

ರಮ್ಯಾ ಸಾಧನೆಗಳ ವಿವರ ನೀಡುವ ವಿಡಿಯೋ

ರಮ್ಯಾ ಸಾಧನೆಗಳ ವಿವರ ನೀಡುವ ವಿಡಿಯೋ

* Tertiary Institute ಆಫ್ ಕ್ಯಾನ್ಸರ್ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ 45 ಕೋಟಿ ರು ಮಂಜೂರು ಮಾಡಿಸಿದ್ದಾರೆ.

ವಿದ್ಯಾರ್ಥಿನಿಯರ ನೋವಿಗೆ ಸ್ಪಂದಿಸಿದ ದಿವ್ಯಾ

ವಿದ್ಯಾರ್ಥಿನಿಯರ ನೋವಿಗೆ ಸ್ಪಂದಿಸಿದ ದಿವ್ಯಾ

ಕಾಲೇಜು ವಿದ್ಯಾರ್ಥಿನಿಯರಿಗೆ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲದಿರುವುದರ ಬಗ್ಗೆ ತಿಳಿದ ರಮ್ಯಾ ಅವರು ತಕ್ಷಣವೇ ಶೌಚಾಲಯ ವ್ಯವಸ್ಥೆ ಕಲ್ಪಿಸಿದರು.

ಕೇಂದ್ರಿಯ ವಿದ್ಯಾಲಯ ಸ್ಥಾಪನೆ

ಕೇಂದ್ರಿಯ ವಿದ್ಯಾಲಯ ಸ್ಥಾಪನೆ

ಕೇಂದ್ರಿಯ ವಿದ್ಯಾಲಯ ಸ್ಥಾಪನೆ 2012ರಿಂದ ನೆನಗುದಿಗೆ ಬಿದ್ದಿತ್ತು. ಆದರೆ, ರಮ್ಯಾ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದೊಡನೆ ಚರ್ಚೆ ನಡೆಸಿ ವಿದ್ಯಾಲಯ ಸ್ಥಾಪನೆಗೆ ನೆರವಾದರು.
* ಶಾಲಾ ಮಕ್ಕಳಿಗೆ ಶೂ ವಿತರಣೆ

ಹಳ್ಳಿಗಳಿಗೆ ಸೂಕ್ತ ರಸ್ತೆ ವ್ಯವಸ್ಥೆ

ಹಳ್ಳಿಗಳಿಗೆ ಸೂಕ್ತ ರಸ್ತೆ ವ್ಯವಸ್ಥೆ

* ಹಳ್ಳಿಗಳಿಗೆ ಸೂಕ್ತ ರಸ್ತೆ ವ್ಯವಸ್ಥೆ, ಬಸ್ ಶೆಲ್ಟರ್, ಬೆಳಗ್ಗೆ 6 ರಿಂದ ರಾತ್ರಿ 9 ರ ತನಕ ಬಸ್ ಸಂಚಾರ.
* ಅಶಕ್ತರು, ದುರ್ಬಲರಿಗೆ ಸೂಕ್ತ ಪರಿಕರ ಸಾಧಕ, ವೀಲ್ ಚೇರ್ ವಿತರಣೆ
* ಕೆಸ್ತೂರ್ ಆರೋಗ್ಯ ಕೇಂದ್ರಕ್ಕೆ ಅಂಬ್ಯುಲೆನ್ಸ್ 30 ಹಳ್ಳಿಗೆ ಉಪಯೋಗ

ರೈತ ಪರ ಕಾಳಜಿ ಭಾಷಣಕ್ಕೆ ಸೀಮಿತವಾಗಿಲ್ಲ

ರೈತ ಪರ ಕಾಳಜಿ ಭಾಷಣಕ್ಕೆ ಸೀಮಿತವಾಗಿಲ್ಲ

ರೈತ ಪರ ಕಾಳಜಿ ಭಾಷಣಕ್ಕೆ ಸೀಮಿತವಾಗಿಲ್ಲ ಎಂಬುದನ್ನು ರಮ್ಯಾ ನಿರೂಪಿಸಿದ್ದಾರೆ. ರೈತರಿಗೆ ಬೇಕಾದ ಡ್ರಿಪ್ ಸೆಟ್ ನೀಡಿಕೆ. ಸಕ್ಕರೆ ಕಾರ್ಖಾನೆ ನೌಕರರಿಗೆ ಬಾಕಿ ಮೊತ್ತ ಪಾವತಿ, ದರ ತೀರ್ಮಾನ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ BIFR ಅಧಿಕಾರಿಗಳಿಂದ ಸಮೀಕ್ಷೆ

ಸಂಸತ್ತಿನಲ್ಲಿ ರಮ್ಯಾ ಭಾಷಣದ ವಿಡಿಯೋ

ಸಂಸತ್ತಿನಲ್ಲಿ ರಮ್ಯಾ ಭಾಷಣದ ವಿಡಿಯೋ ಇಲ್ಲಿದೆ ನೋಡಿ

ಬುದ್ಧಿವಂತೆ ಸಂಸದೆ ದಿವ್ಯ ಸ್ಪಂದನ

ಬುದ್ಧಿವಂತೆ ಸಂಸದೆ ದಿವ್ಯ ಸ್ಪಂದನ

ಮೇಡಂ ನೀವು ರೈತರ ಬಗ್ಗೆ ಕಾಳಜಿ ಹೊಂದಿದ್ದೀರಿ ಆದರೆ, ಸಿಎಂ ಸಿದ್ದರಾಮಯ್ಯ ಅವರು ಹಾವೇರಿ ರೈತ ಸತ್ತಿದ್ದು ಕುಡಿತದಿಂದ ಎಂದಿದ್ದಾರೆ. ಕಾಂಗ್ರೆಸ್ ನಾಯಕರು ಮಾತಿನ ಮೇಲೆ ಹಿಡಿತ ತಪ್ಪುತ್ತಿದ್ದಾರೆ. ನೀವೊಬ್ಬ ಯೂಥ್ ಐಕಾನ್ ಆಗಿ ನಮ್ಮಂಥ ಮತದಾರರಿಗೆ ಏನು ಸಂದೇಶ ನೀಡುತ್ತೀರಿ ಸಿದ್ದು ಅವರ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ ರಮ್ಯಾ ಉತ್ತರಿಸಲು ನಿರಾಕರಿಸಿದರು.

ಬೇರೆ ನಾಯಕರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲಾರೆ. ನಾನು ನನ್ನ ಹೇಳಿಕೆ ಬಗ್ಗೆ ಮಾತ್ರ ಮಾತನಾಡಬಲ್ಲೆ. ನಿಮಗೆ ಪ್ರತಿಕ್ರಿಯೆ ಬೇಕಾದರೆ ಅವರನ್ನೇ ಕೇಳಿ ಎಂದು ಬಿಟ್ಟರು.

ರಮ್ಯಾ ಸಾಧನೆಗಳ ವಿಡಿಯೋ ಬಹಿರಂಗ

ರಮ್ಯಾಗೆ ಅಂಬರೀಷ್ ಅಭಿಮಾನಿಗಳ ಸಂಘದ ಮಾರ್ಕೆಟ್ ರಾಜ ಅವರು ಕೂಡಾ ಬೆಂಬಲ ವ್ಯಕ್ತಪಡಿಸಿದ್ದು, ಅಂಬರೀಷ್ ಅವರು ರಮ್ಯಾ ಪರ ಪ್ರಚಾರ ನಡೆಸಲಿದ್ದಾರೆ ಎಂದರು.

English summary
Divya Spandana, known as Ramya as her screen name, is a popular actress in the Sandalwood films. She has elected as Member of Parliament from Mandya. here is a short video on Ramya's work done in Mandya in a short span of six months being an MP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X