ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಿದಾಗುತ್ತಿದೆ ಕೆಆರ್ ಎಸ್; ಕಾವೇರಿ ತವರಲ್ಲಿಯೂ ಬರ

By Srinath
|
Google Oneindia Kannada News

ಮಂಡ್ಯ, ಏ. 28: ರಾಜ್ಯಾದ್ಯಂತ ಬಿರುಬಿಸಿಲು ಕಾಡುತ್ತಿದೆ. ಕೆರೆಕಟ್ಟೆಗಳು ಒಣಗಿ ಹೋಗಿ ಯಾವುದೋ ಕಾಲವಾಗಿದೆ. ಅಣೆಕಟ್ಟೆಗಳು ಸಹ ಬತ್ತಲಾರಂಭಿಸಿವೆ. ನಾಡಿನ ಖ್ಯಾತ ಅಣೆಕಟ್ಟೆ ಕೆಆರ್ ಎಸ್ ಸಹ ಬತ್ತಲಾರಂಭಿಸಿದ್ದು, ಮೇ ಅಂತ್ಯಕ್ಕೆ ಸಂಪೂರ್ಣವಾಗಿ ಬರಿದಾಗಲಿದೆ.

ಅಣೆಕಟ್ಟೆಯಲ್ಲಿ ನಿನ್ನೆ ಸಂಜೆ ವೇಳೆಗೆ ಸುಮಾರು 85 ಅಡಿ ನೀರಿದ್ದು ಒಳಹರಿವು 170 ಕ್ಯೂಸೆಕ್ ಮತ್ತು ಹೊರಹರಿವು 4669 ಕ್ಯೂಸೆಕ್ ಪ್ರಮಾಣದಲ್ಲಿದೆ. ಹಾಗಾಗಿ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಾಗಿ ಕೃಷ್ಣರಾಜ ಸಾಗರ ಜಲಾಶಯವನ್ನು ಅವಲಂಬಿಸಿರುವವರು ಸದ್ಯಕ್ಕೆ ಅಂದರೆ ಮೇ ತಿಂಗಳವರೆಗೂ ಆತಂಕಪಡುವ ಅಗತ್ಯವಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಪಿ ಶ್ರೀರಂಗರಾಜು ತಿಳಿಸಿದ್ದಾರೆ.

ಕಳೆದ ವರ್ಷವೇ ಅತ್ಯಂತ ಶೋಚನೀಯ:

Mandya KRS will dry up by May-end- KRS engineer Srirangaraju

2009ರಲ್ಲಿ ಇದೇ ದಿನ 82.57 ಅಡಿ, 2010ರಲ್ಲಿ 95.55 ಅಡಿ, 2011ರಲ್ಲಿ 102.65 ಅಡಿ, 2012ರಲ್ಲಿ 88.10 ಅಡಿ, 2013ರಲ್ಲಿ ತೀವ್ರ ಶೋಚನೀಯ ಅಂದರೆ 67.84 ಅಡಿಗೆ ಕುಸಿದಿತ್ತು. (KRS ದಾಖಲೆ: ಪಾತಾಳ ಕಚ್ಚಿದ ಕಾವೇರಿ ನೀರು)

KRS ಜಲಾಶಯ ಪ್ರದೇಶದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಅಣೆಕಟ್ಟೆಯಲ್ಲಿ ಸದ್ಯ 13.350 ಟಿಎಂಸಿ ನೀರಿನ ಸಂಗ್ರಹವಿದೆ. ಇದರಲ್ಲಿ 4.774 ಟಿಎಂಸಿ ಉಪಯೋಗಕ್ಕೆ ಬರಲಿದೆ. ಕುಡಿಯುವ ನೀರಿಗಾಗಿ ಕಾವೇರಿ ನದಿ ಅವಲಂಬಿಸಿರುವ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಭಾಗದ ನಗರಗಳಿಗೆ ಪ್ರತಿದಿನ 500 ಕ್ಯೂಸೆಕ್ ನೀರಿನ ಅಗತ್ಯವಿದೆ. ಮೇ 31ರವರೆಗೂ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಉಂಟಾಗದು. ಆ ನಂತರ ಮುಂಗಾರು ಮಳೆಯಾದಲ್ಲಿ ಹೆಚ್ಚಿನ ತೊಂದರೆಯೇನೂ ಕಾಡದು.

ಕಾವೇರಿ ತವರಲ್ಲೇ ನೀರಿಗೆ ಬರ:
ಆದರೆ ಕಾವೇರಿ ತವರಲ್ಲೇ ಬರ ಕಾಡುತ್ತಿದೆ. ಕುಡಿಯುವ ನೀರಿಗಾಗಿ ಆಹಾಕಾರ ಎದ್ದಿದೆ. ದೀಪದ ಕೆಳಗೆ ಕತ್ತಲು ಎಂಬಂತೆ ಕೋಟ್ಯಂತರ ಜನರ ಪಾಲಿಗೆ ಜೀವದ್ರವ ಒದಗಿಸುತ್ತಿರುವ ಕಾವೇರಿ ಉಗಮ ಸ್ಥಾನ ಮಡಿಕೇರಿಯಲ್ಲೇ ನೀರಿಗೆ ಹಾಹಾಕಾರ ಉಂಟಾಗಿರುವುದು ಚೋದ್ಯವೇ ಸರಿ.

ಅರ್ಧದಷ್ಟು ಮಡಿಕೇರಿಗೆ ನೀರು ಪೂರೈಸುವ ಕೊಟುಹೊಳೆ ಜಲಾಶಯದಲ್ಲಿ ನೀರು ತಳಮಟ್ಟ ಕಚ್ಚಿದೆ. ಸದ್ಯ 3 ದಿನಕ್ಕೊಮ್ಮೆ ಸರಬರಾಜು ಮಾಡುವಷ್ಟು ನೀರು ಉಳಿದಿದೆ. ಕುಂಡಾ ಮೇಸ್ತ್ರಿ ಯೋಜನೆಯಡಿ ಕೂಟುಹೊಳೆ ಜಲಾಶಯಕ್ಕೆ ನೀರು ಪೂರೈಕೆಯಾದಲ್ಲಿ ಮಡಿಕೇರಿ ಜನ ಸಮಧಾನದ ನಿಟ್ಟುಸಿರು ಬಿಡಬಹುದು.

ವಿರಾಜಪೇಟೆ ಭಾಗದ ಜನ ಸಹ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಬೆಟ್ಟಪ್ರದೇಶಗಳಾದ ಅಯ್ಯಪ್ಪಬೆಟ್ಟ, ನೆಹರುನಗರ, ಮಲೆತಿರಿಕೆ ಬೆಟ್ಟ ಮತ್ತು ಅರಸು ನಗರ ಭಾಗದಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ. (ಸುಪ್ರೀಂ ನ್ಯಾಯತಕ್ಕಡಿ ಮುಂದೆ ಕರ್ನಾಟಕ ಬೆಪ್ಪುತಕ್ಕಡಿ)

English summary
Mandya KRS will dry up by May-end- KRS engineer Srirangaraju. Last year by the same time the dam had precarious 67.84 feet of water. But Madikeri area is facing acute shortage of water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X