ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಂಬರೀಷ್- ಮೀರ್ ಸಾದಿಕ್, ಹೆಣ್ಣು ವಿರೋಧಿ'

By * ಒನ್ ಇಂಡಿಯಾ ಕನ್ನಡ ಪ್ರತಿನಿಧಿ, ಮಂಡ್ಯ
|
Google Oneindia Kannada News

ಮಂಡ್ಯ, ಮೇ.18: ಲೋಕಸಭೆ ಚುನಾವಣೆ ಫಲಿತಾಂಶದ ದಿನ ಕಟ್ಟ ಕಡೆಯ ತನಕ ಕುತೂಹಲ ಉಳಿಸಿಕೊಂಡಿದ್ದ ಮಂಡ್ಯ ಕ್ಷೇತ್ರದ ಫಲಿತಾಂಶ ಜಗತ್ತಿಗೆ ತಿಳಿದು ಹೋಗಿದೆ. ಆರು ತಿಂಗಳುಗಳ ಕಾಲ ಸಂಸದೆಯಾಗಿದ್ದ ರಮ್ಯಾ ಅವರು ಈಗ ಸೋಲಿನ ಕಹಿ ಉಂಡಿದ್ದಾರೆ. ಮಂಡ್ಯ ಕಾಂಗ್ರೆಸ್ಸಿನಲ್ಲಿ ಈಗ ಒಂದು ರೀತಿ ಬೂದಿ ಮುಚ್ಚಿದ ಕೆಂಡದಂಥ ವಾತಾವರಣ ಕಾಣಬಹುದಾಗಿದೆ.

ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಚ್ ಪುಟ್ಟರಾಜು ಅವರ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿತ್ತು. ಸೋಲಿನ ನೋವಿನಲ್ಲೂ ರಮ್ಯಾ ಅವರು ಪುಟ್ಟರಾಜು ಅವರಿಗೆ ಶುಭ ಹಾರೈಸಿದ್ದರು. ದೇಶದಲ್ಲಿ ಭರ್ಜರಿ ಜಯಬೇರಿ ಬಾರಿಸಿದ ಬಿಜೆಪಿಗೂ ಅಭಿನಂದನೆ ಸಲ್ಲಿಸಿದ್ದರು.ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುತ್ತಾ 'ನಾನು ನನ್ನ ಕ್ಷೇತ್ರಕ್ಕಾಗಿ ಇನ್ಮುಂದೆ ಕೂಡಾ ದುಡಿಯುತ್ತೇನೆ ಎಂದಿದ್ದರು. ಅದರೆ, ರಮ್ಯಾ ಅಭಿಮಾನಿಗಳು ಮಾತ್ರ ರಮ್ಯಾ ಸೋಲಿಗೆ ಅಂಬರೀಷ್ ಕಾರಣ ಎಂದು ನೇರವಾಗಿ ಆರೋಪಿಸುತ್ತಿದ್ದಾರೆ.

ಮದ್ದೂರಿನಲ್ಲಿ ಅಂಬರೀಷ್ ವಿರುದ್ಧ ಬ್ಯಾನರ್

ಮದ್ದೂರಿನಲ್ಲಿ ಅಂಬರೀಷ್ ವಿರುದ್ಧ ಬ್ಯಾನರ್

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಿತ್ರನಟಿ ರಮ್ಯಾ ಸೋಲುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಅವರನ್ನು ಹೆಣ್ಣುಮಕ್ಕಳ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಹೌದು, ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಸೋಲಿಗೆ ಅಂಬರೀಷ್ ಕಾರಣವೆಂದು ಮದ್ದೂರಿನಲ್ಲಿ ರಮ್ಯಾ ಅಭಿಮಾನಿಗಳು ನೊಂದವರ ಹೆಸರಿನಲ್ಲಿ ಫ್ಲೆಕ್ಸ್ ಗಳನ್ನು ಹಲವಾರು ಕಡೆ ಹಾಕಿದ್ದಾರೆ.
ರಮ್ಯಾ ಸೋಲಿಗೆ ಅಂಬರೀಷ್ ನೇರ ಹೊಣೆ ಎನ್ನುವ ರೀತಿಯಲ್ಲಿ ಅಶ್ಲೀಲ ಪದಗಳನ್ನು ಬರೆದು ಹಾಕಲಾಗಿದೆ.

ಅಂಬರೀಷ್ ಅಭಿಮಾನಿಗಳಲ್ಲಿ ಆಕ್ರೋಶ

ಅಂಬರೀಷ್ ಅಭಿಮಾನಿಗಳಲ್ಲಿ ಆಕ್ರೋಶ

ಈ ಫ್ಲೆಕ್ಸ್ ನೋಡಿ ಅಂಬರೀಷ್ ಅಭಿಮಾನಿಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.ಅದ್ರೆ ಇದು ರಮ್ಯಾ ಅಭಿಮಾನಿಗಳೋ ಇಲ್ಲ ಕಾಂಗ್ರೆಸ್‍ನಲ್ಲಿ ಅಂಬರೀಷ್ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಕಾರ್ಯಕರ್ತರೋ ಎನ್ನುವುದು ಅನುಮಾನ ಮೂಡಿಸಿದೆ. ಇದ್ರಿಂದ ಅಂಬರೀಷ್ ತಲೆದಂಡ ಮಾಡಲು ಷಡ್ಯಂತ್ರ ರೂಪಿತವಾಗುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂಬ ಮಾತುಗಳು ಹೇಳಿ ಬಂದಿದೆ. ಒಟ್ಟಾರೆ, ಮಂಡ್ಯ ಕಾಂಗ್ರೆಸ್ ಮತ್ತೊಮ್ಮೆ ಒಳಜಗಳಕ್ಕೆ ತುತ್ತಾಗಿದೆ.

ರಮ್ಯಾ ಅಭಿಮಾನಿ ಗುಂಡನ ಕೇಶ ಮುಂಡನ

ರಮ್ಯಾ ಅವರ ಅಭಿಮಾನಿ ಮಂಡ್ಯದ ಚೀರನಹಳ್ಳಿಯ ಕೆಂಪರಾಜು ತನ್ನ ತಲೆಗೂದಲು ಹಾಗೂ ಅರ್ಧ ಮೀಸೆ ಬೋಳಿಸಿಕೊಂಡಿದ್ದಾನೆ. ಬಾಸ್ ಜತೆ ಬಾಜಿ ಕಟ್ಟಿ ಸೋತ ಕಾರಣಕ್ಕೆ ಈ ರೀತಿ ಕೇಶ ಮುಂಡನ ಮಾಡಿಸಿಕೊಂಡ ಎಂದಿದ್ದಾನೆ.

ಮಂಡ್ಯ ರಮ್ಯಾ ಟ್ವೀಟ್ ಗಳ ಹಿನ್ನೋಟ

ಸೋಲಿನ ನೋವಿನಲ್ಲೂ ರಮ್ಯಾ ಅವರು ಪುಟ್ಟರಾಜು ಅವರಿಗೆ ಶುಭ ಹಾರೈಸಿದ್ದರು. ದೇಶದಲ್ಲಿ ಭರ್ಜರಿ ಜಯಬೇರಿ ಬಾರಿಸಿದ ಬಿಜೆಪಿಗೂ ಅಭಿನಂದನೆ ಸಲ್ಲಿಸಿದ್ದರು.

ನಾನು ಮಂಡ್ಯಕ್ಕಾಗಿ ದುಡಿಯುತ್ತೇನೆ

ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುತ್ತಾ 'ನಾನು ನನ್ನ ಕ್ಷೇತ್ರಕ್ಕಾಗಿ ಇನ್ಮುಂದೆ ಕೂಡಾ ದುಡಿಯುತ್ತೇನೆ ಎಂದಿದ್ದರು

ಸಿದ್ದರಾಮಯ್ಯ ಹೇಳಿಕೆ ರಮ್ಯಾಗೆ ಮುಳುವಾಯಿತೆ?

ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹೇಳಿಕೆ ರಮ್ಯಾಗೆ ಮುಳುವಾಯಿತೆ?

English summary
Mandya: Fans Upset over Ramya’s defeat, show anger over former MP and minister Ambareesh. Ambareesh is termed as Mir Sadiq and banner is displayed in Maddur defaming the senior leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X