ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯರ ಸಮ್ಮುಖದಲ್ಲಿ ಎರಡು ಹನಿ ಕಣ್ಣೀರು ಹಾಕಿದ ರಮ್ಯಾ

By Super
|
Google Oneindia Kannada News

ಮಂಡ್ಯ, ಏ.15: ಚಿತ್ರ ನಟಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಹಿರಿಯರ ಸಮ್ಮುಖದಲ್ಲಿ ನಿನ್ನೆ ಒಂದೆರಡು ಹನಿ ಕಣ್ಣೀರು ಹಾಕಿದ್ದಾರೆ. ಮಂಡ್ಯ ಭಾಗದಲ್ಲಿ ದೇವೇಗೌಡರ ಕುಟುಂಬಕ್ಕೆ ಸೀಮಿತವಾಗಿದ್ದ ಕಣ್ಣೀರನ್ನು ರಮ್ಯಾ ಸಹ ಹರಿಸಿರುವುದು ಗಮನಾರ್ಹವಾಗಿದೆ.

ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕಿನಲ್ಲಿ ಹಿರಿಯರಾದ ಎಸ್ಎಂ ಕೃಷ್ಣ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿತ್ತು. ವೇದಿಕೆಯ ಮೇಲೆ ಮಂಡ್ಯದ ಗಂಡು ಅಂಬರೀಷ್ ಸಹ ವಿರಾಜಮಾನರಾಗಿದ್ದರು. ಆ ಸಂದರ್ಭದಲ್ಲಿ ಇಬ್ಬರೂ ಹಿರಿಯರು ಪಕ್ಷದ ಅಭ್ಯರ್ಥಿ ರಮ್ಯಾ ಬಗ್ಗೆ ಮಾತನಾಡುತ್ತಿದ್ದರು. ರಮ್ಯಾಗೆ ಮತ ನೀಡಿ ಎಂದು ಮತಯಾಚಿಸುತ್ತಿದ್ದರು.

ರಮ್ಯಾಗೆ ಒತ್ತರಿಸಿಕೊಂಡು ಬಂದ ಅಳು

ರಮ್ಯಾಗೆ ಒತ್ತರಿಸಿಕೊಂಡು ಬಂದ ಅಳು

ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಾ ರಮ್ಯಾ ಭಾವೋದ್ವೇಗದಲ್ಲಿ ಮುಳುಗಿದರು. ಎಸ್ಎಂ ಕೃಷ್ಣ ಅವರು ಮಾತಿನ ಮಧ್ಯೆ 'ರಮ್ಯಾ ನನ್ನ ಗೆಳೆಯನ ಮಗಳು' ಎಂದು ಹೇಳುತ್ತಿದ್ದಂತೆ ರಮ್ಯಾಗೆ ಅಳು ಒತ್ತರಿಸಿಕೊಂಡು ಬಂದು ಆರ್ದರಾದರು.

ಅಂಬಿ ಕಾಲಿಗೆ ಬಿದ್ದು ಆಶೀರ್ವಾದ ಬೇಡಿದ ರಮ್ಯಾ

ಅಂಬಿ ಕಾಲಿಗೆ ಬಿದ್ದು ಆಶೀರ್ವಾದ ಬೇಡಿದ ರಮ್ಯಾ

ಈ ಮಧ್ಯೆ, ಸಭಿಕರ ಮುಂದೆ ನಟ ಅಂಬರೀಷ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಬೇಡಿದ ಪ್ರಸಂಗವೂ ನಡೆಯಿತು. ನಂತರ ವೇದಿಕೆಯಲ್ಲಿದ್ದ ಎಲ್ಲ ನಾಯಕರ ಹೆಸರು ಹೇಳುತ್ತಾ ಮಾತನಾಡಿದ ರಮ್ಯಾ, ಅಂಬರೀಷ್ ಅವರ ಹೆಸರು ಹೇಳುವಾಗ 'ಅಂಬರೀಷ್ ಅಂದರೆ ನನಗೆ ತೃಪ್ತಿಯಾಗುವುದಿಲ್ಲ. ಅಂಬರೀಷ್ ಅಂಕಲ್ ಅಂದರೇನೇ ತೃಪ್ತಿ' ಎಂದು ತೃಪ್ತಿಯಿಂದ ಹೇಳಿದರು.

ಆಕಸ್ಮಿಕವಾಗಿ ಸಿಕ್ಕಿದ ಅವಕಾಶ, ಮತ್ತೊಮ್ಮೆ ನೀಡಿ- ರಮ್ಯಾ

ಆಕಸ್ಮಿಕವಾಗಿ ಸಿಕ್ಕಿದ ಅವಕಾಶ, ಮತ್ತೊಮ್ಮೆ ನೀಡಿ- ರಮ್ಯಾ

ಮುಂದುವರಿದು ಮಾತನಾಡಿದ ರಮ್ಯಾ 'ನನಗೆ ಅಧಿಕಾರದ ಆಸೆ ಇಲ್ಲ. ಆಕಸ್ಮಿಕವಾಗಿ ನನಗೆ ಅವಕಾಶ ಸಿಕ್ಕಿತು. ಆ ಅವಕಾಶದಲ್ಲಿ ನಾನು ಕ್ಷೇತ್ರದಲ್ಲಿ ಸಾಧ್ಯವಾದಷ್ಟು ಕೆಲಸ ಮಾಡಿದ್ದೇನೆ. ಮತ್ತಷ್ಟು ಅಭಿವೃದ್ಧಿ ಪಡಿಸುವ ಆಸೆಯಿದೆ. ಆದ್ದರಿಂದ ಮತ್ತೊಂದು ಅವಕಾಶ ನೀಡಿ ಎಂದು ಮತದಾರರನ್ನು ಕೋರಿದರು.

ಸೋತರೂ ಮೈಸೂರಿಗೆ ಬರ್ತೇನೆ, ರಾಜಕೀಯ ನಿವೃತ್ತಿಯಿಲ್ಲ- ಕೃಷ್ಣ

ಸೋತರೂ ಮೈಸೂರಿಗೆ ಬರ್ತೇನೆ, ರಾಜಕೀಯ ನಿವೃತ್ತಿಯಿಲ್ಲ- ಕೃಷ್ಣ

ಇದಕ್ಕೂ ಮುನ್ನ ಮೈಸೂರಿನಲ್ಲಿ ಪಕ್ಷದ ಅಭ್ಯರ್ಥಿ ವಿಶ್ವನಾಥರ ಪರ ಪ್ರಚಾರದಲ್ಲಿ ತೊಡಗಿದ್ದ ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೋದಿ ಮತ್ತು ದೇವೇಗೌಡ ಅವರು ಪರಸ್ಪರ ನೀಡಿರುವ ಪರಸ್ಪರ ಹೇಳಿಕೆಗಳ ಬಗ್ಗೆ ನನ್ನ ಪ್ರತಿಕ್ರಿಯೆ ಅಪ್ರಸ್ತುತ. ನಾವು (ಕಾಂಗ್ರೆಸ್) ಗೆದ್ದರೂ, ಸೋತರೂ ಮೈಸೂರಿಗೆ ಬರುತ್ತೇವೆ. ನನಗಂತೂ ಸದ್ಯಕ್ಕೆ ರಾಜಕೀಯ ನಿವೃತ್ತಿ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ರಾಜಕೀಯ ಪ್ರಬುದ್ಧತೆ ಇರಬೇಕು: ಗೌಡರಿಗೆ ಕಿವಿಮಾತು

ರಾಜಕೀಯ ಪ್ರಬುದ್ಧತೆ ಇರಬೇಕು: ಗೌಡರಿಗೆ ಕಿವಿಮಾತು

52 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಇದ್ದೇನೆ. 40 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇನೆ. ನನಗಂತೂ ರಾಜಕೀಯ ಪ್ರಬುದ್ಧತೆ/ ಪ್ರೌಢಿಮೆ ಇದೆ. ಬೇರೆಯವರಮನ್ನು ಕರೆದುಕೊಂಡು ಬಂದು ಛೂ ಬಿಡುವ ಅಗತ್ಯವಿಲ್ಲ ಎಂದು ದೇವೇಗೌಡರ ಹೇಳಿಕೆಗೆ ಕುಟುಕಿದರು.

English summary
Lok Sabha Polls 2014- Mandya Congress candiate Ramya while on campaign in Mandya Lok Sabha Constituency weeped at a comment by SM krishna regarding her father.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X