ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಿ ರಾಜಕೀಯ ಎಂಟ್ರಿ ವಿವಾದಕ್ಕೆ ರಮ್ಯಾ ಮಂಗಳ

By Srinath
|
Google Oneindia Kannada News

ಮಂಡ್ಯ, ಮಾರ್ಚ್ 11: ಮಾಜಿ ನಟಿ, ಮಂಡ್ಯ ಸಂಸದೆ ರಮ್ಯಾ ಅವರು ಇತ್ತೀಚೆಗೆ ತಾವೇ ಸೃಷ್ಟಿಸಿದ್ದ ಗೊಂದಲ/ ವಿವಾದಕ್ಕೆ ತೆರೆ ಎಳೆದಿದ್ದಾರೆ. 'ಅಂಬಿ ಅಂಕಲ್ ಅವರನ್ನು ರಾಜಕೀಯಕ್ಕೆ ಕರೆ ತಂದಿದ್ದೇ ನಮ್ಮ ತಂದೆ' ಎಂದು ಕೆಆರ್ ಪೇಟೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರ ಮುಂದೆ ಹೇಳಿದ್ದ ರಮ್ಯಾ, ಎಂದಿನಂತೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿ ವಿವಾದಕ್ಕೂ ತಮಗೂ ಇನ್ನು ಸಂಬಂಧವಿಲ್ಲ. ಅದು ಮುಗಿದ ವಿಷಯ ಎಂದಿದ್ದಾರೆ.

ಇನ್ನು ಹಾಸ್ಪೆಟಿಲಿನಲ್ಲಿ ಚಿಕಿತ್ಸೆಗೆಂದು ಅಡ್ಮಿಟ್ ಆಗಿರುವ ಅಂಬರೀಷ್ ಅವರ ದೇಹದಲ್ಲಿ 12 ಲೀಟರ್ ನೀರು ತುಂಬಿಕೊಂಡಿದೆ ಎಂದು ತಾವು ಈ ಹಿಂದೆ ನೀಡಿದ್ದ ಹೇಳಿಕೆ ಬಗ್ಗೆ ಮಾತನಾಡಿದ ರಮ್ಯಾ, ಅಂಬರೀಷ್ ಅವರ ಆರೋಗ್ಯ ಸ್ಥಿತಿ ಬಗ್ಗೆ ನನಗೆ ಏನು ತಿಳಿದಿದೆಯೋ ಅದನ್ನೇ ಹೇಳಿರುವೆ. ಅವರ ಆರೋಗ್ಯದ ಬಗ್ಗೆ ನಾನು ಇಲ್ಲಸಲ್ಲದ್ದನ್ನು ಹೇಳಿಲ್ಲ. ನನ್ನ ಹೇಳಿಕೆಯಿಂದ ಅಂಬರೀಶ್ ಅವರ ಅಭಿಮಾನಿಗಳಿಗೆ ನೋವುಂಟಾಗಿದ್ದರೆ ಕ್ಷಮೆ ಕೋರುತ್ತೇನೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರವಹಿಸುತ್ತೇನೆ' ಎಂದು ಹೇಳಿದರು.

mandya-cong-mp-ramya-clarifies-on-ambareesh-entry-to-politics
ನನ್ನ ಏಳಿಗೆ ಸಹಿಸಲಾಗದೆ ಅಪಪ್ರಚಾರ: ಮಂಡ್ಯ ಜಿಲ್ಲೆ ಪಾಂಡವಪುರದ ನುಗ್ಗಹಳ್ಳಿಯಲ್ಲಿ ಸೋಮವಾರ ಮಾತನಾಡಿದ ರಮ್ಯಾ, ಅಂಬರೀಷ್ ಅವರನ್ನು ರಾಜಕೀಯಕ್ಕೆ ಕರೆತಂದವರು ನನ್ನ ತಂದೆ ಎಂದು ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅವರನ್ನು ಎಸ್‌ಎಂ ಕೃಷ್ಣ ಮತ್ತು ನನ್ನ ತಂದೆ (ನಾರಾಯಣ್) ಸ್ವಾಗತಿಸಿದ್ದರು. ಅಂಬರೀಷ್ ಅವರನ್ನು ನನ್ನ ತಂದೆ ಬರಮಾಡಿಕೊಂಡಿದ್ದರು ಎಂದು ಹೇಳಿದ್ದೆ. ಆದರೆ, ನನ್ನ ಹೇಳಿಕೆಯನ್ನು ಮಾಧ್ಯಮದವರು ತಿರುಚಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, 'ಅಂಬರೀಷ್ ಅವರು ರಾಜಕೀಯಕ್ಕೆ ಬಂದಿದ್ದು ಜೆಡಿಎಸ್‌ ಪಕ್ಷದಿಂದ ಎಂಬುದು ನನಗೂ ಗೊತ್ತಿದೆ. ಅದೇನೇ ಇರಲಿ ಅಂಬರೀಷ್ ಅವರ ಮಾರ್ಗದರ್ಶನದಲ್ಲೇ ನಾನು ಮುಂದಿನ ಹೆಜ್ಜೆ ಇಡುತ್ತೇನೆ. ಇಂತಹ ವಿವಾದಗಳು ಮನಸ್ಸಿಗೆ ಬೇಸರವನ್ನು ಉಂಟು ಮಾಡಿವೆ. ನನ್ನ ಏಳಿಗೆ ಸಹಿಸಲಾಗದೆ ನಡೆಸಿರುವ ಅಪಪ್ರಚಾರ ಇದಾಗಿದೆ' ಎಂದು ಸಂಸದೆ ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೂ ನನ್ನಿಂದ ತಪ್ಪಾಗಿದ್ದಲ್ಲಿ ದಯವಿಟ್ಟು ಕ್ಷಮಿಸುವಂತೆ ಅಂಬರೀಷ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುವೆ ಎಂದು ಸಂಸದೆ ರಮ್ಯಾ ಮತ್ತೆ ಮತ್ತೆ ಹೇಳಿದರು.

ಇದೇ ವೇಳೆ ನುಗ್ಗಹಳ್ಳಿ ಗ್ರಾಮದಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾದ 7 ವರ್ಷದ ಬಾಲಕಿ ರಕ್ಷಿತಾ ನಿವಾಸಕ್ಕೆ ಸಂಸದೆ ರಮ್ಯಾ, ಶಾಸಕ ಕೆಎಸ್ ಪುಟ್ಟಣ್ಣಯ್ಯ ಸೋಮವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

English summary
Lok Sabha Polls 2014 - Congress Mandya MP Ramya clarifies on Ambareesh's entry into politics. Ramya had said in KR Pete that her father RT Narayan introduced Ambareesh to politics. Also at a Bangalore hospital where Ambareesh was recouping had said that there was around 22 leters of water in Ambareesh body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X