ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೋಭಾ- ಪ್ರತಾಪ್ ಸಿಂಹ ಸೋಲು ಖಚಿತ: ಗುಪ್ತ ವರದಿ

By Srinath
|
Google Oneindia Kannada News

ಬೆಂಗಳೂರು, ಏ.4- ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಕ್ಷಣಗಣನೆ (ಏಪ್ರಿಲ್ 17) ಆರಂಭವಾಗಿದೆ. ಬಿರುಬಿಸಿಲಿನ ಜತೆಗೆ ಪೈಪೋಟಿಗೆ ಬಿದ್ದು ಚುನಾವಣಾ ಕಾವು ಸಹ ಏರುತ್ತಿದೆ. ಇದರಿಂದ ಅಭ್ಯರ್ಥಿಗಳು ಅಕ್ಷರಶಃ 'ಅಗ್ನಿ'ಪರೀಕ್ಷೆಗೆ ಒಳಗಾಗಿದ್ದಾರೆ.

ಈ ಮಧ್ಯೆ ಈ ಅಗ್ನಿಕಾರ್ಯಕ್ಕೆ ತುಪ್ಪ ಸುರಿದಂತೆ ರಾಜ್ಯ ಗುಪ್ತಚರ ಇಲಾಖೆ ಚುನಾವಣಾ ಫಲಿತಾಂಶದ ಬಗ್ಗೆ ಗುಪ್ತ ವರದಿಯೊಂದನ್ನು ಸಿದ್ಧಪಡಿಸಿದ್ದು, ಫಲಿತಾಂಶ ನೋಡಿದರೆ ಕೆಲ ನಾಯಕರಿಗೆ ನಡುಕ ತರುವಂತಿದೆ ಎಂದು ಇಂದಿನ ಡಿಎನ್ಎ ಪತ್ರಿಕೆ ವರದಿ ಮಾಡಿದೆ.

ಮಾಧ್ಯಮಗಳು ಇದುವರೆಗೂ ಪ್ರಕಟಿಸಿರುವ ಚುನಾವಣಾ ಸಮೀಕ್ಷೆಗಳು ಒಂದು ತೆರನದ್ದಾಗಿದ್ದರೆ ಗುಪ್ತಚರ ಇಲಾಖೆ ಮಂಡಿಸಿರುವ ಈಗಿನ ವರದಿಯ ತೂಕವೇ ಬೇರೆ. ಅಷ್ಟೇ ಕುತೂಹಲಕಾರಿ. ವಿಶ್ವಾಸಾರ್ಹವಾ? ಅದು ನಿಮ್ಮ ನಿಮ್ಮ ಊಹೆ/ ನಂಬಿಕೆಗೆ ಬಿಟ್ಟ ವಿಚಾರ. ರಾಜಕೀಯ ನಾಯಕರು/ ಮತದಾರರ ಅಪಾರ ನಿರೀಕ್ಷೆಗಳನ್ನು ತಲೆಕೆಳಗು ಮಾಡುವಂತಹ ಈ ಸಮೀಕ್ಷಾ ವರದಿಯನ್ನು ಯಥಾವತ್ ಇಲ್ಲಿ ಪ್ರಕಟಿಸುತ್ತಿದ್ದೇವೆ. ರಾಜ್ಯದಿಂದ ಇಬ್ಬೇ ಇಬ್ರು ಮಹಿಳೆಯರು ಸಂಸತ್ತು ಪ್ರವೇಶಿಸುತ್ತಾರಂತೆ. ಶೋಭಾ, ರಮ್ಯಾ ಮತ್ತು ಗೀತಾ ಪೈಕಿ ಯಾರು? ಮುಂದೆ ಓದಿ...

ಯಾವುದೇ ರಾಜ್ಯದ ಗುಪ್ತಚರ ಇಲಾಖೆಯು (Intelligence Bureau) ಚುನಾವಣೆ ಸಂದರ್ಭದಲ್ಲಿ ಸಾಮಾನ್ಯವಾಗಿ ಮೂರು ವರದಿಗಳನ್ನು ಆಡಳಿತಾರೂಢ ಸರಕಾರಕ್ಕೆ ಸಲ್ಲಿಸುತ್ತದೆ. ಅವುಗಳ ಪೈಕಿ ಈಗಿನದು ಮೊದಲನೆಯದು ಮತದಾನಕ್ಕೆ 2 ವಾರ ಮುಂಚಿನದ್ದು. ಮತ್ತೊಂದು ಮತದಾನಕ್ಕೆ 2 ದಿನ ಬಾಕಿಯಿರುವಾಗ ಮತ್ತೊಂದು ಕಂತಿನ ವರದಿ ನೀಡುತ್ತದೆ. ಕೊನೆಯದು ಮತದಾನ ನಡೆದ ಮಾರನೆಯ ದಿನ ಎಕ್ಸಿಟ್ ಪೋಲ್ ನಡೆಸುತ್ತದೆ. ರಾಜ್ಯ ಗುಪ್ತಚರ ಇಲಾಖೆಯ ಮೊದಲ ಕಂತಿನ ವರದಿಯ ಫಲಿತಾಂಶ ಹೀಗಿದೆ:

IB ವರದಿಯ ಮೊದಲ ಆಘಾತ

IB ವರದಿಯ ಮೊದಲ ಆಘಾತ

ದೇಶದ ರಾಜಕೀಯ ಪಟದಲ್ಲಿ ದಿಢೀರನೆ ಸಂಚಲನ ಮೂಡಿಸಿ, ಒಂದಷ್ಟು ಆಶಾಭಾವ ಹುಟ್ಟುಹಾಕಿರುವ ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಒಂದೂ ಸೀಟು ಗೆಲ್ಲುವುದಿಲ್ಲ. ವಾಸ್ತವವಾಗಿ ಬಹುತೇಕ ಎಎಪಿ ಅಭ್ಯರ್ಥಿಗಳು ಠೇವಣಿಯನ್ನೂ ಕಳೆದುಕೊಳ್ಳಲಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್ಸಿಗೂ ಮೂರ್ನಾಲ್ಕು ಸೀಟು

ರಾಜ್ಯದಲ್ಲಿ ಜೆಡಿಎಸ್ಸಿಗೂ ಮೂರ್ನಾಲ್ಕು ಸೀಟು

ರಾಜ್ಯದಲ್ಲಿ ನೇರ ಪೈಪೋಟಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯಷ್ಟೇ. ಎರಡೂ ಬಹುತೇಕ ಸಮಸಮವಾಗಿ 9-12 ಸೀಟು ಗೆಲ್ಲಬಹುದು. ಉಳಿದ ಮತ್ತೊಂದು ಪಕ್ಷ ಜೆಡಿಎಸ್ ಮೂರ್ನಾಲ್ಕು ಸೀಟು ಗೆಲ್ಲಬಹುದು.

7 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆಯೇ ತೀವ್ರ ಸ್ಪರ್ಧೆ

7 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆಯೇ ತೀವ್ರ ಸ್ಪರ್ಧೆ

7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಸ್ಪರ್ಧೆ ನಡೆಯಲಿದೆ. ಅದರಲ್ಲಿ ಮೂರು ಕಾಂಗ್ರೆಸ್ ಪಾಲಾಗಬಹುದು. ಅಂತಿಮವಾಗಿ ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಕಾಂಗ್ರೆಸ್ ಪಾಲಾಗಲಿದೆ. ಜತೆಗೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಕಾಂಗ್ರೆಸ್ (ಡಿಕೆ ಸುರೇಶ್) ಉಳಿಸಿಕೊಳ್ಳಲಿದೆ.

ಬೆಂಗಳೂರು ಉತ್ತರ ಕಣ ತೀವ್ರ ಕುತೂಹಲಕಾರಿ

ಬೆಂಗಳೂರು ಉತ್ತರ ಕಣ ತೀವ್ರ ಕುತೂಹಲಕಾರಿ

ಬೆಂಗಳೂರು ಉತ್ತರ ಕಣ ತೀವ್ರ ಜಿದ್ದಾಜಿದ್ದಿ ಕಾಣಲಿದೆ. ಬಿಜೆಪಿಯ ಸದಾನಂದ ಗೌಡ ಮತ್ತು ಕಾಂಗ್ರೆಸ್ಸಿನ ಸಿ ನಾರಾಯಣ ಸ್ವಾಮಿ ಮಧ್ಯೆ ತೀವವರ ಹಣಾಹಣಿ ನಡೆದು ಕೊನೆಗೆ ಸದಾನಂದ ಅವರದೇ ಅಂತಿಮ ನಗು ಎನ್ನುತ್ತಿದೆ ಗುಪ್ತಚರ ವರದಿ.

ಮೈಸೂರು ಮತ್ತು ಉಡುಪಿ-ಚಿಕ್ಕಮಗಳೂರು ಹೆಂಗೆ?

ಮೈಸೂರು ಮತ್ತು ಉಡುಪಿ-ಚಿಕ್ಕಮಗಳೂರು ಹೆಂಗೆ?

ಬಿಜೆಪಿಗೆ ಡಬಲ್ ಆಘಾತ- ಕಾಂಗ್ರೆಸ್ಸಿಗೆ ಡಬಲ್ ಧಮಾಕಾ! ವಿಶ್ವನಾಥ್ ಮತ್ತು ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ.

ಗುಪ್ತಚರ ವರದಿ ಮುಂದಿದೆ ಮಾರಿ ಹಬ್ಬ...

ಗುಪ್ತಚರ ವರದಿ ಮುಂದಿದೆ ಮಾರಿ ಹಬ್ಬ...

ಗುಪ್ತಚರ ವರದಿಯ ಮಾರಿ ಹಬ್ಬ ಮುಂದಿದೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ಸಿನ ವೀರಪ್ಪ ಮೊಯ್ಲಿ ಭಾರಿ ಪೈಪೋಟಿ ನೀಡಿ, ಕೊನೆಗೆ ಜೆಡಿಎಸ್ಸಿನ ಕುಮಾರಸ್ವಾಮಿಗೆ ಶರಣಾಗುತ್ತಾರೆ.

ಶಿವಮೊಗ್ಗ: ಯಡಿಯೂರಪ್ಪ ಕಥೆಯೇನು, ವಿಜಯಗೀತೆ ಯಾರದ್ದು!?

ಶಿವಮೊಗ್ಗ: ಯಡಿಯೂರಪ್ಪ ಕಥೆಯೇನು, ವಿಜಯಗೀತೆ ಯಾರದ್ದು!?

(ಉಸಿರುಬಿಗಿ ಹಿಡಿದುಕೊಂಡು ಓದಿ) ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಲನುಭವಿಸುತ್ತಿದ್ದಾರೆ. ಅರ್ಥಾತ್ ಜೆಡಿಎಸ್ಸಿನ ಗೀತಾ ಶಿವರಾಜ್ ಕುಮಾರ್ ಅವರದ್ದೇ ವಿಜಯಗೀತೆ!

ಯಡಿಯೂರಪ್ಪಗೆ ಗೆಲ್ಲುವ ಊಸಾಬರಿಯೇ ಬೇಡವಂತೆ

ಯಡಿಯೂರಪ್ಪಗೆ ಗೆಲ್ಲುವ ಊಸಾಬರಿಯೇ ಬೇಡವಂತೆ

ಗುಪ್ತಚರ ವರದಿಯು ವಿಜಯಗೀತೆಗೆ ಕಾರಣವನ್ನೂ ಕೊಟ್ಟಿದೆ. ಅಸಲಿಗೆ ಯಡಿಯೂರಪ್ಪ ಅವರಿಗೇ ತಾವು ಗೆಲ್ಲುವುದು ಬೇಕಾಗಿಲ್ಲವಂತೆ. ದಿಲ್ಲಿಗೆ ಹೋದರೆ ಇಲ್ಲಿ ರಾಜ್ಯದಲ್ಲಿ ಪಕ್ಷದ ಮೇಲಿನ ತಮ್ಮ ಹಿಡಿತ ಸಡಿಲವಾಗಬಹುದು ಎಂಬ ಆತಂಕದಲ್ಲಿರುವ ಬಿಎಸ್ವೈ ಆಲಸಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. ಸೋ, ಯಡಿಯೂರಪ್ಪ ಅವರೇ ತಮ್ಮ ಗೆಲುವಿಗೆ ನಿರ್ಲಕ್ಷ್ಯ ವಹಿಸಿದ್ದಾರಂತೆ.

ಯಡಿಯೂರಪ್ಪಗೆ ಮತ್ತೆ ವರಿಷ್ಠರ ಆಟ-ಕಾಟ

ಯಡಿಯೂರಪ್ಪಗೆ ಮತ್ತೆ ವರಿಷ್ಠರ ಆಟ-ಕಾಟ

ಜತೆಗೆ, ಒಂದು ವೇಳೆ ತಾವೂ ಗೆದ್ದು, ಬಿಜೆಯೂ ಗೆದ್ದು ಅಧಿಕಾರಕ್ಕೆ ಬಂದರೆ ತಮ್ಮ ಮೇಲಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಮುಂದಿಟ್ಟುಕೊಂದೆ ವರಿಷ್ಠರು ಮತ್ತೆ ತಮಗೆ ಆಟವಾಡಿಸುತ್ತಾರೆ. ಅಂದರೆ ಸಂಪುಟಕ್ಕೆ ತಮ್ಮನ್ನು ತೆಗೆದುಕೊಳ್ಳುವುದಿಲ್ಲ. ಅಲ್ಲಿಗೆ ಬರಿ ಎಂಪಿಯಾಗಿಯಷ್ಟೇ ಉಳಿಯಬೇಕು ಎಂಬ ಎಣಿಕೆಯಲ್ಲಿ ಯಡಿಯೂರಪ್ಪ ಅವರು ತಾವು ಗೆಲ್ಲುವುದೇ ಬೇಡವೆಂದು ಕೈಚೆಲ್ಲಿ ಕುಳಿತಿದ್ದಾರಂತೆ.

ಕಾಂಗ್ರೆಸ್ ಖಚಿತ ಗೆಲುವು ಸಾಧಿಸುವ 9 ಕ್ಷೇತ್ರಗಳು ಇಂತಿವೆ:

ಕಾಂಗ್ರೆಸ್ ಖಚಿತ ಗೆಲುವು ಸಾಧಿಸುವ 9 ಕ್ಷೇತ್ರಗಳು ಇಂತಿವೆ:

ಬೆಂಗಳೂರು ಗ್ರಾಮಾಂತರ (ಡಿಕೆ ಸುರೇಶ್), ಮಂಡ್ಯ (ರಮ್ಯಾ), ಮೈಸೂರು (ಎಚ್ ವಿಶ್ವನಾಥ್), ಚಾಮರಾಜನಗರ (ಧ್ರುವನಾರಾಯಣ), ಉಡುಪಿ-ಚಿಕ್ಕಮಗಳೂರು (ಜಯಪ್ರಕಾಶ್ ಹೆಗ್ಡೆ), ಕೋಲಾರ (ಕೆಎಚ್ ಮುನಿಯಪ್ಪ), ಬೀದರ್ (ಧರಂ ಸಿಂಗ್), ಗುಲ್ಬರ್ಗ (ಮಲ್ಲಿಕಾರ್ಜುನ ಖರ್ಗೆ) ಮತ್ತು ರಾಯಚೂರು (ಬಿವಿ ನಾಯ್ಕ್).

ಬಿಜೆಪಿ ಖಚಿತ ಗೆಲುವು ಸಾಧಿಸುವ 8 ಕ್ಷೇತ್ರಗಳು ಇಂತಿವೆ:

ಬಿಜೆಪಿ ಖಚಿತ ಗೆಲುವು ಸಾಧಿಸುವ 8 ಕ್ಷೇತ್ರಗಳು ಇಂತಿವೆ:

ಬೆಂಗಳೂರು ಉತ್ತರ (ಸದಾನಂದ ಗೌಡ), ಧಾರವಾಡ (ಪ್ರಹ್ಲಾದ ಜೋಶಿ), ಬೆಳಗಾವಿ (ಸುರೇಶ್ ಅಂಗಡಿ), ಬಳ್ಳಾರಿ (ಶ್ರೀರಾಮುಲು), ತುಮಕೂರು (ಜಿಎಸ್ ಬಸವರಾಜ್), ಹಾವೇರಿ (ಶಿವಕುಮಾರ್ ಉದಾಸಿ), ಬಿಜಾಪುರ (ರಮೇಶ್ ಜಿಗಜಿಣಗಿ) ಮತ್ತು ಬಾಗಲಕೋಟೆ (ಪಿಸಿ ಸಿದ್ದನಗೌಡರ್).

ಜೆಡಿಎಸ್ ಖಚಿತ ಗೆಲುವು ಸಾಧಿಸುವ 3 ಕ್ಷೇತ್ರಗಳು ಇಂತಿವೆ:

ಜೆಡಿಎಸ್ ಖಚಿತ ಗೆಲುವು ಸಾಧಿಸುವ 3 ಕ್ಷೇತ್ರಗಳು ಇಂತಿವೆ:

ಹಾಸನ (ಎಚ್ ಡಿ ದೇವೇಗೌಡ), ಚಿಕ್ಕಬಳ್ಳಾಪುರ (ಎಚ್ ಡಿ ಕುಮಾರಸ್ವಾಮಿ) ಮತ್ತು ಶಿವಮೊಗ್ಗ (ಗೀತಾ ಶಿವರಾಜ್ ಕುಮಾರ್)

English summary
Lok Sabha elections 2014: Karnataka Intelligence Bureau's first poll survey predictions is out. According to the report sure win for congress in 9 constituencies, sure win for BJP in 8 constituencies and JDS will win 3 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X